ಕಲ್ಲುರ್ಟಿ ದೈವಕ್ಕೆ ‘ಅಗೇಲು ಸೇವೆ’ ಬಲುಪ್ರಿಯ. ಒಂದು ಮೊಟ್ಟೆ ಇಡದ ಹೆಣ್ಣು ಕೋಳಿ, 1 ಕೆಜಿ ಕುಚ್ಚಲಕ್ಕಿ, 3 ಬಾಲೆ ಎಳೆ, 2 ತೆಂಗಿನ ಕಾಯಿ, ಕಾಡ ಗುಡ್ಡೆಯಲ್ಲಿ ಸಿಗುವ ಕೆಂಪು (ಕೇಪುಳ ಹೂ) ಇದು ಕಲ್ಲುರ್ಟಿ ದೈವದ ಅಗೇಲು ಸಾಮಾನಿನ ಪಟ್ಟಿ. ಯಾವುದೇ ಬೆಲೆ ಬಾಳುವ, ಹೆಚ್ಚು ಹಣ ಖರ್ಚಾಗುವ ವಸ್ತುವನ್ನು ಕಲ್ಲುರ್ಟಿ ಬಯಸಲ್ಲ.