ಆರೋಗ್ಯ ಕ್ಷೇತ್ರದ ಮೇಲೆ ಬಜೆಟ್ ಕೇಂದ್ರೀಕರಿಸುವ ನಿರೀಕ್ಷೆಯಿದೆ. ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ, ವೈನ್ ಪಾರ್ಕ್ ಸ್ಥಾಪನೆ, ತೊರ್ವಿಯಲ್ಲಿ ಒಣದ್ರಾಕ್ಷಿ ಸಂಸ್ಕರಣಾ ಘಟಕ, ಬಾಗಲಕೋಟೆಯಲ್ಲಿ ತೋಟಗಾರಿಕಾ ಕಾಲೇಜು ಮತ್ತು ಬಾಗಲಕೋಟೆಯಲ್ಲಿ ಕೆಐಎಡಿಬಿ ಕೈಗಾರಿಕಾ ವಸಾಹತು ಸ್ಥಾಪನೆ ಮುಂತಾದ ಬೇಡಿಕೆಗಳನ್ನು ವಿಜಯಪುರದ ಜನಪ್ರತಿನಿಧಿಗಳು ಮುಂದಿಟ್ಟಿದ್ದಾರೆ.