Hubballi News: ನೈಋತ್ಯ ರೈಲ್ವೆಯಿಂದ ಪ್ರಮುಖ ಅಪ್​ಡೇಟ್, ಹಲವು ರೈಲುಗಳಲ್ಲಿ ಭಾರೀ ಬದಲಾವಣೆ

ರೈಲ್ವೆ ಹಳಿಯ ವಿಸ್ತರಣೆ, ದ್ವಿಪಥಗೊಳಿಸಿರುವುದು ಕೂಡಾ ಈ ವಲಯದಲ್ಲಿನ ರೈಲುಗಳ ಓಡಾಟಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ.

First published:

  • 19

    Hubballi News: ನೈಋತ್ಯ ರೈಲ್ವೆಯಿಂದ ಪ್ರಮುಖ ಅಪ್​ಡೇಟ್, ಹಲವು ರೈಲುಗಳಲ್ಲಿ ಭಾರೀ ಬದಲಾವಣೆ

    ನೈಋತ್ಯ ರೈಲ್ವೆ ಕಳೆದ 2022-23ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ ವಲಯವು ರೈಲುಗಳ ಸುಗಮ ಸಂಚಾರ ಹೆಚ್ಚಳ ಮಾಡುವಲ್ಲಿ ಯಶಸ್ವಿಯಾಗಿದೆ. ಸರಕು ಸಾಗಣೆಯ ಗೂಡ್ಸ್ ರೈಲುಗಳ ಓಡಾಟದಲ್ಲೂ ಭಾರೀ ಬದಲಾವಣೆ ತರಲು ಸಾಧ್ಯವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Hubballi News: ನೈಋತ್ಯ ರೈಲ್ವೆಯಿಂದ ಪ್ರಮುಖ ಅಪ್​ಡೇಟ್, ಹಲವು ರೈಲುಗಳಲ್ಲಿ ಭಾರೀ ಬದಲಾವಣೆ

    ಏಪ್ರಿಲ್ 2022 ರಲ್ಲಿ 13.97ಕಿಲೋ ಮೀಟರ್ ಇದ್ದ ಸರಾಸರಿ ವೇಗವನ್ನು 2023ರ ಏಪ್ರಿಲ್ ವೇಳೆಗೆ ಸರಾಸರಿ ವೇಗವನ್ನು 21.6 ಕಿಲೋ ಮೀಟರ್​ಗೆ ಹೆಚ್ಚಿಸುವಲ್ಲಿ ವಲಯವು ಯಶಸ್ವಿಯಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Hubballi News: ನೈಋತ್ಯ ರೈಲ್ವೆಯಿಂದ ಪ್ರಮುಖ ಅಪ್​ಡೇಟ್, ಹಲವು ರೈಲುಗಳಲ್ಲಿ ಭಾರೀ ಬದಲಾವಣೆ

    ಭಾರತದ ಎಲ್ಲ ರೈಲ್ವೆ ವಲಯಗಳಿಗೆ ಹೋಲಿಸಿದರೆ ಹುಬ್ಬಳ್ಳಿ ಕೇಂದ್ರೀಕೃತವಾಗಿರುವ ನೈಋತ್ಯ ರೈಲ್ವೆ ವಲಯ ಅತ್ಯುತ್ತಮ ಸಾಧನೆ ಮಾಡಿದೆ. ರೈಲು ಹಳಿಗಳ ದ್ವಿಗುಣ, ರೈಲುಗಳ ಸಂಚಾರ, ಪ್ರಯಾಣಿಕರ ದಟ್ಟಣೆ ನಿಯಂತ್ರಣ ಹೀಗೆ ಎಲ್ಲ ಮಾದರಿಯಲ್ಲೂ ನೈಋತ್ಯ ರೈಲ್ವೆ ವಲಯವು ಗುರುತರ ಸಾಧನೆ ಮಾಡಿದೆ ಎಂದು ವಲಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Hubballi News: ನೈಋತ್ಯ ರೈಲ್ವೆಯಿಂದ ಪ್ರಮುಖ ಅಪ್​ಡೇಟ್, ಹಲವು ರೈಲುಗಳಲ್ಲಿ ಭಾರೀ ಬದಲಾವಣೆ

    ಮಾರ್ಚ್ 2022ರಲ್ಲಿ ಗದಗದಲ್ಲಿ ಆದ ಬೈಪಾಸ್ ಕಾಮಗಾರಿಯಿಂದ ಈ ಸಾಧನೆ ಸಾಧ್ಯವಾಗಿದೆ. ಜೊತೆಗೆ ಈ ಬೈಪಾಸ್ ಕಾಮಗಾರಿಯಿಂದಾಗಿ ಗೋವಾ ಅಥವಾ ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಬರುವ ಗೂಡ್ಸ್ ರೈಲುಗಳ ಇಂಜಿನ್ ಗಳು ಶೀಘ್ರ ತಲುಪಲು ಸಾಧ್ಯವಾಗಿದೆ. ಈ ಬೈಪಾಸ್‌ ಕಾಮಗಾರಿಯಿಂದ ಗದಗ ಜಂಕ್ಷನ್‌ ಗೆ ಬರುವ ಸಂಕಷ್ಟವೂ ಈಗ ಗೂಡ್ಸ್‌ ರೈಲುಗಳಿಗೆ ಇಲ್ಲದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Hubballi News: ನೈಋತ್ಯ ರೈಲ್ವೆಯಿಂದ ಪ್ರಮುಖ ಅಪ್​ಡೇಟ್, ಹಲವು ರೈಲುಗಳಲ್ಲಿ ಭಾರೀ ಬದಲಾವಣೆ

