Karnataka Elections: ಅರುಣ್ ಪುತ್ತಿಲ ವಿರುದ್ಧ ಗಂಭೀರ ಆರೋಪ! ದೇವಸ್ಥಾನದ ದುಡ್ಡು ಎಲ್ಲಿ ಹೋಯ್ತು?

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರ ಇಡೀ ರಾಜಗ್ಯದ ಗಮನ ಸೆಳೆದಿದೆ. ಹಿಂದುತ್ವದ ಕೇಂದ್ರ ಎಂದೇ ಕರೆಸಿಕೊಳ್ಳಲಾಗುವ ಕರಾವಳಿಯ ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ ವಂಚಿತ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು ಕಮಲ ಪಾಳಯಕ್ಕೆ ದೊಡ್ಡ ತಲೆನೋವಾಗಿದೆ. ಹೀಗಿರುವಾಗಲೇ ಸದ್ಯ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ ನಡೆಸಿದ್ದಾರೆ.

First published:

 • 17

  Karnataka Elections: ಅರುಣ್ ಪುತ್ತಿಲ ವಿರುದ್ಧ ಗಂಭೀರ ಆರೋಪ! ದೇವಸ್ಥಾನದ ದುಡ್ಡು ಎಲ್ಲಿ ಹೋಯ್ತು?

  ಹೌದು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಪುತ್ತಿಲ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ ನಡೆಸಿದ್ದು, ಅರುಣ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ ಎಂದು ಪ್ರಶ್ನಿಸಿದ್ದಾರೆ.

  MORE
  GALLERIES

 • 27

  Karnataka Elections: ಅರುಣ್ ಪುತ್ತಿಲ ವಿರುದ್ಧ ಗಂಭೀರ ಆರೋಪ! ದೇವಸ್ಥಾನದ ದುಡ್ಡು ಎಲ್ಲಿ ಹೋಯ್ತು?

  ಇಷ್ಟೇ ಅಲ್ಲದೇ ಪುತ್ತಿಲ ವಿರುದ್ಧ ಗಂಭೀರ ಆರೋಪ ಮಾಡಿರುವ ಪ್ರಭಾಕರ್ ಭಟ್ ದೇವಸ್ಥಾನದ ದುಡ್ಡು ಹೊಡೆದ, ಹಿಂದುಗಳ ಮೇಲೆಯೇ ದೌರ್ಜನ್ಯ ನಡೆಸಿದ ವ್ಯಕ್ತಿ ಅರುಣ್ ಪುತ್ತಿಲ ಎಂದು ಕಿಡಿ ಕಾರಿದ್ದಾರೆ.

  MORE
  GALLERIES

 • 37

  Karnataka Elections: ಅರುಣ್ ಪುತ್ತಿಲ ವಿರುದ್ಧ ಗಂಭೀರ ಆರೋಪ! ದೇವಸ್ಥಾನದ ದುಡ್ಡು ಎಲ್ಲಿ ಹೋಯ್ತು?

  ಹಿಂದುತ್ವ ನಾಯಕರೆಂದೇ ಗುರುತಿಸಿಕೊಂಡಿರುವ ಪುತ್ತಿಲ ವಿರುದ್ಧ ಮತ್ತಷ್ಟು ಗುಡುಗಿದ ಪ್ರಭಾಕರ್ ಭಟ್ ಗೋ ಸಾಗಾಟ ಮಾಡುವಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದಾಗ ಅರುಣ್ ಕೂಡಾ ಅದರಲ್ಲಿ ಒಬ್ಬನಾಗಿದ್ದ ಅಷ್ಟೇ, ಅದು ಬಿಟ್ಟು ಬೇರೆ ಹಿಂದುತ್ವದ ಕಾರ್ಯ ಅವನಿಂದ ನಡೆಯಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

  MORE
  GALLERIES

 • 47

  Karnataka Elections: ಅರುಣ್ ಪುತ್ತಿಲ ವಿರುದ್ಧ ಗಂಭೀರ ಆರೋಪ! ದೇವಸ್ಥಾನದ ದುಡ್ಡು ಎಲ್ಲಿ ಹೋಯ್ತು?

