Karnataka Rains: ಇಂದಿನಿಂದ ಈ ಭಾಗದಲ್ಲಿ ಮೂರು ದಿನ ಮಳೆಯ ಅಲರ್ಟ್

Summer Rain: ಕಳೆದ 15 ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಹವಾಮಾನ ಬದಲಾವಣೆ ಆಗ್ತಿದೆ. ಮೋಡ ಕವಿದ ವಾತಾವರಣ ನಿರ್ಮಾಣವಾದ್ರೂ ಉಷ್ಣಾಂಶದಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ.

First published:

  • 17

    Karnataka Rains: ಇಂದಿನಿಂದ ಈ ಭಾಗದಲ್ಲಿ ಮೂರು ದಿನ ಮಳೆಯ ಅಲರ್ಟ್

    ಇನ್ನು ಕೆಲವು ಕಡೆ ತುಂತುರು ಮಳೆಯಾಗುತ್ತಿದೆ. ಮಾರ್ಚ್ ಎರಡನೇ ವಾರದಲ್ಲಿ ರಾಜ್ಯದ ಬಹುತೇಕ ಮಳೆಯಾಗಿತ್ತು. ಇದೀಗ ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Karnataka Rains: ಇಂದಿನಿಂದ ಈ ಭಾಗದಲ್ಲಿ ಮೂರು ದಿನ ಮಳೆಯ ಅಲರ್ಟ್

    ಏಪ್ರಿಲ್ 3, 4 ಮತ್ತು 5 ರಂದು ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಜನರು ಎಚ್ಚರಿಕೆಯಿಂದಿರಬೇಕು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Karnataka Rains: ಇಂದಿನಿಂದ ಈ ಭಾಗದಲ್ಲಿ ಮೂರು ದಿನ ಮಳೆಯ ಅಲರ್ಟ್

    ಎಲ್ಲೆಲ್ಲಿ ಮಳೆ?

    ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಕೊಡಗು, ರಾಮನಗರ, ಚಾಮರಾಜನಗರ,  ಮಂಡ್ಯ ಮತ್ತು ಮೈಸೂರು ಭಾಗಗಳಲ್ಲಿ ಮೂರು ದಿನ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Karnataka Rains: ಇಂದಿನಿಂದ ಈ ಭಾಗದಲ್ಲಿ ಮೂರು ದಿನ ಮಳೆಯ ಅಲರ್ಟ್

    ಉಳಿದಂತೆ ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿನಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್​ ವರೆಗೆ ಉಷ್ಣಾಂಶ ದಾಖಲಾಗಲಿದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸರಾಸರಿ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್​​ಗಳಷ್ಟು ಕಡಿಮೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Karnataka Rains: ಇಂದಿನಿಂದ ಈ ಭಾಗದಲ್ಲಿ ಮೂರು ದಿನ ಮಳೆಯ ಅಲರ್ಟ್

    ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ವಿಜಯಪುರ ಮತ್ತು ಬಳ್ಳಾರಿಯಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್​ವರೆಗೆ ತಾಪಮಾನ ದಾಖಲಾಗಲಿದೆ. ಚಿಕ್ಕಮಗಳೂರು ಮತ್ತು ಹಾಸನ, ಶಿವಮೊಗ್ಗ ಮಲೆನಾಡು ಭಾಗದಲ್ಲಿ ಸಣ್ಣ ಮಳೆ ಆರಂಭಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Karnataka Rains: ಇಂದಿನಿಂದ ಈ ಭಾಗದಲ್ಲಿ ಮೂರು ದಿನ ಮಳೆಯ ಅಲರ್ಟ್

    ಬೆಂಗಳೂರು ಹವಾಮಾನ

    ಬೆಂಗಳೂರು ವಾತಾವರಣ ಗಂಟೆ ಗಂಟೆಗೂ ಬದಲಾಗುತ್ತಿದೆ. ಇಂದು ಗರಿಷ್ಠ 33 ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇಂದು ಭಾಗಶಃ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Karnataka Rains: ಇಂದಿನಿಂದ ಈ ಭಾಗದಲ್ಲಿ ಮೂರು ದಿನ ಮಳೆಯ ಅಲರ್ಟ್

    ರಾಜಧಾನಿಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಜನರು ತಂಪು ಪಾನೀಯ ಮತ್ತು ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES