ಡಾ. ಮಲ್ಲಣ್ಣ ಮೂಲಿಮನಿ ಅವರು ಶ್ರೀಗಳ ಆರೋಗ್ಯ ಬಗ್ಗೆ ಮಾಹಿತಿ ನೀಡಿದ್ದು, ಶ್ರೀಗಳು ಆರೋಗ್ಯವಾಗಿದ್ದಾರೆ. ಪಲ್ಸ್, ಬಿಪಿ ಸರಿಯಾಗಿದೆ, ಯಾವುದೇ ರೀತಿಯ ಆತಂಕವಿಲ್ಲ. ಮುಂಜಾನೆಗಿಂತ ಈಗಿನ ಸ್ಥಿತಿ ಮತ್ತಷ್ಟು ಚೇತರಿಕೆಯಾಗಿದೆ. ಉಸಿರಾಟದ ಸಮಸ್ಯೆ ಕೂಡ ಯಾವುದು ಇಲ್ಲ. ಶ್ರೀಗಳು ಸನ್ನೆ ಮೂಲಕ ಎಂ.ಬಿ ಪಾಟೀಲರ್ ಜೊತೆ ಮಾತನಾಡಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಗೆ ಶ್ರೀಗಳ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಶ್ರೀಗಳ ಅನಾರೋಗ್ಯದ ವಿಷಯ ತಿಳಿಯುತ್ತಲೇ ಆಶ್ರಮದತ್ತ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮಠ ಆಡಳಿತಾಧಿಕಾರಿಗಳು ವೆಬ್ಸೈಟ್ನಲ್ಲಿ ಶ್ರೀಗಳನ್ನು ಕಾಣಬಹುದು ಎಂದು ಹೇಳಿದ್ರೂ ಭಕ್ತರು ಮಾತ್ರ ಒಪ್ಪಿಕೊಳ್ಳುತ್ತಿಲ್ಲ. ಇನ್ನು, ಮಠದ ಬಳಿ ಆಗಮಿಸಿದ ಭಕ್ತರಿಗೆ ಮಾಹಿತಿ ನೀಡಿ ವಾಪಸ್ ಕಳುಹಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.