ಇದೇ ಮೊದಲ ಬಾರಿಗೆ ಸದ್ಯ 80 ವರ್ಷ ಮೇಲ್ಪಟ್ಟ ವೃದ್ಧರು, ವಿಕಲಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಇನ್ನು ಚುನಾವಣೆಯಲ್ಲಿ ಭಾಗವಹಿಸೋ ಪೊಲೀಸರು ಹಾಗು ಚುನಾವಣೆ ಸಿಬ್ಬಂದಿ ನಾಳೆಯಿಂದ ಬ್ಯಾಲೆಟ್ ಮತದಾನ ಮಾಡಲು ಅವಕಾಶವಿದೆ. ಬೆಂಗಳೂರಲ್ಲಿ 9 ಸಾವಿರದ 200 ಜನರಿಗೆ ಬ್ಯಾಲೆಟ್ ನೀಡಿ ಮತದಾನ ಮಾಡಿಸಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. (ಸಾಂದರ್ಭಿಕ ಚಿತ್ರ)
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್, ಪೋಸ್ಟಲ್ ಬ್ಯಾಲಟ್ ಮೂಲಕ ನಾವು ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಫಾರ್ಮ್ 12ಡಿ ಪ್ರಕಾರ ಅವರ ಅನುಮತಿ ಪಡೆದಿದ್ದೇವೆ. ಇದರ ಅನ್ವಯ 9,200 ಜನರಿಗೆ ಪೋಸ್ಟಲ್ ಬ್ಯಾಲೇಟ್ ಕಳುಹಿಸುತ್ತೇವೆ. ಈ ವೇಳೆ ಇಬ್ಬರು ಅಧಿಕಾರಿಗಳು, ಓರ್ವ ವಿಡಿಯೋ ಗ್ರಾಫರ್ ಸೇರಿದಂತೆ ಪೊಲೀಸರು ಸ್ಥಳದಲ್ಲಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
ಚುನಾವಣಾ ಆಯೋಗದ ಸಿಬ್ಬಂದಿಗಳು 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆ ಬಳಿ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ನೀಡಲಾಗ್ತಿದೆ. ಗೌಪ್ಯ ಮತ ಚಲಾಯಿಸುವಾಗ ಚುನಾವಣೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಹಾಜರಿರಲಿದ್ದಾರೆ. ಮನೆಯಲ್ಲೇ ಮತದಾನ ಮಾಡುವಾಗ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಮತಗಳನ್ನೂ ಮೇ 13 ರಂದು ಮತ ಏಣಿಕೆ ದಿನ ಓಪನ್ ಮಾಡಿ ಎಣಿಕೆ ಮಾಡಲಾಗುತ್ತೆ. (ಸಾಂದರ್ಭಿಕ ಚಿತ್ರ)
ಬೆಂಗಳೂರಿನ ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ಮತದಾರರಿದ್ದಾರೆ? ಕೇಂದ್ರ ವಲಯದಲ್ಲಿ 1995 ಮಂದಿ, ಉತ್ತರ ವಲಯದಲ್ಲಿ 2298, ದಕ್ಷಿಣವಲಯದಲ್ಲಿ 2530, ಡಿಸಿ ಅರ್ಬನ್ ವಿಭಾಗದಲ್ಲಿ 2329 ಸೇರಿ ಒಟ್ಟು 9152 ಮಂದಿ ಬ್ಯಾಲೆಟ್ ಪಡೆದಿದ್ದಾರೆ. ಒಟ್ಟಾರೆ 2023ರ ಚುನಾವಣೆಗೆ ನಾಳೆಯಿಂದಲೇ ಅಧಿಕೃತವಾಗಿ ಮತದಾನ ಆರಂಭವಾಗಲಿದೆ. ಈ ಬಾರಿ ಬೆಂಗಳೂರಿನಲ್ಲಿ ಶೇಕಡ 80 ರಷ್ಟು ಮತದಾನ ಸಾಧಿಸುವ ಗುರಿಯನ್ನು ಚುನಾವಣಾಧಿಕಾರಿಗಳು ಹೊಂದಿದ್ದಾರೆ. (ವರದಿ: ರಂಜನ್ ಶಿರ್ಲಾಲ್, ನ್ಯೂಸ್ 18, ಬೆಂಗಳೂರು) (ಸಾಂದರ್ಭಿಕ ಚಿತ್ರ)