Siddaramaiah Vs JDS: 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯನವರು ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ವಿರುದ್ಧ ಸೋತಿದ್ದರು. ಈ ಬಾರಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ.
ಸದ್ಯ ವರುಣಾ ಸ್ಪರ್ಧೆ ಖಚಿತವಾದ್ರೂ ಸಿದ್ದರಾಮಯ್ಯನವರು ಕೋಲಾರದಿಂದ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆಗಳು ಇನ್ನು ನಡೆಯುತ್ತಿವೆ.
2/ 8
ಹಾಲಿ ಬಾದಾಮಿ ಶಾಸಕರಾಗಿರುವ ಸಿದ್ದರಾಮಯ್ಯ, ಕ್ಷೇತ್ರ ತೊರೆದಿರೋದು ಸ್ಪಷ್ಟವಾಗಿದೆ. ಎರಡನೇ ಪಟ್ಟಿಯಲ್ಲಿ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮಸೇನ ಅವರಿಗೆ ಬಾದಾಮಿ ಟಿಕೆಟ್ ನೀಡಲಾಗಿದೆ.
3/ 8
ಈಗ ವರುಣಾದಲ್ಲಿ ಸಿದ್ದರಾಮಯ್ಯ ಅವರ ಗೆಲುವಿಗೆ ಜೆಡಿಎಸ್ ಅಭ್ಯರ್ಥಿಯೇ ಪರೋಕ್ಷವಾಗಿ ಸಹಾಯ ಮಾಡ್ತಿದ್ದಾರಾ ಎಂಬ ವರದಿಗಳು ಪ್ರಕಟವಾಗಿವೆ.
4/ 8
ಜೆಡಿಎಸ್ ತನ್ನ ಮೊದಲ ಪಟ್ಟಿಯಲ್ಲಿಯೇ ವರುಣಾದ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ವರುಣಾ ಕ್ಷೇತ್ರದಿಂದ ಅಭಿಷೇಕ್ ಎಂಬವರಿಗೆ ಟಿಕೆಟ್ ಸಿಕ್ಕಿದೆ.
5/ 8
ವರುಣಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿರುವ ಅಭಿಷೇಕ್ ಅವರೇ ಸಿದ್ದರಾಮಯ್ಯರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ವಿಜಯವಾಣಿ ವರದಿ ಮಾಡಿದೆ.
6/ 8
ಸದ್ಯ ಅಭಿಷೇಕ್ ವರುಣಾ ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲವಂತೆ. ಕಳೆದ ಒಂದು ವಾರದಿಂದ ಕ್ಷೇತ್ರದಿಂದಲೇ ಅಭಿಷೇಕ್ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
7/ 8
ಅಭಿಷೇಕ್ ಅವರ ಈ ನಿಗೂಢ ನಡೆಯಿಂದ ಜೆಡಿಎಸ್ ಕಾರ್ಯಕರ್ತರು ಕಂಗಾಲು ಆಗಿದ್ದಾರೆ. ಫೋನ್ ಮಾಡಿದ್ರೂ ಅಭಿಷೇಕ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.
8/ 8
ಜೆಡಿಎಸ್ ಟಿಕೆಟ್ ಘೋಷಣೆಯಾದ ದಿನದಿಂದ ಇಂದಿನವರೆಗೂ ಅಭಿಷೇಕ್ ಒಂದು ಸಭೆಯನ್ನು ಸಹ ನಡೆಸಿಲ್ಲವಂತೆ. ಈ ಹಿನ್ನೆಲೆ ವರುಣಾದಲ್ಲಿ ಸಿದ್ದರಾಮಯ್ಯ ಗೆಲುವು ಖಚಿತ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.