ಧ್ವನಿವರ್ಧಕ ಬಳಕೆ ವಿವಾದ ನಡುವೆ Hubli-Dharwadದಲ್ಲಿ 268 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್
ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿ ಧ್ವನಿ ವರ್ಧಕ ತೆರವುಗೊಳಿಸುವಂತೆ ಒತ್ತಾಯ ಹೆಚ್ಚಾಗಿದೆ. ರಾಜ್ಯದ ವಿವಿಧೆಡೆ ಮಸೀದಿಗಳಲ್ಲಿ ಅಜಾನ್ ಅನ್ನು ಧ್ವನಿ ವರ್ಧಕ ಬಳಸಿ ಕೂಗಲಾಗುತ್ತಿದೆ.
ನ್ಯಾಯಾಲಯದ ಆದೇಶದಂತೆ ನಿಯಮ ಉಲ್ಲಂಘನೆ ಆರೋಪ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಢದ ಧಾರ್ಮಿಕ ಮಂದಿರಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
2/ 8
ಧ್ವನಿವರ್ಧಕಗಳು ಹೊರಸೂಸುವ ಶಬ್ಧ ನಿಗದಿ ಪಡಿಸಿದ್ದ ಹೆಚ್ಚಿನ ಡೆಬಲ್ ಹೊಂದಿರುವ ಕಾರಣಕ್ಕೆ ಮಂದಿ, ಮಸೀದಿ ಸೇರಿ 268 ಕೇಂದ್ರಗಳಿಗೆ ಪೊಲೀಸ್ ಕಮಿಷನರ್ ನೋಟಿಸ್ ಜಾರಿ ಮಾಡಿದ್ದಾರೆ.
3/ 8
ಆಯಾ ಪೊಲೀಸ್ ಠಾಣಾಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿನ ಮಸೀದಿ, ಮಂದಿರ, ಚರ್ಚ್ ಸೇರಿ ಧ್ವನಿವರ್ಧಕ ಬಳಸುವ ಇತರೆ ಕೇಂದ್ರಗಳಿಗೆ ನೋಟಿಸ್ ನೀಡಲು ಆದೆಶ ನೀಡಲಾಗಿದೆ.
4/ 8
ಈ ಧಾರ್ಮಿಕ ಕೇಂದ್ರಗಳ ಪೈಕಿ 150 ಮಸೀದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಶಬ್ಧ ಮಾಡುವುದು ನಿಷೇಧಿಸಲಾಗಿದೆ.
5/ 8
ಈಗಾಗಲೇ ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಿನ ಡೆಸಿಬಲ್ ಶಬ್ಧ ಹೊರ ಸೂಸದಂತೆ ತಿಳಿಸಲಾಗಿದ್ದು, ನಿಯಮ ಮೀರಿದ್ದ ಅನೇಕ ದೇಗುಲಗಳಿಗೆ ನೋಟೀಸ್ ನೀಡಲಾಗಿದೆ.
6/ 8
ಅದರಂತೆ ಹುಬ್ಬಳ್ಳಿ- ಧಾರವಾಡ ಕಮಿಷನರ್ ಕೂಡ ಶಬ್ಧ ಮಾಲಿನ್ಯದ ಕಾನೂನಿನ ಅಡಿ ನಿಯಮ ಉಲ್ಲಂಘನೆ ಆಗಿದೆ ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.
7/ 8
ಧ್ವನಿವರ್ಧಕವನ್ನು ಅಝಾನ್, ಸಾವು, ಸಮಾಧಿಯ ಸಮಯ ಮತ್ತು ಚಂದ್ರನನ್ನು ನೋಡುವುದು ಸೇರಿದಂತೆ ಇನ್ನಿತರ ಪ್ರಮುಖ ಘೋಷಣೆಗಳಿಗೆ ಮಾತ್ರ ಬಳಸಬೇಕೆಂದು ಆದೇಶ ನೀಡಲಾಗಿದೆ
8/ 8
2010ರ ಶಬ್ದ ಮಾಲಿನ್ಯ ಕಾನೂನಿನ ಪ್ರಕಾರ ನಿಗದಿಪಡಿಸಿದ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಉಪಯೋಗಿಸಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಶಬ್ದ ಮಾಲಿನ್ಯ ಕಾನೂನಿನಡಿ ಜವಾಬ್ದಾರರಾಗಿರುತ್ತೀರಿ ಎಂದು ಪೊಲೀಸರು ನೋಟಿಸ್ ನೀಡಿದ್ದಾರೆ.