ರಾಜಕೀಯ ವಿಶ್ಲೇಷಣೆಯಲ್ಲಿ,ಪ್ರಸ್ತುತ ರಾಜ್ಯದಲ್ಲಿನ ಹೆಚ್ಚಿನ ಮತದಾನವು ಮತದಾರರು ಅಧಿಕಾರದಲ್ಲಿರುವ ಸರ್ಕಾರವನ್ನು ಬದಲಾಯಿಸಲು ಉತ್ಸುಕರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಇನ್ನು ಬುಧವಾರ ಬಿಡುಗಡೆಯಾಗಿರುವ ಎಕ್ಸಿಟ್ ಪೋಲ್ ವರದಿಗಳ ಪ್ರಕಾರ ರಾಜ್ಯದಲ್ಲಿ ಯಾವುದೇ ಪಕ್ಷ ಬಹುಮತ ಪಡೆಯುವ ಸಾಧ್ಯತೆ ಕಡಿಮೆ ಇದೆ. ಆದರೆ ಕಾಂಗ್ರೆಸ್ ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ತಿಳಿಸಿದೆ.