R Ashok: ಹಲೋ ಕಂದಾಯ ಸಚಿವರೇ ಎಂದು ಹೇಳಿ 10 ದಿನದಲ್ಲಿ ಪಿಂಚಣಿ ಪಡೆಯಿರಿ
ಶೀಘ್ರದಲ್ಲಿಯೇ ಫೋನ್ ಮೂಲಕ ಪಿಂಚಣಿ ಪಡೆಯುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಶುಕ್ರವಾರ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ಸಚಿವರು ವಾಸ್ತವ್ಯ ಮಾಡಿದ್ದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ಜನರ ಮನೆ ಬಾಗಿಲಿಗೆ ಸೇವೆನಗಳನ್ನು ಒದಗಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ತಿಳಿಸಿದರು.
2/ 8
ಪಿಂಚಣಿಗೆ ಅರ್ಹರು ಫೋನ್ ನಲ್ಲಿ ಹಲೋ ಕಂದಾಯ ಸಚಿವರೇ ಎಂದು ಹೇಳಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಪಾಸ್ ಬುಕ್ ಮಾಹಿತಿ ನೀಡಿದ್ರೆ 72 ಗಂಟೆಯಲ್ಲಿ ಪಿಂಚಣಿ ಆದೇಶ ಫಲಾನುಭವಿಗಳ ಕೈಗೆ ಸೇರುವ ಯೋಜನೆ ಇದಾಗಿದೆ ಎಂದು ಆರ್. ಅಶೋಕ್ ಹೇಳಿದರು.
3/ 8
ಈ ಕಾರ್ಯಕ್ರಮದಲ್ಲಿ ನಾಲ್ಕು ಸಂಖ್ಯೆಯ ಸಹಾಯವಾಣಿಯನ್ನು ಆರಂಭಿಸಲಾಗುತ್ತದೆ. ಬೆಂಗಳೂರಿನಲ್ಲಿ ನಿಯಂತ್ರಣ ಕೇಂದ್ರ ಇರಲಿದ್ದು, ಸಹಾಯವಾಣಿಗೆ ಸರಿಯಾದ ದಾಖಲೆಯ ಮಾಹಿತಿ ನೀಡಿದ್ರೆ 72 ಗಂಟೆಯಲ್ಲಿಯೇ ಪಿಂಚಣಿಯ ಆದೇಶ ನಿಮ್ಮ ಕೈ ಸೇರಲಿದೆ.
4/ 8
ಆದೇಶ ತಲುಪಿದ ಬಳಿಕ ಗ್ರಾಮ ಲೆಕ್ಕಿಗರು ಮನೆಗೆ ಬಂದು ಪರಿಶೀಲನೆ ನಡೆಸುತ್ತಾರೆ. ಈ ಯೋಜನೆಯ ಮೂಲಕ ಏಳು ಸಾವಿರ ಜನರಿಗೆ ಪಿಂಚಣಿ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಆರ್.ಅಶೋಕ್ ಎಂದು ತಿಳಿಸಿದರು.
5/ 8
ಈ ವಾಸ್ತವ್ಯ ನನಗೊಬ್ಬನಿಗೆ ಮಾತ್ರ ಸೀಮಿತ ಆಗಬಾರದು ಎಂದು ಇದಕ್ಕೆ ಜಿಲ್ಲಾಧಿಕಾರಿ ನಡೆ, ಗ್ರಾಮದ ಕಡೆ ಅಂತ ಹೆಸರಿಡಲಾಗಿದೆ. ಮುಂದಿನ ದಿನಗಳಲ್ಲಿ ರೇಷನ್ ಸೇರಿ ಎಲ್ಲವೂ ಜನರ ಮನೆ ಬಾಗಿಲಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
6/ 8
ಕಳೆದ 50 ವರ್ಷದಿಂದ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಈ ಹಿನ್ನೆಲೆ ಮನೆ ಬಾಗಿಲಿಗೆ ಸೇವೆ ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
7/ 8
ಕಂದಾಯ ಗ್ರಾಮದ ಅಭಿವೃದ್ಧಿಗಾಗಿ ಒಂದು ಕೋಟಿ ರೂ. ಅನುದಾನ ನೀಡಲಾಗುವುದು. ಗ್ರಾಮ ವಾಸ್ತವ್ಯಕ್ಕೆ ತೆರಳಿದ ಕಡೆಯಲ್ಲ ಜನರು ಅರ್ಜಿಗಳನ್ನು ನೀಡಿದ್ದಾರೆ. ಅವುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
8/ 8
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ್, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ್, ಶಾಂತಾರಾಮ್ ಸಿದ್ದಿ, ಜಿಲ್ಲಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.