ಹೆಣ್ಣು ಮಗು ಹುಟ್ಟಿದ್ದಕ್ಕಾಗಿ 10 ಲಕ್ಷ ವರದಕ್ಷಿಣೆಗೆ ಡಿಮ್ಯಾಂಡ್.. ಗಂಡನ ಟಾರ್ಚರ್​​ನಿಂದ ನೊಂದ ಹೆಂಡತಿ!

ಚಿಕ್ಕಬಳ್ಳಾಪುರ: ಕಾಲ ಎಷ್ಟೇ ಬದಲಾದರೂ ವರದಕ್ಷಿಣೆ ಕಿರುಕುಳ, ಹೆಣ್ಣು ಮಗು ಹುಟ್ಟಿದರೆ ಹೀನಾಯವಾಗಿ ನೋಡುವ ಅನಾಚಾರಗಳು ಮಾತ್ರ ಬದಲಾಗುವುದಿಲ್ಲ ಅನಿಸುತ್ತೆ. ಇಲ್ಲೊಬ್ಬ ಗಂಡ ಹೆಣ್ಣು ಮಗುವಿಗೆ ಜನ್ಮ ನೀಡಿದಕ್ಕೆ ಹೆಂಡತಿಗೆ ಟಾರ್ಚರ್ ಕೊಟ್ಟಿದ್ದಾನೆ.

First published:

 • 15

  ಹೆಣ್ಣು ಮಗು ಹುಟ್ಟಿದ್ದಕ್ಕಾಗಿ 10 ಲಕ್ಷ ವರದಕ್ಷಿಣೆಗೆ ಡಿಮ್ಯಾಂಡ್.. ಗಂಡನ ಟಾರ್ಚರ್​​ನಿಂದ ನೊಂದ ಹೆಂಡತಿ!

  ಪಾಪಿ ಗಂಡನ ಹೆಸರು ಕಲಂದರ್ ಖಾನ್. ಗೌರಿಬಿದನೂರು ತಾಲೂಕಿನ ಸರ್ಕಾರಿ ಉದ್ಯೋಗಿಯ ಮಗನಾದ ಈತ ಮಂಚೇನಹಳ್ಳಿ ನಿವಾಸಿ ಸರ್ಕಾರಿ ಅಧಿಕಾರಿಯ ಮಗಳು ಕರಿಷ್ಮಾಳನ್ನು ವರ್ಷದ ಹಿಂದೆ ಮದುವೆಯಾಗಿದ್ದ.

  MORE
  GALLERIES

 • 25

  ಹೆಣ್ಣು ಮಗು ಹುಟ್ಟಿದ್ದಕ್ಕಾಗಿ 10 ಲಕ್ಷ ವರದಕ್ಷಿಣೆಗೆ ಡಿಮ್ಯಾಂಡ್.. ಗಂಡನ ಟಾರ್ಚರ್​​ನಿಂದ ನೊಂದ ಹೆಂಡತಿ!

  ಮದುವೆಯಾದ ಹೊಸದರಲ್ಲೇ ಪದವಿಧರೆ ಪತ್ನಿಗೆ ಕಲಂದರ್ ಕಾಟ ಕೊಡುತ್ತಿದ್ದನಂತೆ. ಆಗಲೇ ಜೋಡಿಯ ಮಧ್ಯೆ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.

  MORE
  GALLERIES

 • 35

  ಹೆಣ್ಣು ಮಗು ಹುಟ್ಟಿದ್ದಕ್ಕಾಗಿ 10 ಲಕ್ಷ ವರದಕ್ಷಿಣೆಗೆ ಡಿಮ್ಯಾಂಡ್.. ಗಂಡನ ಟಾರ್ಚರ್​​ನಿಂದ ನೊಂದ ಹೆಂಡತಿ!

  ಕರಿಷ್ಮಾಗೆ ಮದುವೆಯಾದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಲ್ಯಾಬ್ ಸಹಾಯಕಿಯಾಗಿ ಸರ್ಕಾರಿ ಕೆಲಸ ಸಿಕ್ಕಿದೆ. ಕರಿಷ್ಮಾ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇದ್ದರೆ, ಗಂಡ ಮಾತ್ರ ತಂದೆ ತಾಯಿಯ ಜೊತೆ ಗೌರಿಬಿದನೂರಿನಲ್ಲಿ ಕಾಲ ಕಳೆಯುತ್ತಿದ್ದ. ಇದ್ರಿಂದ ಇಬ್ಬರ ಮಧ್ಯೆ ವೈಮನಸ್ಸು ಮೂಡಿದೆ.

  MORE
  GALLERIES

 • 45

  ಹೆಣ್ಣು ಮಗು ಹುಟ್ಟಿದ್ದಕ್ಕಾಗಿ 10 ಲಕ್ಷ ವರದಕ್ಷಿಣೆಗೆ ಡಿಮ್ಯಾಂಡ್.. ಗಂಡನ ಟಾರ್ಚರ್​​ನಿಂದ ನೊಂದ ಹೆಂಡತಿ!

  ಎರಡು ತಿಂಗಳ ಹಿಂದೆ ಕರಿಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿಗೆ ಮುನ್ನ ಮಗು ಜನಿಸಿದ ಕಾರಣ ತೂಕದಲ್ಲಿ ಹಾಗೂ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದ್ರಿಂದ ರೊಚ್ಚಿಗೆದ್ದ ಕಲಂದರ್ ಹಾಗೂ ಆತನ ತಾಯಿ, ಹೆಣ್ಣು ಮಗು ಜನಿಸಿದ್ದಕ್ಕೆ 10 ಲಕ್ಷ ರೂಪಾಯಿ ವರದಕ್ಷಣೆ ತೆಗೆದುಕೊಂಡು ಮನೆಗೆ ಬಾ ಇಲ್ಲವೆಂದ್ರೆ ಬೇಡ ಅಂತ ಕಿರುಕುಳ ನೀಡುತ್ತಿದ್ದಾರಂತೆ.

  MORE
  GALLERIES

 • 55

  ಹೆಣ್ಣು ಮಗು ಹುಟ್ಟಿದ್ದಕ್ಕಾಗಿ 10 ಲಕ್ಷ ವರದಕ್ಷಿಣೆಗೆ ಡಿಮ್ಯಾಂಡ್.. ಗಂಡನ ಟಾರ್ಚರ್​​ನಿಂದ ನೊಂದ ಹೆಂಡತಿ!

  ನೊಂದ ಕರಿಷ್ಮಾ ಗಂಡನ ಮನೆಗೆ ಹೋಗದೆ ತವರು ಮನೆಯಲ್ಲಿ ಇದ್ದಾಳೆ. ಇಲ್ಲಿಗೂ ಬಂದ ಗಂಡ, ಕರಿಷ್ಮಾ ಹಾಗೂ ಆಕೆಯ ತಂದೆ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಸಂಪ್ರದಾಯದಂತೆ ಬುರ್ಕಾ ಹಾಕಿಕೊಳ್ಳಿ ಅಂತ ಬುದ್ಧಿವಾದ ಹೇಳಿದ್ದಕ್ಕೆ ಇಷ್ಟೆಲ್ಲಾ ರಂಪಾಟ ಮಾಡ್ತಿದ್ದಾರೆ. ಮಾತುಕತೆಗೆ ಹೋದಾಗ ಪರಸ್ಪರ ತಳ್ಳಾಟ ನೂಕಾಟ ಗಲಾಟೆ ಆಗಿದೆ ಎಂದು ಕಲಂದರ್ ಆರೋಪಿಸಿದ್ದಾನೆ.

  MORE
  GALLERIES