ವಾಟ್ಸಪ್ ಸ್ಟೇಟಸ್ ಗೆ ಯುವತಿಯ ಎಡಿಟ್ ಮಾಡಿದ ಫೊಟೋ ಇರಿಸಿ ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನೊಂದ ಯುವತಿ ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಶುಭಂ ಮಧುಕರ್ ವಿರುದ್ಧ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶುಭಂ ಮಧುಕರ್ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಕಾಲೇಜಿನಲ್ಲಿ ತನ್ನ ಜೂನಿಯರ್ ಆಗಿರುವ ಯುವತಿಯ ಸ್ನೇಹ ಸಂಪಾದಿಸಿದ್ದನು. ನಂತರ ಪ್ರೀತಿ ಮೋಸದ ಬಲೆ ಹೆಣೆದು ಯುವತಿಯ ಮೊಬೈಲ್ ನಂಬರ್ ಸಹ ಪಡೆದುಕೊಂಡಿದ್ದನು.
2/ 5
ಯುವತಿ ಸಹ ಶುಭಂ ಮಧುಕರ್ ಮಾತು ನಂಬಿ ಆತನ ಮೋಸದ ಬಲೆಯಲ್ಲಿ ಸಿಲುಕಿದ್ದಳು. ಪ್ರತಿನಿತ್ಯ ಚಾಟಿಂಗ್ ಮಾಡುವ ಮೂಲಕ ಶುಭಂ ಯುವತಿಯ ಸಲುಗೆ ಬೆಳೆಸಿಕೊಂಡಿದ್ದನು.
3/ 5
ಕೆಲ ದಿನಗಳ ಹಿಂದೆ ನಗ್ನ ವಿಡಿಯೋ ಕಾಲ್ ಮಾಡಿ ಆಕೆಯ ಜೊತೆ ಮಾತನಾಡಿಕೊಂಡಿದ್ದಾನೆ. ಈ ವೇಳೆ ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದಾನೆ. ನವೆಂಬರ್ 11ರಂದು ಯುವತಿಯ ಫೋಟೋ ಎಡಿಟ್ ಮಾಡಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ.
4/ 5
ಈ ಘಟನೆಯಿಂದ ನೊಂದಿರುವ ಯುವತಿ ಶುಭಂ ವಿರುದ್ಧ ದೂರು ದಾಖಲಿಸಿದ್ದಾಳೆ. ಆರೋಪಿ ಶುಭಂ ಮಧುಕರ್ ಮಹಾರಾಷ್ಟ್ರ ಮೂಲದವನು ಎಂದು ತಿಳಿದು ಬಂದಿದ್ದು, ವಿದ್ಯಾಭ್ಯಾಸಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದಾನೆ. ಪೊಲೀಸರು ಯುವತಿಯ ಗುರುತನ್ನು ರಹಸ್ಯವಾಗಿ ಇರಿಸಿದ್ದಾರೆ.
5/ 5
ಸೈಬರ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಯೋಧನ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸಲಾಗುತ್ತಿದೆ. ಅಪರಿಚತರಿಂದ ಬರುವ ಕರೆಗಳು ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಯಾರಿಗೂ ತಮ್ಮ ಖಾಸಗಿ ಮಾಹಿತಿಯನ್ನು ಬಿಟ್ಟುಕೊಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡುತ್ತಿರುತ್ತಾರೆ.