ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, 31 ನೇ ತಾರೀಖು ವಾಟಾಳ್ ನಾಗರಾಜ್ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದಾರೆ. ಅದರ ಹಿಂದಿನ ದಿನ ನಾವು ಪ್ರತಿಭಟನೆ ಮಾಡಲಿದ್ದೇವೆ. ಬೆಳಗಾವಿ ವಿಚಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇವತ್ತು ಹೋರಾಟ ಮಾಡ್ತಾ ಇಲ್ಲ. ಬೆಳಗಾವಿಯ ರಕ್ಷಣೆಗಾಗಿ ಬಹಳ ಬಲಿಷ್ಟವಾಗಿ ನಾವು ನಿಂತಿದ್ದೇವೆ ಎಂದು ಹೇಳಿದರು.