Bengaluru: ರಾಜಧಾನಿಯಲ್ಲಿ ಅಮಾನವೀಯ ಘಟನೆ; ಮಲಗಿದ್ದ ನಾಯಿ ಮೇಲೆ ಕಾರ್ ಹತ್ತಿಸಿದ ದುಷ್ಟ!
ರಾಜಧಾನಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ವ್ಯಕ್ತಿಯೋರ್ವ ನಾಯಿ ಮೇಲೆ ಕಾರ್ ಹತ್ತಿಸಿ ಪರಾರಿಯಾಗಿದ್ದಾನೆ.
1/ 7
ಮುತ್ತುರಾಯನಗರದ ಸಪ್ತಗಿರಿ ರೆಸಿಡೆನ್ಸಿ ಮುಂಭಾಗದ ರಸ್ತೆಯಲ್ಲಿ ಶ್ವಾನವೊಂದು ಮಲಗಿತ್ತು. ಈ ವೇಳೆ ಬಂದ ಕಾರ್ ನಾಯಿ ಮೇಲೆ ಹೋಗಿದೆ.
2/ 7
ಜನವರಿ 7 ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ಈ ಘಟನೆ ನಡೆದಿದೆ. ಘಟನೆಯ ಎಲ್ಲಾ ದೃಶ್ಯಗಳು ಮನೆಯೊಂದರ ಮುಂಭಾಗದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
3/ 7
ಕಾರು ಮೈಮೇಲೆ ಹತ್ತುತ್ತಿದ್ದಂತೆ ನಡು ರಸ್ತೆಯಲ್ಲೇ ಶ್ವಾನ ಚಡಪಡಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. KA 05 MP 5836 ಸಂಖ್ಯೆಯ ಕಾರ್ ನಾಯಿ ಮೇಲೆ ಹತ್ತಿಸಿದೆ.
4/ 7
ಶ್ವಾನ ರಸ್ತೆಯಲ್ಲಿ ಮಲಗಿತ್ತು. ಪಕ್ಕದ ರಸ್ತೆಯಿಂದ ಕಾರ್ ಬಂದಿತ್ತು. ಎಡಗಡೆಯಿಂದ ಬರುವಾಗ ಕಾರ್ ನಿಧಾನವಾಗಿಯೇ ಇತ್ತು. ಇನ್ನು ಕಾರ್ ಬರುತ್ತಿದ್ದಂತೆ ನಾಯಿ ಸಹ ಏಳಲು ಮುಂದಾಗಿತ್ತು.
5/ 7
ಆದರೆ ಚಾಲಕ ಕಾರ್ ವೇಗ ಹೆಚ್ಚಿಸಿ ನಾಯಿ ಮೇಲೆಯೇ ಹತ್ತಿಸಿದ್ದಾನೆ. ಘಟನೆ ಬಳಿಕ ಕಾರ್ ನಿಲ್ಲಿಸದೇ ವೇಗವಾಗಿ ಹೋಗಿದ್ದಾನೆ.
6/ 7
ನಾಯಿ ನೋವಿನಿಂದ ಜೋರಾಗಿ ಕೂಗುತ್ತಿದ್ದಂತೆ ಸ್ಥಳೀಯರು ಬಂದಿದ್ದಾರೆ. ನೋವಿನಿಂದ ರಸ್ತೆ ಪಕ್ಕದಲ್ಲಿ ನಿಂತಿದ್ದ ನಾಯಿಯನ್ನು ರಕ್ಷಿಸಿದ್ದಾರೆ.
7/ 7
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಈ ಸಂಬಂಧ ಸ್ಥಳೀಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
First published: