ಇಳಕಲ್ ನಗರದ ಕವಿಶೆಟ್ಟಿ ಗಲ್ಲಿಯಲ್ಲಿ ಮಕ್ಕಳ ಎದುರೇ ರಾಡ್ ನಿಂದ ಹೊಡೆದು ಪತ್ನಿಯನ್ನ ಕೊಲೆಗೈಯಲಾಗಿದೆ. ಗಂಡ ಮೆಹಬೂಬ್ ಬಂಡಿ ಎಂಬುವನು ತನ್ನ ಹೆಂಡತಿ ಮದೀನಾ ಬಂಡಿ (27) ಅನ್ನು ಕೊಂದಿದ್ದಾನೆ. ಇವರಿಗೆ 9 ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದಾರೆ.
2/ 5
ಪತ್ನಿಯನ್ನು ಕೊಲೆಗೈದ ಬಳಿಕ ಮಕ್ಕಳನ್ನ ಮನೆಯಲ್ಲೇ ಕೂಡಿ ಹಾಕಿದ್ದ. ಮಕ್ಕಳು ತಾಯಿಯ ಶವದ ಎದುರು ಗಂಟೆಗಟ್ಟಲೇ ರೋದಿಸುತ್ತಾ ರಾತ್ರಿ ಕಳೆದಿವೆ. ಮಕ್ಕಳನ್ನು ಹೊರಗೂ ಬಿಡದೆ ತಂದೆಯಾದವನು ಅಮಾನುಷವಾಗಿ ನಡೆದುಕೊಂಡಿದ್ದಾನೆ. (ಸಾಂದರ್ಭಿಕ ಚಿತ್ರ)
3/ 5
ತಂದೆ ನಿದ್ದೆಗೆ ಜಾರಿದಾಗ ಮಕ್ಕಳು ಹೊರಬಂದು ಪಕ್ಕದ ಮನೆಯವರಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಇಳಕಲ್ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. (ಸಾಂದರ್ಭಿಕ ಚಿತ್ರ)
4/ 5
ಮೆಹಬೂಬ್ ಪಾನಿಪುರಿ ಅಂಗಡಿ ನಡೆಸ್ತಿದ್ದ, ಮೃತ ಪತ್ನಿ ಟೇಲರಿಂಗ್ ಕೆಲಸ ಮಾಡಿ ಮನೆ ನಡೆಸ್ತಿದ್ದಳು. ಮೆಹಬೂಬ್ ಕುಡಿದು ಬಂದು ನಿತ್ಯ ಪತ್ನಿಯೊಂದಿಗೆ ಜಗಳವಾಡ್ತಿದ್ದ. ಘಟನೆ ನಡೆದ ರಾತ್ರಿಯೂ ದುಡ್ಡಿನ ವಿಚಾರವಾಗಿ ಜಗಳ ತೆಗೆದು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
5/ 5
ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತಿ ಮೆಹಬೂಬ್ ನನ್ನು ಬಂಧಿಸಿದ್ದಾರೆ.