Karnataka Budget 2023: ಡಿಕೆಶಿ ತವರು ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ, ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ!

ಚುನಾವಣಾ ಹೊಸ್ತಿಲಲ್ಲಿ ರಾಜ್ಯ ಬಜೆಟ್​ ಬಿಜೆಪಿ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ. ಎಲ್ಲಾ ವರ್ಗದ ಜನರನ್ನು ಓಲೈಸುವ ಕಸರತ್ತಿನ ಜೊತೆ ವಿಪಕ್ಷಗಳಿಗೂ ಹೊಡೆತ ನೀಡುವ ಆಯವ್ಯಯ ಮಂಡನೆ ಅಗತ್ಯವಾಗಿತ್ತು. ಹೀಗಿರುವಾಗ ರಾಜ್ಯದ ಜನತೆಗೆ ಈ ಬಾರಿ ಬಜೆಟ್​ನಲ್ಲಿ ಅನೇಕ ಸೌಲಭ್ಯಗಳು ದೊರೆಯುವ ನಿರೀಕ್ಷೆ ಮಾಡಲಾಗಿತ್ತು. ಇದೀಗ ಬಜೆಟ್​ ಮಂಡನೆಯಾಗಿದ್ದು ನಿರೀಕ್ಷೆಯಂತೆ ಎಲ್ಲಾ ವರ್ಷದ ಜನರನ್ನು ಓಲೈಸಲು ಸರ್ಕಾರ ಯತ್ನಿಸಿದೆ. ಇದರೊಂದಿಗೆ ಹಿಂದುತ್ವದ ಅಸ್ತ್ರ ಪ್ರಯೋಗಕ್ಕೂ ಮುಂದಾಗಿರುವುದು ಸ್ಪಷ್ಟವಾಗಿದೆ.

First published:

  • 19

    Karnataka Budget 2023: ಡಿಕೆಶಿ ತವರು ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ, ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ!

    ಹೌದು ಈಗಾಗಲೇ ಕೇಳಿ ಬಂದಿದ್ದ ಬೇಡಿಕೆ ಬಜೆಟ್​ನಲ್ಲಿ ಘೋಷಣೆಯಾಗಿದ್ದು, ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಗಲಿದೆ.

    MORE
    GALLERIES

  • 29

    Karnataka Budget 2023: ಡಿಕೆಶಿ ತವರು ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ, ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ!

    ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಎಂದಿನಂತೆ ಹಿಂದುತ್ವ ಪ್ರಯೋಗಕ್ಕೆ ಮುಂದಾಗಿದೆ. ಅದರಲ್ಲೂ ಈ ಬಾರಿ ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಈ ದಾಳ ಎಸೆಯಲು ಹೆಜ್ಜೆ ಇಟ್ಟಿದೆ. ಜೊತೆಗೆ ಅತ್ತ ಕೆಪಿಸಿಸಿ ಅಧ್ಯಕ್ಷರಿಗೂ ಪರೋಕ್ಷ ಹೊಡೆತ ನೀಡಿದ್ದಾರೆ.

    MORE
    GALLERIES

  • 39

    Karnataka Budget 2023: ಡಿಕೆಶಿ ತವರು ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ, ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ!

    ಹೌದು ಈ ಬಾರಿಯ ಬಜೆಟ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್​ ಅವರ ತವರು ಜಿಲ್ಲೆ ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣದ ಘೋಷಣೆ ಮಾಡಲಾಗಿದೆ. ಈ ವಿಚಾರದಲ್ಲಿ ಬುದ್ಧಿವಂತಿಕೆಯ ಹೆಜ್ಜೆ ಇಟ್ಟಿರುವ ಸರ್ಕಾರ ಇದಕ್ಕಾಗಿ ಅನುದಾನ ಎಷ್ಟು ಎಂಬ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.

    MORE
    GALLERIES

  • 49

    Karnataka Budget 2023: ಡಿಕೆಶಿ ತವರು ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ, ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ!

    ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಿರುವಾಗ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಬಿಜೆಪಿ ಟಾರ್ಗೆಟ್​ ಲಿಸ್ಟ್​ ಸೇರಿತ್ತು. ಇದಕ್ಕೆ ಇಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ತನ್ನ ಗಟ್ಟಿ ಹಿಡಿತ ಹೊಂದಿರುವುದು ಪ್ರಮುಖ ಕಾರಣವಾಗಿತ್ತು.

    MORE
    GALLERIES

  • 59

    Karnataka Budget 2023: ಡಿಕೆಶಿ ತವರು ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ, ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ!

    ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ಶಕ್ತಿ ಕುಗ್ಗಿಸಲು ಸೂಕ್ತ ಯೋಜನೆ ಮಾಡಿರುವ ಬಿಜೆಪಿ, ರಾಮನಗರವನ್ನು ದಕ್ಷಿಣದ ಅಯೋಧ್ಯೆಯಾಗಿ ಪರಿವರ್ತಿಸಲು ಮೊದಲ ಮೊಳೆ ಹೊಡೆದಿದೆ.

    MORE
    GALLERIES

  • 69

    Karnataka Budget 2023: ಡಿಕೆಶಿ ತವರು ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ, ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ!

    ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಮತದಾರರನ್ನು ಸೆಳೆಯುವುದರ ಜೊತೆ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಹಾದಿ ಮಾಡಿಕೊಡುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ವಿಶೇಷವಾಗಿ ಇದು ಡಿಕೆಶಿ ತವರು ಜಿಲ್ಲೆಯಾಗಿರುವುದರಿಂದ ಮತ್ತಷ್ಟು ವಿವಾದ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

    MORE
    GALLERIES

  • 79

    Karnataka Budget 2023: ಡಿಕೆಶಿ ತವರು ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ, ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ!

    ಈ ಮೊದಲು ಕಪಾಲಿ ಬೆಟ್ಟದ ಮೇಲೆ ಏಸು ಏಸು ಪ್ರತಿಮೆ ವಿಚಾರವಾಗಿ ತಲೆಧೋರಿದ್ದ ವಿವಾದವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿತ್ತು. ಸಂಘದ ಮುಖಂಡರೇ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದರು. ಇದೀಗ ಅದಕ್ಕೆ ಕೌಂಟರ್ ಆಗಿ ರಾಮ ಬೆಟ್ಟದಲ್ಲಿ ರಾಮಮಂದಿರ ಸ್ಥಾಪನೆ ಮಾಡುವ ಮೂಲಕ ಕೌಂಟರ್ ಕೊಡುವ ಉದ್ದೇಶವೂ ಬಿಜೆಪಿಯದ್ದು.

    MORE
    GALLERIES

  • 89

    Karnataka Budget 2023: ಡಿಕೆಶಿ ತವರು ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ, ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ!

    ಈ ವರ್ಷದ ಆರಂಭದಲ್ಲಿ, ಕರ್ನಾಟಕ ಉನ್ನತ ಶಿಕ್ಷಣ ಸಚಿವ ಸಿಎನ್ ಅಶ್ವಥ್ ನಾರಾಯಣ್ ಅವರು ಅಯೋಧ್ಯೆ ಮಂದಿರ ನಿರ್ಮಾಣದ ಬಗ್ಗೆ ಸುಳಿವು ನೀಡಿದ್ದು, 2023 ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಮೂಲಗಳ ಪ್ರಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ದೇವಾಲಯದ ಉದ್ಘಾಟನೆಗೆ ಆಹ್ವಾನಿಸಲಾಗುತ್ತದೆ.

    MORE
    GALLERIES

  • 99

    Karnataka Budget 2023: ಡಿಕೆಶಿ ತವರು ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ, ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗ!

    ಒಟ್ಟಾರೆಯಾಗಿ ಈ ಬಾರಿಯ ಬಜೆಟ್​ನಲ್ಲಿ ಜನಪ್ರಿಯ ಘೋಷಣೆಗಳನ್ನು ಮಾಡಿರುವ ಬಿಜೆಪಿ, ಪರೋಕ್ಗಷವಾಗಿ ಜೆಡಿಎಸ್​ ಹಾಘೂ ಕಾಂಗ್ರೆಸ್​ ಭದ್ರಕೋಟೆಗಳಿಗೆ ನುಗ್ಗಲೂ ಪ್ಲಾನ್​ ರೂಪಿಸಿದೆ ಎಂಬುವುದು ಸ್ಪಷ್ಟ.

    MORE
    GALLERIES