ಇಬ್ಬರು ಮಕ್ಕಳನ್ನು ದತ್ತು ಪಡೆದ ರೆಡ್ಡಿ: ಭರ್ಜರಿ ಪ್ರಚಾರ ನಡುವೆ ಜನಾರ್ದನ ರೆಡ್ಡಿ ಅವರು ತಂದೆ-ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೂಡ ದತ್ತು ಪಡೆದುಕೊಂಡು ಮಾನವೀಯತೆ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ವೀರುಪಾಪುರ ತಾಂಡದ ಮಕ್ಕಳಾದ ಜ್ಯೂತಿ ಸ್ವರೂಪ್, ವೇಣು ಎಂಬವರನ್ನು ಅಧಿಕೃತವಾಗಿ ದತ್ತು ಪಡೆದುಕೊಂಡಿದ್ದಾರೆ. ಮಕ್ಕಳ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ಜನಾರ್ದನ ರೆಡ್ಡಿ ಅವರು ವಹಿಸಿಕೊಂಡಿದ್ದಾರೆ. ಇಂದು ನಡೆದ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿ ದತ್ತು ಸ್ವೀಕಾರ ಮಾಡಿದ್ದಾರೆ.
ಗಂಗಾವತಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಈಗಾಗಲೇ ರಾಜ್ಯಾದ್ಯಂತ 12 ಅಭ್ಯರ್ಥಿ ಘೋಷಣೆ ಮಾಡಿದ್ದೀನಿ. ಇದೇ ತಿಂಗಳ 30ರ ಒಳಗಾಗಿ 30ಕ್ಕೂ ಹೆಚ್ಚು ಅಭ್ಯರ್ಥಿಗಳ ಘೋಷಣೆ ಆಗಲಿದೆ. ಬಿಜೆಪಿಯ ಸಾಲು- ಸಾಲು ನಾಯಕರು ಗಂಗಾವತಿಗೆ ಬಂದು ಅಬ್ಬರದ ಪ್ರಚಾರ ಮಾಡಿದ್ದಾರೆ. ಬಿಜೆಪಿ ನಾಯಕರು ಈಗಲಾದರೂ ಗಂಗಾವತಿ ಕಡೆಗೆ ಬರುತ್ತಿದ್ದಾರೆ. ನನ್ನಿಂದ ಗಂಗಾವತಿಗೆ ಬಂದಿದ್ದು ಖುಷಿ ಆಗಿದೆ. ಐದು ವರ್ಷ ಒಮ್ಮೆಯೂ ಬಂದಿರಲಿಲ್ಲ ಎಂದು ಮಾತಿನಲ್ಲೇ ಬಿಜೆಪಿ ನಾಯಕರಿಗೆ ತಿವಿದರು.