Jog Falls: ಮಳೆಯಿಂದ ಮಲೆನಾಡಿನ ಜಲಪಾತಗಳಿಗೆ ಜೀವಕಳೆ; ಧುಮ್ಮಿಕ್ಕುತ್ತಿರುವ ಜೋಗದ ವೈಭವ ಹೀಗಿದೆ!
Karnataka Waterfalls: ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರಿನ ಜಲಪಾತಗಳು ಮೈದುಂಬಿ ನಿಂತಿವೆ. ಹೊಸನಗರ, ತೀರ್ಥಹಳ್ಳಿ, ಸಾಗರದಲ್ಲಿ ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ಜೋಗ ಜಲಪಾತದ ಸೌಂದರ್ಯ ಇಮ್ಮಡಿಸಿದೆ. (ಫೋಟೋಗಳು- ಫೇಸ್ಬುಕ್)
ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ.
2/ 18
ಹೊಸನಗರ ತಾಲೂಕಿನಲ್ಲಿ ದಾಖಲೆಯ 320 ಮಿ.ಮೀ. ಮಳೆಯಾಗಿದ್ದು, ಈ ಬಾರಿ ಕಳೆದ ವರ್ಷಕ್ಕಿಂತಲೂ ಅತಿಹೆಚ್ಚು ಮಳೆಯಾಗಿದೆ.
3/ 18
ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ.
4/ 18
ಲಿಂಗನಮಕ್ಕಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ಜೋಗ ಜಲಪಾತ ಮತ್ತೆ ಧುಮ್ಮಿಕ್ಕಿ ಹರಿಯುತ್ತಿದೆ.
5/ 18
ಮೈದುಂಬಿ ಧುಮ್ಮಿಕ್ಕುತ್ತಿರುವ ಜೋಗ ಜಲಪಾತ
6/ 18
ಮಳೆ ನೀರಿನಿಂದ ಜೀವ ಪಡೆದ ಜೋಗ ಜಲಪಾತ
7/ 18
ಶಿವಮೊಗ್ಗ- ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಜೋಗ ಜಲಪಾತ
8/ 18
ಜೋಗ ಜಲಪಾತ
9/ 18
ಹೊಸನಗರ, ತೀರ್ಥಹಳ್ಳಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮಾಸ್ತಿಕಟ್ಟೆ ಮಾರ್ಗವಾಗಿ ಉಡುಪಿ, ಮಂಗಳೂರು, ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟ್ನಲ್ಲಿಯೂ ಜಲಪಾತಗಳು ಧುಮ್ಮಿಕ್ಕುತ್ತಿವೆ.
10/ 18
ಶಿವಮೊಗ್ಗದ ಹುಲಿಕಲ್ ಘಾಟ್ನಲ್ಲಿರುವ ಬಾಳೆಬರೆ ಜಲಪಾತದ ದೃಶ್ಯ
11/ 18
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಬಳಿ ಇರುವ ಹಿಡ್ಲುಮನೆ ಫಾಲ್ಸ್ ಕೂಡ ಕಳೆದೊಂದು ವಾರದಿಂದ ಭೋರ್ಗರೆಯುತ್ತಿದೆ.
12/ 18
ಕೊಡಚಾದ್ರಿ ತಪ್ಪಲಿನಲ್ಲಿರುವ ಹಿಡ್ಲುಮನೆ ಜಲಪಾತದ ದೃಶ್ಯ
13/ 18
ಉತ್ತರ ಕನ್ನಡ ಜಿಲ್ಲೆಯ ಮಾಗೋಡು ಜಲಪಾತ ಮೈದುಂಬಿ ಹರಿಯುತ್ತಿದೆ.
14/ 18
ಕೊಡಗಿನ ಮಲ್ಲಳ್ಳಿ ಜಲಪಾತದ ದೃಶ್ಯ
15/ 18
ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ಜಲಪಾತಗಳಿಗೆ ಜೀವಕಳೆ ಬಂದಿದೆ. 100 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿರುವ ತೀರ್ಥಕೆರೆ ಜಲಪಾತದ ವೈಭವ ಹೀಗಿದೆ ನೋಡಿ
16/ 18
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿರುವ ತೀರ್ಥಕರೆ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ,. ಕಳಸ- ಮೇಗುಂದಾ ಮಾರ್ಗದಲ್ಲಿ ತೀರ್ಥಕೆರೆ ಜಲಪಾತ ಸಿಗುತ್ತದೆ.
17/ 18
ಉತ್ತರ ಕರ್ನಾಟಕದ ಜಲಪಾತಗಳಿಗೂ ಮಳೆಯಿಂದ ಜೀವಕಳೆ ಬಂದಿದೆ. ಗೋಕಾಕ್ ಜಲಪಾತ ಧುಮ್ಮಿಕ್ಕುತ್ತಿರುವ ದೃಶ್ಯ ಇಲ್ಲಿದೆ.
18/ 18
ಗೋಕಾಕ್ ಜಲಪಾತಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.
First published:
118