  ಇದೇ ಸಂದರ್ಭದಲ್ಲಿ ಪುತ್ತಿಲ ಜೊತೆ ಅಮಿತ್ ಶಾ ಮಾತನಾಡಿದ್ದಾರೆಂಬ ವಿಚಾರವನ್ನೂ ಪ್ರಸ್ತಾಪಿಸಿದ ಪ್ರಭಕರ್ ಭಟ್,ರುಣ್ ಪುತ್ತಿಲ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಮಾತನಾಡುವುದಾಗಿ ಹೇಳಿದಾಗ ಧಿಕ್ಕರಿಸಿದ ವ್ಯಕ್ತಿ , ಆದರೆ ಕೆಲವು ಕಾರ್ಯಕರ್ತರು ಈ ವಿಚಾರ ತಿಳಿಯದೆ ಅವನ ಹಿಂದೆ ಓಡಾಡುತ್ತಿದ್ದಾರೆ. ಅವರಿಗೆ ಸದ್ಯದಲ್ಲೇ ಈ ವಿಚಾರ ತಿಳಿಯಲಿದೆ ಎಂದು ಎಚ್ಚರಿಸಿದ್ದಾರೆ.

  MORE
  GALLERIES

 • 57

  Karnataka Elections: ಅರುಣ್ ಪುತ್ತಿಲ ವಿರುದ್ಧ ಗಂಭೀರ ಆರೋಪ! ದೇವಸ್ಥಾನದ ದುಡ್ಡು ಎಲ್ಲಿ ಹೋಯ್ತು?

  ಟಿಕೆಟ್​ ಸಿಗದೆ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದ ಅರುಣ್ ಕುಮಾರ್ ಪುತ್ತಿಲ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಹಲವು ಬಿಜೆಪಿ ನಾಯಕರು ಅವರ ಮನವೊಲಿಸಲು ಯತ್ನಿಸಿದ್ದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

  MORE
  GALLERIES

 • 67

  Karnataka Elections: ಅರುಣ್ ಪುತ್ತಿಲ ವಿರುದ್ಧ ಗಂಭೀರ ಆರೋಪ! ದೇವಸ್ಥಾನದ ದುಡ್ಡು ಎಲ್ಲಿ ಹೋಯ್ತು?

  ಯಡಿಯೂರಪ್ಪ ಅವರು ಕರೆ ಮಾಡಿದ್ದ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಅರುಣ್ ಕುಮಾರ್ ಪುತ್ತಿಲ ಹಿರಿಯರು ಕೊನೆಯ ಕ್ಷಣದಲ್ಲಿ ಸಂಪರ್ಕ ಮಾಡಿದ್ದಾರೆ. ಕೊನೆಯ ಕ್ಷಣದಲ್ಲಿ ನಾನು ನಿರ್ಧಾರ ಮಾಡಲು ಆಗಲ್ಲ. ಕಾರ್ಯಕರ್ತರ, ಸಂಘದ ಹಿರಿಯರ ಸೂಚನೆ ಮೇರೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಮ್ಮ ದೃಢ ನಿಲುವು ಪ್ರದರ್ಶಿಸಿದ್ದರು.

  MORE
  GALLERIES

 • 77

  Karnataka Elections: ಅರುಣ್ ಪುತ್ತಿಲ ವಿರುದ್ಧ ಗಂಭೀರ ಆರೋಪ! ದೇವಸ್ಥಾನದ ದುಡ್ಡು ಎಲ್ಲಿ ಹೋಯ್ತು?

  ಈ ಬಾರಿಯ ಚುನಾವಣೆಯಲ್ಲಿ ಕರಾವಳಿಯ ಪುತ್ತೂರು ಕ್ಷೇತ್ರ ವಿಶೇಷ ಗಮನ ಸೆಳೆದಿದ್ದು, ಇಲ್ಲಿ ಬಿಜೆಪಿ ವರ್ಸಸ್​ ಹಿಂದುತ್ವ ಎಂಬ ನಿಟ್ಟಿನಲ್ಲಿ ಪೈಪೋಟಿ ನಡೆಯುತ್ತಿದೆ.

  MORE
  GALLERIES