Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ

ನಾಳೆ ಅಂದರೆ ಮೇ 13ರ ಬೆಳಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ಶುರುವಾಗಲಿದ್ದು, ಬೆಂಗಳೂರಿನ 28 ಕ್ಷೇತ್ರಗಳ ಮತ ಎಣಿಕೆಗೆ ಸಕಲ ಸಿದ್ಧತೆ ಶುರುವಾಗಿದೆ.

  • News18 Kannada
  • |
  •   | Bangalore [Bangalore], India
First published:

  • 19

    Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ

    ಬೆಂಗಳೂರು: ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ನಾಳೆ ಪ್ರಕಟವಾಗಲಿರುವ ಫಲಿತಾಂಶದ ಮೇಲೆ ಎಲ್ಲರ ಆಸಕ್ತಿ ನೆಟ್ಟಿದೆ. ಬೆಂಗಳೂರಿನ 28 ಕ್ಷೇತ್ರಗಳ ಮತ ಎಣಿಕೆಗೆ ಚುನಾವಣಾ ಆಯೋಗ 4 ಕಡೆ ಸ್ಟ್ರಾಂಗ್ ರೂಮ್ ನಿರ್ಮಾಣ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ

    ಬೆಂಗಳೂರು ಸೆಂಟ್ರಲ್ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಬಸವನಗುಡಿಯ ಬಿಎಂಎಸ್ ಕಾಲೇಜು, ಬೆಂಗಳೂರು ದಕ್ಷಿಣ ಕ್ಷೇತ್ರಗಳಿಗೆ ಜಯನಗರದ SSM RV ಕಾಲೇಜು, ಬೆಂಗಳೂರು ಉತ್ತರ ಕ್ಷೇತ್ರಗಳಿಗೆ ವಸಂತನಗರದ ಮೌಂಟ್ ಕಾರ್ಮಲ್ ಕಾಲೇಜು ಹಾಗೂ ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳನ್ನು ಸೆಂಟ್ ಜೋಸೆಫ್ ಕಾಲೇಜ್ ನಲ್ಲಿ ಸ್ಟ್ರಾಂಗ್ ರೂಮ್ ನಿರ್ಮಾಣ ಮಾಡಲಾಗಿದೆ.

    MORE
    GALLERIES

  • 39

    Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ

    ಯಾವ ವಿಭಾಗದಲ್ಲಿ ಯಾವ್ಯಾವ ಕ್ಷೇತ್ರಗಳ ಮತ ಎಣಿಕೆ ಆಗಲಿದೆ?:
    ಬೆಂಗಳೂರು ಸೆಂಟ್ರಲ್, MS ಕಾಲೇಜು, ಬಸವನಗುಡಿ: ಆರ್​​ರ್​ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ.

    MORE
    GALLERIES

  • 49

    Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ

    ಬೆಂಗಳೂರು ದಕ್ಷಿಣ, SSMRV ಕಾಲೇಜು, ಜಯನಗರ: ಗೋವಿದರಾಜ ನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, BTM ಲೇಔಟ್, ಜಯನಗರ, ಬೊಮ್ಮನಹಳ್ಳಿ.

    MORE
    GALLERIES

  • 59

    Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ

    ಬೆಂಗಳೂರು ಉತ್ತರ, ಮೌಂಟ್ ಕಾರ್ಮಲ್, ವಸಂತನಗರ; ಕೆ ಅರ್ ಪುರಂ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ, ಸರ್ವಜ್ಞ ನಗರ, C V ರಾಮನ್ ನಗರ.

    MORE
    GALLERIES

  • 69

    Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ

    ಬೆಂಗಳೂರು ನಗರ, ಸೆಂಟ್ ಜೋಸೆಫ್ ಕಾಲೇಜು, ವಿಠಲ್ ಮಲ್ಯ ರಸ್ತೆ: ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್.

    MORE
    GALLERIES

  • 79

    Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ

    ನಾಳೆ ಅಂದರೆ ಮೇ 13ರ ಬೆಳಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ಶುರುವಾಗಲಿದ್ದು, ಬೆಂಗಳೂರಿನ 28 ಕ್ಷೇತ್ರಗಳ ಮತ ಎಣಿಕೆಗೆ ಸಕಲ ಸಿದ್ಧತೆ ಶುರುವಾಗಿದೆ. ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳಿಗೆ 8,802 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಇವಿಎಂಗಳನ್ನ ಸ್ಟ್ರಾಂಗ್ ರೂಮ್​ಗಳಲ್ಲಿ ಭದ್ರ ಮಾಡಲಾಗಿದೆ.

    MORE
    GALLERIES

  • 89

    Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ

    ಪ್ರತಿ ಕ್ಷೇತ್ರದ ಮತ ಎಣಿಕೆಯ ಕೊಠಡಿಯ ಪ್ರತಿ ಟೇಬಲ್​ಗೆ ಮೈಕ್ರೋ ಅಬ್ಸರ್ವರ್ಸ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ. ಪ್ರತಿ ಕೊಠಡಿಗೆ ಸಾಮಾನ್ಯವಾಗಿ 16 ರಿಂದ 25 ಟೇಬಲ್​ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್​ಗಳಿಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆಯಿರಲಿದೆ. ಮತ ಎಣಿಕೆ ಕೇಂದ್ರದಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಸಲಾಗಿದೆ.

    MORE
    GALLERIES

  • 99

    Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ

    ರಾಜ್ಯದಲ್ಲಿ 58,285 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಬಹುತೇಕ ಅಭ್ಯರ್ಥಿಗಳು ಗೆಲುವಿನ ವಿಶ್ವಾಸದಲ್ಲಿದ್ದಾರೆ. ಆದರೆ ಅಂತಿಮವಾಗಿ ಮತದಾರ ಯಾವ ನಿರ್ಧಾರ ಮಾಡಿದ್ದಾನೆ ಅನ್ನೋದು ಶನಿವಾರ ಮಧ್ಯಾಹ್ನದ ವೇಳೆಗೆ ಹೊರ ಬೀಳಲಿದೆ. (ಸಾಂದರ್ಭಿಕ ಚಿತ್ರ) (ವರದಿ: ರಂಜನ್ ಶಿರ್ಲಾಲ್, ನ್ಯೂಸ್ 18)

    MORE
    GALLERIES