Hindi Imposition: ಕರುನಾಡಲ್ಲಿ 'ದಹಿ' ದಳ್ಳುರಿ, ಸಿಡಿದೆದ್ದ ಕನ್ನಡಿಗರು!

ಕರ್ನಾಟಕದಲ್ಲೂ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಕೆಎಂಎಫ್ ಅಧಿಕಾರಿಗಳನ್ನು ಭೇಟಿ ಮಾಡಿರುವ ಹಲವು ಕನ್ನಡಪರ ಸಂಘಟನೆಗಳು, ಕರ್ನಾಟಕ ಹಾಲು ಒಕ್ಕೂಟವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆದೇಶವನ್ನು ಪಾಲಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

First published:

 • 18

  Hindi Imposition: ಕರುನಾಡಲ್ಲಿ 'ದಹಿ' ದಳ್ಳುರಿ, ಸಿಡಿದೆದ್ದ ಕನ್ನಡಿಗರು!

  ನಂದಿನಿ ಹಾಲು, ಮೊಸರು ಬಳಸುವವರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚು ಎಂದರೆ ತಪ್ಪಾಗಲ್ಲ. ಉತ್ತಮ ಗುಣಮಟ್ಟ ಸಿಗುತ್ತೆ ಅನ್ನೋ ಕಾರಣಕ್ಕೆ ಎಲ್ಲರೂ ನಂದಿನಿ ಹಾಲು, ಮೊಸರು ಬಳಸುತ್ತಾರೆ. ಆದರೆ ಇದೀಗ ನಂದಿನಿ ಮೊಸರಿನ ಪ್ಯಾಕೆಟ್​ ಕಂಡು ಕನ್ನಡಿಗರು ಕೆಂಡವಾಗಿದ್ದಾರೆ.

  MORE
  GALLERIES

 • 28

  Hindi Imposition: ಕರುನಾಡಲ್ಲಿ 'ದಹಿ' ದಳ್ಳುರಿ, ಸಿಡಿದೆದ್ದ ಕನ್ನಡಿಗರು!

  ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಮೊಸರಿನ ಪೊಟ್ಟಣದ ಮೇಲೆ ‘ದಹಿ’ ಎಂದು ಹಿಂದಿ ಪದ ಬಳಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಆದೇಶ ನೀಡಿರುವುದಕ್ಕೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

  MORE
  GALLERIES

 • 38

  Hindi Imposition: ಕರುನಾಡಲ್ಲಿ 'ದಹಿ' ದಳ್ಳುರಿ, ಸಿಡಿದೆದ್ದ ಕನ್ನಡಿಗರು!

  ಕರ್ನಾಟಕದಲ್ಲಿ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಕೂಡ ಕೆಎಂಎಫ್‌ಗೆ ನೀಡಿರುವ ಆದೇಶವನ್ನು ಖಂಡಿಸಿದ್ದು, ಯಾವುದೇ ಕಾರಣಕ್ಕೂ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

  MORE
  GALLERIES

 • 48

  Hindi Imposition: ಕರುನಾಡಲ್ಲಿ 'ದಹಿ' ದಳ್ಳುರಿ, ಸಿಡಿದೆದ್ದ ಕನ್ನಡಿಗರು!

  ಕರ್ನಾಟಕದಲ್ಲೂ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಕೆಎಂಎಫ್ ಅಧಿಕಾರಿಗಳನ್ನು ಭೇಟಿ ಮಾಡಿರುವ ಹಲವು ಕನ್ನಡಪರ ಸಂಘಟನೆಗಳು, ಕರ್ನಾಟಕ ಹಾಲು ಒಕ್ಕೂಟವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆದೇಶವನ್ನು ಪಾಲಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

  MORE
  GALLERIES

 • 58

  Hindi Imposition: ಕರುನಾಡಲ್ಲಿ 'ದಹಿ' ದಳ್ಳುರಿ, ಸಿಡಿದೆದ್ದ ಕನ್ನಡಿಗರು!

  ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವಿಜ್ಞಾನ ಮತ್ತು ಗುಣಮಟ್ಟದ ಜಂಟಿ ನಿರ್ದೇಶಕರು ಹೊರಡಿಸಿದ ಪತ್ರದಲ್ಲಿ, “ದಹಿ ಉತ್ಪನ್ನಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸುವ ಸಂದರ್ಭದಲ್ಲಿ, ದಹಿ ಪದ ಮುಖ್ಯವಾಗಿರಬೇಕು.

  MORE
  GALLERIES

 • 68

  Hindi Imposition: ಕರುನಾಡಲ್ಲಿ 'ದಹಿ' ದಳ್ಳುರಿ, ಸಿಡಿದೆದ್ದ ಕನ್ನಡಿಗರು!

  ಪ್ರಚಲಿತ ಪ್ರಾದೇಶಿಕ ಸಾಮಾನ್ಯ ಹೆಸರುಗಳಾದ ಮೊಸರು, ತೈರ್, ಪೆರುಗು ಮುಂತಾದ ಸಮಾನ ಹೆಸರುಗಳನ್ನು ಆವರಣದಲ್ಲಿ ಬಳಸಬೇಕು” ಎಂದು ತಿಳಿಸಲಾಗಿದೆ.

  MORE
  GALLERIES

 • 78

  Hindi Imposition: ಕರುನಾಡಲ್ಲಿ 'ದಹಿ' ದಳ್ಳುರಿ, ಸಿಡಿದೆದ್ದ ಕನ್ನಡಿಗರು!

  ಈ ಆದೇಶದ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಪ್ರಾಧಿಕಾರವು ಕಡ್ಡಾಯವಾಗಿ ದಹಿ ಅಂತ ಬಳಸಲೇಬೇಕು ಎಂಬ ಆದೇಶ ಮಾಡಿದೆ.

  MORE
  GALLERIES

 • 88

  Hindi Imposition: ಕರುನಾಡಲ್ಲಿ 'ದಹಿ' ದಳ್ಳುರಿ, ಸಿಡಿದೆದ್ದ ಕನ್ನಡಿಗರು!

  ಇಂದು ದಹಿ,ನಾಳೆ ನಂದಿನಿ ದೂದ್,ನಂದಿನಿ ಪಾನಿ ಅಂದುಕೊಂಡು ಎಲ್ಲದಕ್ಕೂ ಹಿಂದಿ ಕಡ್ಡಾಯ ಮಾಡಿ ಕಡೆಗೆ ಕನ್ನಡವನ್ನೇ ಇಲ್ಲವಾಗಿಸೋ ಹುನ್ನಾರವಾಗಿದೆ ಎಂದು ರೂಪೇಶ್​ ರಾಜಣ್ಣ ಆರೋಪಿಸಿದ್ದಾರೆ.

  MORE
  GALLERIES