ನಂಜನಗೂಡು ಪಟ್ಟಣವು ಇಲ್ಲಿ ನೆಲೆಗೊಂಡಿರುವ ನಂಜುಂಡೇಶ್ವರನಿಂದ ನಂಜನಗೂಡು ಎಂದು ಹೆಸರು ಪಡೆಯಿತು. ಕ್ಷೀರಸಾಗರ ಮಂಥನ ಮಾಡಿದಾಗ ಹೊರಬಂದ ವಿಷದಿಂದ ಭೂಮಿಯ ಜೀವಸಂಕುಲವನ್ನು ರಕ್ಷಿಸಲು ಶಿವನು ಆ ವಿಷವನ್ನು ಕುಡಿದು ನಂಜುಂಡನಾಗಿ ಈ ಕ್ಷೇತ್ರದಲ್ಲಿ ನೆಲೆಸಿದನು ಎಂಬ ಪ್ರತೀತಿ ಇದೆ. ನಂಜನಗೂಡು ನದಿಯಲ್ಲಿ ಮಾಡುವ ತೀರ್ಥ ಸ್ನಾನ ಮತ್ತು ದೈವದ ದರ್ಶನ ಪಾಪ ವಿಮೋಚಕ ಗುಣವುಳ್ಳದೆಂದು ಹೇಳಲಾಗುತ್ತದೆ.