Karnataka Elections: ಗುಂಡೈಕ್ಳೇ ಗಮನಿಸಿ, ಎರಡಲ್ಲ ನಾಲ್ಕು ದಿನ ಎಣ್ಣೆ ಬಂದ್!
ರಾಜ್ಯಾದ್ಯಂತ ಚುನಾವಣಾ ಕಾವು ರಂಗೇರಿದೆ. ಮತದಾರರ ಗಮನ ಸೆಳೆಯಲು ರಾಜಕೀಯ ನಾಯಕರು ನಾನಾ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಆದರೀಗ ಈ ಚುನಾವಣಾ ಭರಾಟೆ ಮಧ್ಯೆ ಎಣ್ಣೆ ಪ್ರಿಯರಿಗೆ ಶಾಕಿಂಗ್ ಸುದ್ದಿ ಬಂದಿದೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಇಂದು, ಮೇ 8ರಿಂದ ಸಂಜೆ 5 ಗಂಟೆಯಿಂದ ಪಬ್, ಬಾರ್, ಎಂಆರ್ಪಿ ಔಟ್ಲೇಟ್ಗಳು ಬಂದ್ ಆಗಲಿವೆ. ಬಳಿಕ ಮಧ್ಯ ಮಾರಾಟಕ್ಕೆ ಅವಕಾಶ ಇಲ್ಲ.
2/ 9
ಮೇ 8ರಿಂದ ಮೇ 10ರ ಮಧ್ಯರಾತ್ರಿಯವರೆಗೂ ಮದ್ಯ ಸಿಗುವುದಿಲ್ಲ. ಮೇ 10ರಂದು ಕರ್ನಾಟಕದಲಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಮತದಾನದ ಒಂದು ದಿನ ಮೊದಲೇ ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಲಾಗುತ್ತದೆ.
3/ 9
ಇನ್ನು ಮೇ 13ರಂದು ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟ ಬಂದ್ ಆಗಲಿದೆ.
4/ 9
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಬಕಾರಿ ಇಲಾಖೆ ಹಾಗೂ ಚುನಾವಣಾ ಆಯೋಗದಿಂದ ಬಾರ್ ಮಾಲೀಕರಿಗೆ ಪತ್ರ ನೀಡಲಾಗಿದ್ದು, ಮದ್ಯ ಮಾರಾಟ ಮಾಡದಂತೆ ಆದೇಶ ಹೊರಡಿಸಲಾಗಿದೆ.
5/ 9
ಇಂದು ಸಂಜೆ 5 ಗಂಟೆಗೆ ಸರಿಯಾಗಿ ಬಾರ್, ಪಬ್, ಎಂಆರ್ಪಿ ಔಟ್ಲೆಟ್ ಮುಚ್ಚುವಂತೆ ಸೂಚನೆ ನೀಡಲಾಗಿದ್ದು, ಶೇ 20 ರಷ್ಟು ಮಾತ್ರ ಮಧ್ಯ ಸ್ಟಾಕ್ನಲ್ಲಿ ಪೂರೈಕೆ ಮಾಡುವಂತೆ ಸೂಚಿಸಲಾಗಿದೆ.
6/ 9
ಚುನಾವಣಾ ಆಯೋಗದ ಈ ಸೂಚನೆಯಿಂದ ಬಾರ್, ಪಬ್, ಎಂಆರ್ಪಿಗಳಲ್ಲಿ ಮಧ್ಯ ಕೊರತೆ ಉಂಟಾಗಿದ್ದು, ಎಣ್ಣೆ ಪ್ರಿಯರು ಪರದಾಡಲಾರಂಭಿಸಿದ್ದಾರೆ.
7/ 9
ಕರ್ನಾಟಕ ಗಡಿನಾಡು ಮಹಾರಾಷ್ಟ್ರದ ಲಾತೂರ್ನಲ್ಲೂ ಮದ್ಯ ಮಾರಾಟಕ್ಕೆ ಬ್ರೇಕ್ ಬೀಳಲಿದೆ. ಇಲ್ಲಿನ ನಿಲಂಗಾ, ದೇವಾನಿ ಹಾಗೂ ಉದ್ಗಿರ್ ತಾಲ್ಲೂಕುಗಳಲ್ಲಿ ಮದ್ಯ ನಿಷೇಧ ಅನ್ವಯವಾಗುತ್ತೆ. ನಯಮಗಳ ಅನ್ವಯ ಗಡಿಯಿಂದ 5 ಕಿಮೀ ವ್ಯಾಪ್ತಿಯ ಅನ್ಯ ರಾಜ್ಯಗಳಲ್ಲೂ ಮದ್ಯ ಮಾರಾಟ ಮಾಡುವಂತಿಲ್ಲ.
8/ 9
ಇನ್ನು ನಿನ್ನೆಯಿಂದಲೇ ಜನರು ಮದ್ಯವನ್ನು ಸ್ಟಾಕ್ ತಗೆದುಕೊಳ್ಳಲು ಶುರು ಮಾಡಿದ್ದಾರೆ. ಹೀಗಾಗಿ ಹಲವೆಡೆ ಎಣ್ಣೆ ಕೊರತೆ ಉಂಟಾಗಿದೆ.
9/ 9
ಚುನಾವಣೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕ್ರಮಕೈಗೊಳ್ಳಲಾಗಿದೆ. ಮದ್ಯ ಮಾರಾಟಕ್ಕೂ ಮುನ್ನ ಭಾರೀ ಪ್ರಮಾಣದ ಮದ್ಯವನ್ನು ಖರೀದಿ ಮಾಡಿ ಸಂಗ್ರಹಿಸಿ ಇಟ್ಟುಕೊಳ್ಳುವವರ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದಾರೆ.
First published:
19