ಆನೇಕಲ್: ಪತ್ನಿ ದೂರ ಆಗಿದ್ದಕ್ಕೆ ನೊಂದ ಪತಿಯೋರ್ವ ಪತ್ನಿಗಾಗಿ ಓವರ್ ಹೆಡ್ ಟ್ಯಾಂಕ್ ಏರಿ ಆತ್ಮಹತ್ಯೆಗೆ ಬೆದರಿಕೆ ಹಾಕಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬುಕ್ಕಸಾಗರದಲ್ಲಿ ನಡೆದಿದೆ.
2/ 7
ಜಿಗಣಿ ಸಮೀಪದ ಬುಕ್ಕಸಾಗರ ವಾಸಿ ಗಂಗಾಧರ್ ಆತ್ಮಹತ್ಯೆ ಬೆದರಿಕೆ ಹಾಕಿದ ವ್ಯಕ್ತಿ. ಓವರ್ ಹೆಡ್ ಟ್ಯಾಂಕ್ ಏರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
3/ 7
ಇನ್ನು, ಗಂಗಾಧರ್ ಹಾಗೂ ಪತ್ನಿ ನಡುವೆ ಕುಡಿತ ವಿಚಾರಕ್ಕೆ ನಿತ್ಯ ಗಲಾಟೆ ನಡೆಯುತಿತ್ತಂತೆ. ಗಲಾಟೆಯಿಂದ ಬೇಸತ್ತ ಪತ್ನಿ ಗಂಡನನ್ನು ಬಿಟ್ಟು ತವರಿಗೆ ತೆರಳಿದ್ದಳಂತೆ.
4/ 7
ಪತ್ನಿ ಮನೆ ಬಿಟ್ಟು ಹೋದ ಕಾರಣ ಬೇಸತ್ತ ಗಂಗಾಧರ್, ತನಗೆ ಪತ್ನಿ ಬೇಕು ಎಂದು ಓವರ್ ಹೆಡ್ ಟ್ಯಾಂಕ್ ಏರಿ ಬೆದರಿಕೆ ಹಾಕುವ ಕೆಲಸ ಮಾಡಿದ್ದಾನೆ.
5/ 7
ಘಟನೆ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಜಿಗಣಿ ಪೊಲೀಸರು, ಗಂಗಾದರ್ ಮನವೊಲಿಕೆ ಮಾಡಿ ಕೆಳಗೆ ಇಳಿಸುವ ಪ್ರಯತ್ನ ಮಾಡಿದರು.
6/ 7
ಆದರೆ ಮೊದಲು ಮನವೊಲಿಕೆ ನಿರಾಕರಿಸಿದ ಗಂಗಾಧರ್, ತಂಪು ಪಾನಿಯ ಮತ್ತು ತಿಂಡಿಗಾಗಿ ಬೇಡಿಕೆ ಇಟ್ಟು ಓವರ್ ಹೆಡ್ ಟ್ಯಾಂಕ್ ಮೇಲಿದ್ದಾಗಲೇ ತಿಂಡಿ, ತಂಪು ಪಾನೀಯ ಸೇವನೆ ಮಾಡಿದ್ದಾನೆ. (ಸಾಂದರ್ಭಿಕ ಚಿತ್ರ)
7/ 7
ಸುಮಾರು ಆರು ತಾಸು ಸರ್ಕಸ್ ಬಳಿಕ ಪತ್ನಿಯನ್ನು ವಾಪಸ್ ಕರೆಸುವ ಭರವಸೆ ನೀಡಿ ಗಂಗಾಧರ್ನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆಳಕ್ಕೆ ಇಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)