    ಇನ್ನು 2019ರ ಸೆಪ್ಟಂಬರ್​ನಲ್ಲಿ ಹುಬ್ಬಳ್ಳಿಯಲ್ಲಿ ನಿರ್ಮಿಸಲಾದ ಬೈಪಾಸ್ ಕೂಡಾ ಅಲ್ಲಿಂದ ಹಾದು ಹೋಗುವ ರೈಲುಗಳಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಹುಬ್ಬಳ್ಳಿ ಜಂಕ್ಷನ್ ನಿಲ್ದಾಣದಲ್ಲಿ ಎಕ್ಸ್​ಪ್ರೆಸ್, ಮೇಲ್ ಸರ್ವಿಸ್ ಹಾಗೂ ಗೂಡ್ಸ್ ರಸ್ತೆಗಳು ನೇರವಾಗಿ ಯಾವುದೇ ಅಡೆತಡೆಯಿಲ್ಲದೇ ಸಂಚರಿಸುವಂತಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Hubballi News: ನೈಋತ್ಯ ರೈಲ್ವೆಯಿಂದ ಪ್ರಮುಖ ಅಪ್​ಡೇಟ್, ಹಲವು ರೈಲುಗಳಲ್ಲಿ ಭಾರೀ ಬದಲಾವಣೆ

    ನೈಋತ್ಯ ರೈಲ್ವೆ ವಲಯವು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುದ್ದೀಕರಣ ನಡೆಸುವಲ್ಲಿ ಯಶಸ್ವಿಯಾಗಿದೆ. 2022-23ನೇ ಸಾಲಿನಲ್ಲಿ 874 ರೂಟ್ ಕಿಲೋಮೀಟರ್ (RKM) ನಲ್ಲಿ ವಿದ್ಯುದ್ದೀಕರಣ ಸಾಧ್ಯವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Hubballi News: ನೈಋತ್ಯ ರೈಲ್ವೆಯಿಂದ ಪ್ರಮುಖ ಅಪ್​ಡೇಟ್, ಹಲವು ರೈಲುಗಳಲ್ಲಿ ಭಾರೀ ಬದಲಾವಣೆ

    ಇದು ಆ ಸಾಲಿನಲ್ಲಿ 205 ಕೋಟಿ ರೂಪಾಯಿ ಮೌಲ್ಯದ ಡೀಸೆಲ್ ವೆಚ್ಚವನ್ನು ಉಳಿಸಿದೆ. ಜೊತೆಗೆ 24 ರೈಲುಗಳನ್ನು ಕೂಡಾ ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು ಸಾಧ್ಯವಾಗಿದೆ ಎಂದು ನೈಋತ್ಯ ವಲಯ ರೈಲ್ವೆ ವಿಭಾಗವು ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Hubballi News: ನೈಋತ್ಯ ರೈಲ್ವೆಯಿಂದ ಪ್ರಮುಖ ಅಪ್​ಡೇಟ್, ಹಲವು ರೈಲುಗಳಲ್ಲಿ ಭಾರೀ ಬದಲಾವಣೆ

    ಇನ್ನು ರೈಲ್ವೆ ಹಳಿಯ ವಿಸ್ತರಣೆ, ದ್ವಿಪಥಗೊಳಿಸಿರುವುದು ಕೂಡಾ ಈ ವಲಯದಲ್ಲಿನ ರೈಲುಗಳ ಓಡಾಟಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ವಿಶೇಷವಾಗಿ ಯಲಹಂಕ-ಪೆನುಕೊಂಡ ಹಾಗೂ ಹುಬ್ಬಳ್ಳಿ-ಬೆಂಗಳೂರು ರೈಲ್ವೆ ಮಾರ್ಗದ ದ್ವಿಪಥಗೊಳಿಸುವಿಕೆ ಈ ಭಾಗದಲ್ಲಿನ ರೈಲುಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Hubballi News: ನೈಋತ್ಯ ರೈಲ್ವೆಯಿಂದ ಪ್ರಮುಖ ಅಪ್​ಡೇಟ್, ಹಲವು ರೈಲುಗಳಲ್ಲಿ ಭಾರೀ ಬದಲಾವಣೆ

    ಇಷ್ಟೇ ಅಲ್ದೇ ರೈಲುಗಳ ವೇಗ ಹೆಚ್ಚಳ, ಅನಗತ್ಯ ತಿರುವುಗಳ ತೆರವುಗೊಳಿಸುವಿಕೆ ಇವೆಲ್ಲವೂ ಹುಬ್ಬಳ್ಳಿ ಕೇಂದ್ರ ಹೊಂದಿರುವ ನೈಋತ್ಯ ರೈಲ್ವೆ ವಲಯವು ದೇಶದಲ್ಲೇ ಅತ್ಯುತ್ತಮ ಸಾಧನೆ ಮಾಡಲು ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES