Karnataka Bandh on 31st December : ಕಳೆದ ಕೆಲ ದಿನಗಳಿಂದ ಕನ್ನಡಿಗರನ್ನು ಕೆರಳಿಸಿರುವ MES, ಮರಾಠಿಗರ ಪುಂಡಾಟವನ್ನು ಖಂಡಿಸಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಡಿಸೆಂಬರ್ 31ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ವರ್ಷದ ಕೊನೆ ದಿನ ಇಡೀ ಕರ್ನಾಟಕ ಸ್ತಬ್ಧವಾಗುವ ನಿರೀಕ್ಷೆ ಇದೆ. ಹಾಗಾದರೆ ಮುಂದಿನ ಶುಕ್ರವಾರ ಏನಿರುತ್ತೆ? ಏನಿರಲ್ಲ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಈಗಾಗಲೇ ಹಲವು ಸಂಘ-ಸಂಸ್ಥೆಗಳು ಬೆಂಬಲ ಘೋಷಿಸಿದೆ. ಡಿ.31ರಂದು ಲಾರಿ, ಓಲಾ- ಊಬರ್ ಸೌಲಭ್ಯ ಸಿಗುವುದಿಲ್ಲ. (ವಾಟಾಳ್ ನಾಗರಾಜ್)
2/ 5
ಕರ್ನಾಟಕ ಲಾರಿ ಟ್ರೇಡರ್ಸ್ ಯೂನಿಯನ್, ಆದರ್ಶ ಆಟೋ ಯೂನಿಯನ್, ಓಲಾ ಊಬರ್ ಚಾಲಕ & ಮಾಲೀಕರ ಸಂಘ, ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘ ಈಗಾಗಲೇ ಬಂದ್ ಗೆ ಬೆಂಬಲ ನೀಡಿವೆ. ಡಿ.31ರಂದು ಓಲಾ-ಊಬರ್ ವಾಹನಗಳು ಸಿಗಲ್ಲ. ಹೊಸ ವರ್ಷಾಚರಣೆ ತಯಾರಿಯಲ್ಲಿರುವವರು ಈ ಬಗ್ಗೆ ಗಮನ ಹರಿಸಲೇಬೇಕು. (ಸಾಂದರ್ಭಿಕ ಚಿತ್ರ)
3/ 5
ಆದರೆ ಕೆಲವು ಸಂಸ್ಥೆಗಳು ಇನ್ನು ಬಂದ್ ಗೆ ಬೆಂಬಲ ನೀಡಿಲ್ಲ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಪೀಸ್ ಆಟೋ ಅಸೋಸಿಯೇಶನ್, ಬೆಂಗಳೂರು ಫೆಡರೇಷನ್ ಆಫ್ ಅಪಾರ್ಟ್ಮೆಟ್ಸ್, ಮಂಗಳೂರು ಲೋಕಲ್ ಬಸ್ ಸರ್ವೀಸ್ ಅಸೋಸಿಯೇಶನ್, ಬೆಂಗಳೂರು ಮಾಲ್ ಅಸೋಸಿಯೇಶನ್ ಬೆಂಬಲ ನೀಡಿಲ್ಲ. (ಸಾಂದರ್ಭಿಕ ಚಿತ್ರ)
4/ 5
ಈ ಹಿನ್ನೆಲೆಯಲ್ಲಿ ಡಿ.31ರಂದು ಹೋಟೆಲ್ ಗಳು, ಮಾಲ್ ಗಳು, ಕೆಲ ಆಟೋಗಳು, ಖಾಸಗಿ ಬಸ್ ಗಳು ಸಾರ್ವಜನಿಕರ ಸೇವೆಗೆ ಲಭ್ಯವಿರಲಿದೆ. (ಸಾಂದರ್ಭಿಕ ಚಿತ್ರ)
5/ 5
ಇಂದು ರಾಜ್ಯ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಇನ್ನೂ ಹಲವು ಸಂಘ-ಸಂಸ್ಥೆಗಳು ಕೈ ಜೋಡಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಾಗಿ ಡಿ.31ರಂದು ತುರ್ತು ಕೆಲಸಗಳನ್ನು ಮುಂದೂಡುವುದು ಇಲ್ಲವೇ ಮೊದಲೇ ಮುಗಿಸಿಕೊಳ್ಳುವುದು ಒಳಿತು.