KGF Babu ನಿವಾಸದ ಮೇಲೆ ಐಟಿ ದಾಳಿ; ಚುನಾವಣೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಶಾಕ್

IT Raid; ಚುನಾವಣೆ ತಯಾರಿಯಲ್ಲಿದ್ದ ಕೆಜಿಎಫ್​ ಬಾಬು ಅವರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಬಾಬು ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದಾರೆ.

First published:

 • 17

  KGF Babu ನಿವಾಸದ ಮೇಲೆ ಐಟಿ ದಾಳಿ; ಚುನಾವಣೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಶಾಕ್

  ಬೆಂಗಳೂರಿನ ಹೈಗ್ರೌಂಡ್ಸ್ ಬಳಿಯಿರುವ ಕೆಜಿಎಫ್ ಬಾಬು ಅವರ ರುಕ್ಸಾನಾ ಪ್ಯಾಲೇಸ್ ಮೇಲೆ ಐಟಿ ದಾಳಿ ನಡೆದಿದೆ.

  MORE
  GALLERIES

 • 27

  KGF Babu ನಿವಾಸದ ಮೇಲೆ ಐಟಿ ದಾಳಿ; ಚುನಾವಣೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಶಾಕ್

  ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕೆಜಿಎಫ್​ ಬಾಬು ಪತ್ನಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೆಜಿಎಫ್​ ಬಾಬು ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿದೆ.

  MORE
  GALLERIES

 • 37

  KGF Babu ನಿವಾಸದ ಮೇಲೆ ಐಟಿ ದಾಳಿ; ಚುನಾವಣೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಶಾಕ್

  ಇಂದು ಬೆಳಗ್ಗೆ ಸುಮಾರು 5.30ಕ್ಕೆ ಐಟಿ ಅಧಿಕಾರಿಗಳು ಕೆಜಿಎಫ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಸದ್ಯ ಕೆಜಿಎಫ್ ಬಾಬು ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

  MORE
  GALLERIES

 • 47

  KGF Babu ನಿವಾಸದ ಮೇಲೆ ಐಟಿ ದಾಳಿ; ಚುನಾವಣೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಶಾಕ್

  ಬೆಂಗಳೂರು ಸೇರಿದಂತೆ ಕೆಜಿಎಫ್ ಬಾಬು ಒಡೆತನದ ಇತರೆ ಆಸ್ತಿಗಳ ಮೇಲೆ ದಾಳಿ ನಡೆಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

  MORE
  GALLERIES

 • 57

  KGF Babu ನಿವಾಸದ ಮೇಲೆ ಐಟಿ ದಾಳಿ; ಚುನಾವಣೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಶಾಕ್

  ಕೆಜಿಎಫ್ ಬಾಬು (KGF Babu) ಪತ್ನಿ ಷಾಜಿಯಾ ತರನಮ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

  MORE
  GALLERIES

 • 67

  KGF Babu ನಿವಾಸದ ಮೇಲೆ ಐಟಿ ದಾಳಿ; ಚುನಾವಣೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಶಾಕ್

  ನಾನು ನನ್ನ ಪತ್ನಿ ಪರವಾಗಿ ನಾಮಪತ್ರ ಸಲ್ಲಿಸಲು ಬಂದಿದ್ದೇನೆ. ನನ್ನ ಪತ್ನಿ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ. ನನಗೆ ಟಿಕೆಟ್ ಸಿಕ್ಕರೆ ಮಾತ್ರ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದರೆ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯದಂತೆ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದ್ದರು.

  MORE
  GALLERIES

 • 77

  KGF Babu ನಿವಾಸದ ಮೇಲೆ ಐಟಿ ದಾಳಿ; ಚುನಾವಣೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಶಾಕ್

  ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಆರ್ ವಿ ದೇವರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಮೇಯರ್ ಗಂಗಾಬಿಕೆ ಮತ್ತು ಕೆಜಿಎಫ್ ಬಾಬು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. (ಸಾಂದರ್ಭಿಕ ಚಿತ್ರ)

  MORE
  GALLERIES