ಯಶವಂತಪುರ-ಹಿಂದೂಪುರ (ಆಂಧ್ರಪ್ರದೇಶ) ಎಕ್ಸ್ಪ್ರೆಸ್ ನಡುವಿನ ಓಡಾಟ ಮೇ 21ಕ್ಕೆ ಅಂತ್ಯಗೊಂಡಿರುತ್ತೆ. ಆದರೆ ಬೇಸಿಗೆ ವಿಶೇಷ ಈ ಎಕ್ಸ್ಪ್ರೆಸ್ ರೈಲನ್ನು ಮೇ 22 ರಂದು ಮತ್ತೆ ವಿಸ್ತರಿಸಿ ಆದೇಶಿಸಲಾಗಿದ್ದು, ಈ ರೈಲು ಮುಂದಿನ ಆದೇಶದವರೆಗೂ ಈ ಹಿಂದಿನ ವೇಳಾಪಟ್ಟಿಯಂತೆಯೇ ಓಡಾಟ ನಡೆಸಲಿದೆ. ಯಶವಂತಪುರ-ಹಿಂದೂಪುರ ಹಾಗೂ ಹಿಂದೂಪುರ-ಯಶವಂತಪುರ ನಡುವೆ ಓಡಾಟ ನಡೆಸಲಿದೆ, ಪರಿಷ್ಕೃತ ಆದೇಶದ ಲಾಭವನ್ನು ಪ್ರಯಾಣಿಕರು ಪಡೆಯಬಹುದಾಗಿದೆ.