ಹಾವಿಗೆ ಆಪರೇಶನ್ ಮಾಡಿ ಟ್ಯೂಮರ್ ತೆಗೆದ ಅಪರೂಪದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ. (ಸಾಂಕೇತಿಕ ಚಿತ್ರ)
2/ 8
ಧಾರವಾಡ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಪಶು ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿ ಹಾವನ್ನು ರಕ್ಷಣೆ ಮಾಡಲಾಗಿದೆ.
3/ 8
ಪ್ರಾಣಿಪ್ರಿಯರಾಗಿರುವ ಧಾರವಾಡದ ಸೋಮಶೇಖರ್ ಚೆನ್ನಶೆಟ್ಟಿಯವರಿಗೆ ಎರಡು ದಿನಗಳ ಹಿಂದೆ ಸ್ಥಳೀಯರೊಬ್ಬರು ತಮ್ಮ ಮನೆಯಲ್ಲಿ ಹಾವು ಪತ್ತೆಯಾಗಿದ್ದಾಗಿ ಫೋನ್ ಮಾಡಿದ್ದರು. ಸೋಮಶೇಖರ್ ಚೆನ್ನಶೆಟ್ಟಿ ತಕ್ಷಣ ಆ ಮನೆಗೆ ತೆರಳಿದ್ದಾರೆ.
4/ 8
ಅಲ್ಲಿ ಅವರಿಗೆ ಕನ್ನಡದಲ್ಲಿ ಆಭರಣದ ಹಾವು ಎಂದು ಕರೆಯಲ್ಪಡುವ ಈ ಹಾವು ಸಿಕ್ಕಿದೆ.
5/ 8
ಅತ್ಯಂತ ಸುಂದರ ಹಾವುಗಳಲ್ಲಿ ಒಂದು ಎಂದೇ ಈ ಹಾವನ್ನು ಪರಿಗಣಿಸಲಾಗುತ್ತೆ. ಆದರೆ ಆ ಹಾವು ಅನಾರೋಗ್ಯದಿಂದ ಬಳಲುತ್ತಿರುವುದು ಸಹ ಪತ್ತೆಯಾಗಿದೆ.
6/ 8
ರಕ್ಷಿಸಿದ ಹಾವಿನ ಹೆಡೆಯ ಮೇಲೆ ಉಬ್ಬು ಕಂಡುಬಂದಿದೆ. ಈ ಉಬ್ಬಿನ ಬೆನ್ನುಬಿದ್ದ ಡಾ. ಅನಿಲ್ ಪಾಟೀಲ್ ಹಾಗೂ ಸೋಮಶೇಖರ್ ಚೆನ್ನಶೆಟ್ಟಿ ಎರಡು ದಿನ ಅಧ್ಯಯನ ನಡೆಸಿ ಕೊನೆಗೂ ದುರ್ಮಾಂಸ ಬೆಳೆದಿರುವುದನ್ನು ಪತ್ತೆಹಚ್ಚಿದ್ದಾರೆ.
7/ 8
ನಂತರ ಇಂದು ಮಧ್ಯಾಹ್ನ ಆಪರೇಶನ್ ನಡೆಸಿ ಹಾವಿನ ಹೆಡೆಯ ಮೇಲಿನ ದುರ್ಮಾಂಸವನ್ನು ಬೇರ್ಪಡಿಸಿದ್ದಾರೆ.
8/ 8
ಸದ್ಯ ಹಾವು ಆರೋಗ್ಯವಾಗಿದೆ. ಪೂರ್ಣ ಚೇತರಿಕೆ ಕಂಡ ಮೇಲೆ ಹಾವನ್ನು ಮರಳಿ ಕಾಡಿಗೆ ಬಿಡಲಾಗುವುದು ಎಂದು ಡಾ. ಅನಿಲ್ ಪಾಟೀಲ್ ಹಾಗೂ ಪ್ರಾಣಿ ತಜ್ಞ ಸೋಮಶೇಖರ್ ಚೆನ್ನಶೆಟ್ಟಿ ತಿಳಿಸಿದ್ದಾರೆ.