Chamarajanagar: ಇದು ಹುಲಿಯೋ, ನಾಯಿಯೋ? ಸೂಕ್ಷ್ಮವಾಗಿ ನೋಡಿದ್ರೆ ಗೊತ್ತಾಗುತ್ತೆ!
Viral Photos: ಅರಣ್ಯದಂಚಿನ ಪ್ರದೇಶದಲ್ಲಿನ ರೈತರು ಕಾಡುಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಹಲವು ಉಪಾಯಗಳನ್ನು ಮಾಡಿಕೊಂಡಿರುತ್ತಾರೆ. ಸ್ಥಳೀಯ ರೈತರ ಈ ಐಡಿಯಾಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.
ಚಿಕ್ಕಮಗಳೂರು ಭಾಗದ ರೈತರೊಬ್ಬರು ಕಾಡಾನೆಗಳಿಂದ ಬೆಳೆಯನ್ನು ರಕ್ಷಿಸಲು ತೋಟದಲ್ಲಿ ಸೌಂಡ್ ಸಿಸ್ಟಮ್ ಅಳವಡಿಸಿದ್ದರು. ಈ ಫೋಟೋಗಳು ಸಹ ವೈರಲ್ ಆಗಿದ್ದವು.
2/ 7
ಇನ್ನು ಬಹುತೇಕ ಭಾಗಗಳಲ್ಲಿ ತಮ್ಮ ಗದ್ದೆ ಸುತ್ತಲೂ ಸೀರೆಯನ್ನು ಕಟ್ಟುತ್ತಾರೆ. ಇನ್ನು ಬೆದರುಗೊಂಬೆಗಳನ್ನು ಇರಿಸೋದು ಕಾಮನ್. ತೆಲಂಗಾಣದ ರೈತನೋರ್ವ ತನ್ನ ಬೆಳೆಗೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಬಾಲಿವುಡ್ ನಟಿ ಸನ್ನಿ ಲಿಯೋನ್ ಫೋಟೋ ಹಾಕಿದ್ದರು.
3/ 7
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ರೈತರೊಬ್ಬರು ಮಾಡಿರುವ ಐಡಿಯಾ ಕಂಡು ಜನರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
4/ 7
ರೈತರೊಬ್ಬರು ಬೆಳೆ ರಕ್ಷಣೆಗಾಗಿ ತಮ್ಮ ಸಾಕು ನಾಯಿಗೆ ಹುಲಿಯ ಬಣ್ಣ ಬಳದಿದ್ದಾರೆ. ಕೋತಿ ಮತ್ತಿತರ ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ರೈತನ ಈ ಹೊಸ ಉಪಾಯ ಒಂದು ಕ್ಷಣ ಜನರನ್ನು ಬೆಚ್ಚಿಬೀಳಿಸಿದೆ.
5/ 7
ಹುಲಿಯ ತರಹ ಕಾಣುತ್ತಿರುವ ನಾಯಿಯನ್ನು ಕಂಡು ಗ್ರಾಮಸ್ಥರು ಒಂದು ಕ್ಷಣ ಶಾಕ್ ಆಗಿದ್ದರು. ಸೂಕ್ಷ್ಮದಿಂದ ಗಮನಿಸಿದಾಗ ಅದು ಸಾಮಾನ್ಯ ನಾಯಿ ಎಂದು ಗೊತ್ತಾಗಿದೆ.
6/ 7
ಹನೂರು ತಾಲೂಕಿನ ಅಜ್ಜಿಪುರ ಸುತ್ತಮುತ್ತ ಹುಲಿ ಬಣ್ಣ ಬಳಿದಿರುವ ನಾಯಿ ಓಡಾಡುತ್ತಿದೆ. ರಸ್ತೆಯಲ್ಲಿ ಈ ನಾಯಿಯನ್ನು ಕಂಡು ಪ್ರಯಾಣಿಕರು ಶಾಕ್ ಆಗುತ್ತಿದ್ದಾರೆ.
7/ 7
ಸ್ಥಳೀಯರು ಹುಲಿ ಬಣ್ಣ ಬಳಿದಿರುವ ನಾಯಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.