Janardhan Reddy: ಚುನಾವಣೆಗೂ ಮುನ್ನವೇ ಭರ್ಜರಿ ಯೋಜನೆ ಘೋಷಿಸಿದ ಗಣಿ ಧಣಿ

Kalyana Rajya Pragati Party: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆ ಮಾಡಿದ್ದಾರೆ. ತಮ್ಮ ಪಕ್ಷದಿಂದ ಸುಮಾರು 30 ರಿಂದ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಸಹ ಇಳಿಸಲು ತಯಾರಿ ನಡೆಸುತ್ತಿದ್ದಾರೆ.

First published:

 • 17

  Janardhan Reddy: ಚುನಾವಣೆಗೂ ಮುನ್ನವೇ ಭರ್ಜರಿ ಯೋಜನೆ ಘೋಷಿಸಿದ ಗಣಿ ಧಣಿ

  ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಏನು ಮಾಡುತ್ತೇವೆ ಅಂತ ಒಂದೊಂದೇ ಯೋಜನೆಗಳನ್ನು ಘೋಷಣೆ ಮಾಡಿಕೊಂಡು ಚುನಾವಣಾ ಪ್ರಣಾಳಿಕೆಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಇತ್ತ ಬಿಜೆಪಿ ತನ್ನ ಜನಪ್ರಿಯ ಯೋಜನೆಗಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದೆ.

  MORE
  GALLERIES

 • 27

  Janardhan Reddy: ಚುನಾವಣೆಗೂ ಮುನ್ನವೇ ಭರ್ಜರಿ ಯೋಜನೆ ಘೋಷಿಸಿದ ಗಣಿ ಧಣಿ

  ಈಗ ಹೊಸ ಪಕ್ಷ ಸ್ಥಾಪನೆ ಮಾಡಿರುವ ಜನಾರ್ದನ ರೆಡ್ಡಿ ಸಹ ಭರಪೂರ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಗಂಗಾವತಿ ವಿಧಾನಸಭಾ  ಕ್ಷೇತ್ರದಿಂದ ಸ್ಪರ್ಧೆ ಮಾಡೋದಾಗಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

  MORE
  GALLERIES

 • 37

  Janardhan Reddy: ಚುನಾವಣೆಗೂ ಮುನ್ನವೇ ಭರ್ಜರಿ ಯೋಜನೆ ಘೋಷಿಸಿದ ಗಣಿ ಧಣಿ

  ಗಂಗಾವತಿ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ಜನಾರ್ದನ ರೆಡ್ಡಿ ಅವರು ಒಂದೊಂದೇ ಘೋಷಣೆ ಮಾಡಿಕೊಂಡು ಬರುತ್ತಿದ್ದಾರೆ.

  MORE
  GALLERIES

 • 47

  Janardhan Reddy: ಚುನಾವಣೆಗೂ ಮುನ್ನವೇ ಭರ್ಜರಿ ಯೋಜನೆ ಘೋಷಿಸಿದ ಗಣಿ ಧಣಿ

  ಜನಾರ್ದನ ರೆಡ್ಡಿ ಘೋಷಣೆಗಳು 

  ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 2.50 ಸಾವಿರ ರೂಪಾಯಿ ನಿರುದ್ಯೋಗಿ ಭತ್ಯೆ, ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ 15 ಸಾವಿರ ರೂಪಾಯಿ ನೀಡೋದಾಗಿ ಹೇಳಿದ್ದಾರೆ.

  MORE
  GALLERIES

 • 57

  Janardhan Reddy: ಚುನಾವಣೆಗೂ ಮುನ್ನವೇ ಭರ್ಜರಿ ಯೋಜನೆ ಘೋಷಿಸಿದ ಗಣಿ ಧಣಿ

  ತುಂಗಭದ್ರಾ ಜಲಾಶಯದ ಹೂಳು ತೆಗೆಯಲಾಗುವುದು. ಜಲಾಶಯದಿಂದ ನೀರು ಬಳಕೆಗಾಗಿ ನವಲಿ ಸಮನಾಂತರ ಜಲಾಶಯ ನಿರ್ಮಾಣ ಮಾಡಲಾಗುವುದು. ನಾಲ್ಕು ಜಿಲ್ಲೆಯ ಪ್ರತಿ ಇಂಚಿಗೂ ನೀರು ತರುವ ಭರವಸೆಯನ್ನು ಜನಾರ್ದನ ರೆಡ್ಡಿ ನೀಡಿದ್ದಾರೆ.

  MORE
  GALLERIES

 • 67

  Janardhan Reddy: ಚುನಾವಣೆಗೂ ಮುನ್ನವೇ ಭರ್ಜರಿ ಯೋಜನೆ ಘೋಷಿಸಿದ ಗಣಿ ಧಣಿ

  ಓದಿರುವ ಯುವಕರಿಗೆ ಉದ್ಯೋಗಕ್ಕಾಗಿ ಜಿಂದಾಲ್ ಮಾದರಿಯ ನಾಲ್ಕು ಬೃಹತ್ ಕಾರ್ಖಾನೆಗಳನ್ನು ಆರಂಭಿಸಲಾಗುವುದು. ಈ ಕಾರ್ಖಾನೆಗಳಲ್ಲಿ ಯುವಕರಿಗೆ ಕೆಲಸ ನೀಡಲಾಗುವುದು ಎಂದು ಜನಾರ್ದನ ರೆಡ್ಡಿ ಘೋಷಣೆ ಮಾಡಿದ್ದಾರೆ.

  MORE
  GALLERIES

 • 77

  Janardhan Reddy: ಚುನಾವಣೆಗೂ ಮುನ್ನವೇ ಭರ್ಜರಿ ಯೋಜನೆ ಘೋಷಿಸಿದ ಗಣಿ ಧಣಿ

  ಕ್ಷೇತ್ರದ ಜನಸಾಮಾನ್ಯರಿಗಾಗಿ ಬಸವೇಶ್ವರ ಆರೋಗ್ಯಶ್ರೀ ಯೋಜನೆ ರೂಪಿಸಲಾಗುವುದು. ಈ ಯೋಜನೆಯಲ್ಲಿ 10 ಲಕ್ಷ ರೂಪಾಯಿ ಮೊತ್ತದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ರೆಡ್ಡಿ ಹೇಳಿದ್ದಾರೆ

  MORE
  GALLERIES