Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

ನಮೀಬಿಯಾದಿಂದ (Namibia) ಬಂದಿರುವ ಎಂಟು ಚಿರತೆಗಳು ಮಧ್ಯ ಪ್ರದೇಶದ ಕುನೋ (kuno national park) ರಾಷ್ಟ್ರೀಯ ಉದ್ಯಾನವನದಲ್ಲಿವೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಿರತೆಗಳನ್ನು ಬಿಡುಗಡೆ ಮಾಡಿದರು. ಈಗ 748 ಚದರ ಕಿಲೋಮೀಟರ್‌ಗಳಲ್ಲಿ ಹರಡಿರುವ ಕುನೋ ಪಾಲ್ಪುರ್ ರಾಷ್ಟ್ರೀಯ ಉದ್ಯಾನವನವು 8 ಆಫ್ರಿಕನ್ ಚಿರತೆಗಳ ಹೊಸ ನೆಲೆಯಾಗಲಿದೆ.

First published:

 • 110

  Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

  ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚಿರತೆಗಳು ಪ್ರಯಾಣ ತುಂಬಾನೇ ರೋಚಕವಾಗಿತ್ತು. ಯಾವುದೇ ಅಪಾಯವಾಗದಂತೆ ಚಿರತೆಗಳನ್ನು ಭಾರತಕ್ಕೆ ಕರೆತರುವಲ್ಲಿ ಕನ್ನಡಿಗ (Kannadiga) ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ ಡಾ.ಸನತ್ ಕೃಷ್ಣ ಮುಳಿಯ (Sanat Krishna Muliya) ಅವರ ಶ್ರಮ ಇದೆ.

  MORE
  GALLERIES

 • 210

  Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

  ಸನತ್ ಕೃಷ್ಣ ಮೂಲತಃ ಪುತ್ತೂರು (Putturu) ಪರಿಸರದ ನಿವಾಸಿಗಳು. ಸದ್ಯ ದೆಹಲಿಯ ಪರಿಸರ ಸಚಿವಾಲಯದಲ್ಲಿ ಪಶುವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. (ಫೋಟೋ ಕೃಪೆ; Facebook)

  MORE
  GALLERIES

 • 310

  Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

  ವಿವೇಕಾನಂದ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಸನತ್, ನಂತರ ಬೆಂಗಳೂರಿನ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿದ್ದಾರೆ. (ಫೋಟೋ ಕೃಪೆ; Facebook)

  MORE
  GALLERIES

 • 410

  Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

  The Hans India ಜೊತೆ ಸನತ್ ಅವರ ಚಿಕ್ಕಪ್ಪ ಕೇಶವ ಪ್ರಸಾದ್ ಮಾತನಾಡಿದ್ದಾರೆ. ಸನತ್ ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿ. ಆತನಿಗೆ ಪ್ರಾಣಿಗಳಂದ್ರೆ ತುಂಬಾ ಇಷ್ಟ. ಮನೆಯಲ್ಲಿದ್ದ ನಾಯಿಗಳನ್ನು ತುಂಬಾನೇ ಪ್ರೀತಿಯಿಂದ ಸಾಕಿದ್ದನು. ಸನತ್ ನಮ್ಮ ಕುಟುಂಬದನು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ ಅಂತ ಸಂತೋಷ ವ್ಯಕ್ತಪಡಿಸುತ್ತಾರೆ. (ಫೋಟೋ ಕೃಪೆ; Facebook)

  MORE
  GALLERIES

 • 510

  Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

  ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಡಾ.ಪ್ರಸನ್ನ ರೈ ಅವರು ಸನತ್ ಅವರನ್ನು ಇನ್ನು ಮರೆತಿಲ್ಲ. ಸನತ್ ಪ್ರಾಣಿಗಳ ಮೇಲೆ ನಿಜವಾದ ಪ್ರೀತಿ ಹೊಂದಿದ್ದ ವಿದ್ಯಾರ್ಥಿ. ಹುಲಿಯನ್ನು ಲೈವ್ ಆಗಿ ಸೆರೆ ಹಿಡಿದಿರೋದು  ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. (ಫೋಟೋ ಕೃಪೆ; Facebook)

  MORE
  GALLERIES

 • 610

  Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

  ಚೀತಾಗಳ ಜೊತೆಗೆ, ಕುನೋ ಪಾರ್ಕ್ ಹುಲಿಗಳು, ಸಿಂಹಗಳು ಮತ್ತು ಚಿರತೆಗಳ ನೆಲೆಯಾಗಿದೆ. ಈ ಕಾಡಿನಲ್ಲಿ ಚಿರತೆಗಳಿವೆ. ಪ್ರತಿ 100 ಚದರ ಕಿಲೋಮೀಟರ್‌ಗೆ ಸುಮಾರು 9 ಚಿರತೆಗಳು ಇಲ್ಲಿ ಕಂಡುಬರುತ್ತವೆ. (ಫೋಟೋ ಕೃಪೆ; Facebook)

  MORE
  GALLERIES

 • 710

  Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

  ಉಪಗ್ರಹದ ಮೂಲಕ ನಿಗಾವಹಿಸಲು ಎಲ್ಲಾ ಚಿರತೆಗಳ ಮೇಲೆ ರೇಡಿಯೋ ಕಾಲರ್ಗಳನ್ನು ಕಟ್ಟಲಾಗಿದೆ. ಪ್ರತಿ ಚಿರತೆಯ ಹಿಂದೆ ಒಂದು ಮೇಲ್ವಿಚಾರಣಾ ತಂಡವನ್ನು ಮೀಸಲು ಇರಿಸಲಾಗಿದೆ, ಇದು ಗಡಿಯಾರದ ಸುತ್ತ ಅವುಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡುತ್ತದೆ. (ಫೋಟೋ ಕೃಪೆ; Facebook)

  MORE
  GALLERIES

 • 810

  Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

  ಭಾರತಕ್ಕೆ ಹೇಗೆ ಬಂದಿವೆ?

  ಆಫ್ರಿಕಾದಿಂದ ಐದು ಹೆಣ್ಣು ಹಾಗೂ ಮೂರು ಗಂಡು ಚಿರತೆಗಳನ್ನು ಸದ್ಯ ಭಾರತಕ್ಕೆ ತರಲಾಗಿದೆ. ಅದಕ್ಕೂ ಮೊದಲು ಶುಕ್ರವಾರದಂದು ನಮೀಬಿಯಾದ ರಾಜಧಾನಿ ವಿಂಡ್ ಹೋಕ್ ನಿಂದ ಖಾಸಗಿ ಚರ್ಟರ್ಡ್ ಫ್ಲೈಟಿಗೆ ಮೊದಲು ಚಿರತೆಗಳನ್ನು ವರ್ಗಾಯಿಸಲಾಯಿತು. (ಫೋಟೋ ಕೃಪೆ; Facebook)

  MORE
  GALLERIES

 • 910

  Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

  ಅಲ್ಲಿಂದ ರಾತ್ರಿಯೆಲ್ಲ ವಿಮಾನದಲ್ಲಿ ಪ್ರಯಾಣಿಸಿದ ಚಿರತೆಗಳು ಶನಿವಾರ ಬೆಳಗ್ಗೆಯಂದು ಗ್ವಾಲಿಯರ್ ನಗರದ ಮಹಾರಾಜಪುರ ಏರ್ ಬೇಸ್ ಅನ್ನು ತಲುಪಿದವು. (ಫೋಟೋ ಕೃಪೆ; Facebook)

  MORE
  GALLERIES

 • 1010

  Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಹಿಂದೆ ಕನ್ನಡಿಗನ ಪರಿಶ್ರಮ

  ಬೆಳಗ್ಗೆ ಆರು ಗಂಟೆಗೆ ಫ್ಲೈಟ್ ತಲುಪಬೇಕಾಗಿತ್ತು ಆದರೆ ವಿಳಂಬವಾಗಿ ಎಂಟು ಗಂಟೆಗೆ ತಲುಪಿತು. ತದನಂತರ ವಲಸೆ ಸಂಬಂಧಿತ ಪ್ರಕ್ರಿಯೆಗಳು ಏರ್ಪಟ್ಟು ಅದು ಪೂರ್ಣಗೊಂಡ ಬಳಿಕ ಭಾರತೀಯ ಸೈನ್ಯದ ಅತಿ ಭಾರ ಹೊರುವ ಚಿನೂಕ್ ಹೆಲಿಕಾಪ್ಟರ್ ಬಳಸಿಕೊಂಡು ಚಿರತೆಗಳನ್ನು ಕುನೋ ರಾಷ್ಟ್ರೀಯ ವನಕ್ಕೆ ಕೊಂಡೊಯ್ಯಲಾಯಿತು. (ಫೋಟೋ ಕೃಪೆ; Facebook)

  MORE
  GALLERIES