Happy Birthday Sudha Murthy: ಸುಧಾ ಮೂರ್ತಿಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ
69th Birthday Of Sudha Murthy: ಕೋಟ್ಯಾಂತರ ರೂಪಾಯಿ ಆಸ್ತಿಯಿದ್ದರೂ ಸುಧಾ ಮೂರ್ತಿಯವರು ಕೊನೆಯ ಬಾರಿ ಹೊಸ ಸೀರೆ ಖರೀದಿಸಿದ್ದು 21 ವರ್ಷಗಳ ಮೊದಲು. ಸೀರೆ ಖರೀದಿಸದೆ ಇರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ನಾನು ಪುಣ್ಯ ಸ್ನಾನಕ್ಕಾಗಿ ಕಾಶಿಗೆ ತೆರಳಿದ್ದೆ. ನೀವು ಯಾವುದನ್ನು ಹೆಚ್ಚು ಇಷ್ಟಪಡುತ್ತೀರೋ ಕಾಶಿಗೆ ಭೇಟಿ ನೀಡಿದ ಮೇಲೆ ಅದನ್ನು ತೊರೆಯಬೇಕಿದೆ ಎಂದರು.


ಸಾಮಾನ್ಯ ಕುಟುಂಬವೊಂದರ ಹೆಣ್ಣುಮಗಳಾದ ಸುಧಾ ಮೂರ್ತಿಯವರು ಬಿ.ವಿ.ಬಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಆಯಂಡ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ನಡೆಸಿದರು.


ನಂತರ ಟಾಟಾ ಇಂಜಿನಿಯರಿಂಗ್ ಆಯಂಡ್ ಲೋಕೊಮೊಟಿವ್ ಕಂಪೆನಿ (TELCO)ಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಭಾರತದ ಅತಿ ದೊಡ್ಡ ವಾಹನ ತಯಾರಿಕಾ ಕಂಪೆನಿTELCOಗೆ ಆಯ್ಕೆಯಾದ ಪ್ರಪ್ರಥಮ ಮಹಿಳಾ ಎಂಜಿನಿಯರ್ ಆಗಿದ್ದಾರೆ ಸುಧಾಮೂರ್ತಿ.


ಪುಣೆಯಲ್ಲಿ TELCOದಲ್ಲಿ ಉದ್ಯೋಗದಲ್ಲಿದ್ದಾಗ ಎನ್. ಆರ್. ನಾರಾಯಣ ಮೂರ್ತಿಯವರ ಪರಿಚಯವಾಯಿತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಅಕ್ಷತಾ ಮತ್ತು ರೋಹನ್ ಎಂಬ ಇಬ್ಬರು ಮಕ್ಕಳಿದ್ದಾರೆ.


1996ರಲ್ಲಿ ಇನ್ಫೋಸಿಸ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿಯವರು ಹಲವು ಸಮಾಜಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ.


ರಾಜ್ಯದ ಹಲವೆಡೆ ಪ್ರವಾಹದಿಂದ ಸಂಕಷ್ಟದಲ್ಲಿದ್ದವರಿಗೆ ಫೌಂಡೇಶನ್ ನೆರವು ನೀಡಿದೆ. ಈ ಬಾರಿ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ ಕಂಗೆಟ್ಟಿರುವ ಸಾವಿರಾರು ಮಂದಿಗಾಗಿ 10 ಕೋಟಿ ರೂ. ಸಹಾಯ ನೀಡುವುದಾಗಿ ಈಗಾಗಲೇ ಇನ್ಫೋಸಿಸ್ ಘೋಷಿಸಿದೆ.