ಇದರಿಂದ ಕೊನೆಯ ಚುನಾವಣೆ ಅಂತ ಹೇಳಿ ಗೆದ್ದು ಬಂದಿರುವ ಕೆಲ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ. ಸಚಿವರಾಗಿ ಅವಧಿ ಮುಗಿಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ಇಂತಹವರಿಗೆ ಸಚಿವಗಿರಿ ಕೊಟ್ಟು ಪ್ರಯೋಜನವೇನು ಎಂಬ ಪ್ರಶ್ನೆಯನ್ನು ಮುಂದಿಟ್ಟಿರುವ ಡಿಕೆ ಶಿವಕುಮಾರ್, ಹಿರಿಯರ ಬದಲು ಯುವಕರಿಗೆ ಅವಕಾಶ ಕೊಡಿ. ಹಿರಿಯ ನಾಯಕರಿಗೆ ತಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಅವಕಾಶ ನೀಡಿದಂತೆ ಆಗುತ್ತದೆ ಎಂದು ಹೈಕಮಾಂಡ್ಗೆ ಮನವಿ ಮಾಡಿದ್ದಾರಂತೆ.