BJP Politics: ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ಪಕ್ಷಕ್ಕೆ ಡ್ಯಾಮೇಜ್ ಖಚಿತ. ಡ್ಯಾಮೇಜ್ ಕಂಟ್ರೋಲ್ ಗೆ ತಂತ್ರ ರೂಪಿಸುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಶೆಟ್ಟರ್ ಉತ್ತರ ಕರ್ನಾಟಕದ ಹಿರಿಯ ನಾಯಕರಾಗಿದ್ದು, ಅವರ ಮನವೊಲಿಕೆಗೆ ಎಲ್ಲ ಪ್ರಯತ್ನ ಮಾಡಿದ್ದೇವೆ ಎಂಬ ವಿಷಯವನ್ನು ತಿಳಿಸಿದರು.
2/ 7
ರಾಷ್ಟ್ರೀಯ ಮಟ್ಟದ ಸ್ಥಾನಮಾನದ ಭರವಸೆ ನೀಡಲಾಗಿತ್ತು. ಅವರ ಕುಟುಂಬಕ್ಕೂ ಟಿಕೆಟ್ ಭರವಸೆ ಕೊಟ್ಟಿದ್ದೇವು. ಆದ್ರೂ ಅವರು ಈ ನಿರ್ಧಾರ ಕೈಗೊಂಡಿರೋದು ದುರ್ದೈವ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
3/ 7
ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ನಮಗೆ ಕಸಿವಿಸಿ ಆಗಿರೋದು ನಿಜ. ನಾನು ಸಹ ನಿನ್ನೆ ಶೆಟ್ಟರ್ ಜೊತೆ ಮಾತನಾಡಿದರೂ ಅವರು ಒಪ್ಪಿಲ್ಲ ಎಂದರು.
4/ 7
ಮುಂದಿನ ಪೀಳಿಗೆಯ ನಾಯಕರ ಬೆಳವಣಿಗೆಗಾಗಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಿಲ್ಲ ಎಂಬ ವಿಷಯವನ್ನ ಹೇಳಲಾಗಿತ್ತು. ಆದರೂ ಶೆಟ್ಟರ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ ಎಂದರು.
5/ 7
ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮೊದಲ ಪೀಳಿಗೆಯ ನಾಯಕರು ಬೆಳೆದು ನಿಂತಿದ್ದಾರೆ. ಈಗ ಎರಡನೇ ಹಂತದ ನಾಯಕರಿಗೆ ಅವಕಾಶ ನೀಡಬೇಕು ಎಂದು ಬೊಮ್ಮಾಯಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಎರಡನೇ ಪೀಳಿಗೆಯಲ್ಲಿ ಸೋಮಣ್ಣ, ಸಿಸಿ ಪಾಟೀಲ್ ಇದ್ದಾರೆ ಎಂದರು.
6/ 7
ಶಿರಸಿಗೆ ತೆರಳಿರುವ ಮಾಜಿ ಸಿಎಂ ಶೆಟ್ಟರ್ ಸ್ಪೀಕರ್ ಕಾಗೇರಿ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
7/ 7
ಇನ್ನು ಶೆಟ್ಟರ್ ಅವರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಶನಿವಾರ ಬಿಡುಗಡೆಯಾದ ಮೂರನೇ ಪಟ್ಟಿಯಲ್ಲಿ ಶೆಟ್ಟರ್ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.