ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ಚಿತ್ರಪಟಗಳು

ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಆ 4 ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು. ಪ್ರತಿ ವರ್ಷದಂತೆ ಈವರ್ಷವೂ ಲಾಲ್ ಬಾಗ್ ನಲ್ಲಿ ಹಲವಾರು ವಿಧ ವಿಧವಾದ ಪುಷ್ಪ ಗಳಿಂದ ಗ್ಲಾಸ್ ಹೌಸ್ ಅನ್ನು ಅಲಂಕರಿಸಲಾಗಿದೆ.  ಈ ಬಾರಿ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರು ಹಾಗೂ ದೇಶವನ್ನು ರಕ್ಷಿಸುತ್ತಿರುವ ಯೋಧರು, ಭಾರತದ ರಕ್ಷಣಾ ಪಡೆಗೆ ಈ ಬಾರಿ ವಿಶೇಷ ನಮನ ಸಲ್ಲಿಸಲಾಗುತ್ತಿದೆ. ವಾಯುಸೇನೆ, ಭೂ ಸೇನೆ, ನೌಕಾಸೇನೆಯನ್ನು ಗುಲಾಬಿ ಹೂವುಗಳಿಂದ ಸಿದ್ದಪಡಿಸಲಾಗಿದೆ. ಸೇನೆಗೆ ಯುವ ಜನತೆ ಹೆಚ್ಚು ಸೇರಬೇಕೆಂಬ ಉದ್ದೇಶದಿಂದ ಈ ಬಾರಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಸಿಯಾಚಿನ್ ಪ್ರದೇಶದಲ್ಲಿ 30 ಡಿಗ್ರಿ ಸೆಲ್ಸಿಯಸ್‍ನಲ್ಲಿ ನಮ್ಮ ಯೋಧರು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬ ಬಗ್ಗೆ ಹೂಗಳಿಂದಲೇ ಚಿತ್ರಿಸಿರುವುದು ವಿಶೇಷವಾಗಿದೆ ಲಾಲ್ ಬಾಗ್ ನಲ್ಲಿ ವರ್ಷಕ್ಕೆ 2 ಬಾರಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುಲಾಗುತ್ತದೆ.  ಈ ವರ್ಷವೂ ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ನಡೆದಿದೆ.  ಇದು 208ನೆ ಫಲಪುಷ್ಪ ಪ್ರದರ್ಶನವಾಗಿದೆ 

  • News18
  • |
First published: