ಜನಾರ್ದನ ರೆಡ್ಡಿ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಗಣಿಧಣಿ ಅಂತಲೇ ಹೆಸರು ಪಡೆದ ಅವರು, ಅಧಿಕಾರದಲ್ಲಿದ್ದಾಗಲೇ ಜೈಲಿಗೆ ಹೋಗಿದ್ದ ಅಪಖ್ಯಾತಿಗೂ ತುತ್ತಾದರು. ಬಳಿಕ ಜೈಲಿಂದ ಬಿಡುಗಡೆಯಾದರೂ ಮತ್ತೆ ರಾಜಕೀಯಕ್ಕೆ ಬರುವ ಅವಕಾಶವೇ ಸಿಕ್ಕಿರಲಿಲ್ಲ. ಬಳಿಕ ಮಗಳ ಅದ್ಧೂರಿ ಮದುವೆಯಿಂದ ಸುದ್ದಿ ಮಾಡಿದ್ದರು. ಇದೀಗ ಅವರ ಪತ್ನಿ ಅರುಣ ಲಕ್ಷ್ಮೀ ಸುದ್ದಿ ಮಾಡುತ್ತಿದ್ದಾರೆ. ಅದೂ ತಮ್ಮ ವಿಭಿನ್ನ ಫೋಟೋ ಶೂಟ್ ಮೂಲಕ!
ತಮ್ಮ ಮಡದಿಯ ಈ ಪೋಟೋಗಳನ್ನು ರವಿವರ್ಮ ಅವರಿಗೆ ಅರ್ಪಿಸಿದ್ದಾರಂತೆ ಜನಾರ್ದನ ರೆಡ್ಡಿ.. ಗೌರವದ ಪ್ರತೀಕ ಮತ್ತು ಸಾಂಪ್ರದಾಯಿಕ ಉಡುಪಿನೊಂದಿಗೆ ಸುಂದರ ಸ್ತ್ರೀ ಮೂರ್ತಿಗಳ ಚಿತ್ರಗಳನ್ನು ಬಿಡಿಸಿ ವಿಶ್ವದ ಗಮನ ಸೆಳೆದಿರುವ ರವಿವರ್ಮ ಅವರ ಆಯ್ದ ಕೆಲವು ಚಿತ್ರಗಳ ಪ್ರತಿರೂಪದ ಫೋಟೋಶೂಟ್ ಗಳು ಕಲಾವಿದನ ಕಲೆಗೆ ಗೌರವಪೂರ್ವಕವಾಗಿ ಅರ್ಪಿಸುತ್ತಿದ್ದೇನೆ ಎಂದಿದ್ದಾರೆ ಜನಾರ್ದನ ರೆಡ್ಡಿ.
ಇನ್ನು ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್ ವುಡ್ ಅಂಗಳಕ್ಕೆ ಬಂದಾಗಿದೆ. ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಕಿರಿಟಿ ರೆಡ್ಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ರಾಧಾ ಕೃಷ್ಣ ನಿರ್ದೇಶನದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ವಿಶೇಷವೆಂದರೆ ಕಿರೀಟಿ ಹೀರೋ ಆಗಿರುವ ಮೊದಲ ಸಿನಿಮಾಕ್ಕೆ 'ಬಾಹುಬಲಿ', 'ಪುಷ್ಪ' ಸಿನಿಮಾಗಳಿಗೆ ಕೆಲಸ ಮಾಡಿದ ತಂತ್ರಜ್ಞರು ಕೆಲಸ ಮಾಡಲಿದ್ದಾರೆ.