ಬಾದಾಮಿ ಹೆಸರು ಕೇಳಿದ ತಕ್ಷಣ ನೆನಪಾಗುವುದು ಶಕ್ತಿ ಕೇಂದ್ರ ಬನಶಂಕರಿ ದೇವಿ. ಬಾಗಲಕೋಟೆಯಲ್ಲಿರುವ ಬಾದಾಮಿ ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರ. ಹಾಗಾದರೆ ಬಾದಾಮಿಯ ಬನಶಂಕರಿ ದೇವಿಯ ಇತಿಹಾಸವೇನು ಎಂಬ ಕುತೂಹಲ ನಿಮಗೂ ಇದ್ದಿರಬೇಕಲ್ಲವೇ? ಇಲ್ಲಿದೆ ನೋಡಿ ಆ ದೇವಿಯ ಕಥೆ.
2/ 7
ಬಾದಾಮಿ ಬಳಿಯ ಚೋಳಚಗುಡ್ಡದಲ್ಲಿದೆ ಲಕ್ಷಾಂತರ ಭಕ್ತರ ಆರಾಧ್ಯ ತಾಣ ಬನಶಂಕರಿ ದೇಗುಲ. ಈ ದೇವಾಲಯವು ತಿಲಕಾರಣ್ಯ ಅರಣ್ಯದಲ್ಲಿ ನೆಲೆಸಿರುವುದರಿಂದ 'ಶಾಕಾಂಬರಿ' 'ಬನಶಂಕರಿ ಅಥವಾ ವನಶಂಕರಿ' ಎಂದು ಸಹ ಭಕ್ತರು ಆರಾಧಿಸುತ್ತಾರೆ.
3/ 7
ನೀವು ಇತಿಹಾಸದ ಪುಟಗಳಲ್ಲಿ ಬಾದಾಮಿ ಚಾಲುಕ್ಯರ ಹೆಸರನ್ನು ಕೇಳಿರಬಹುದು. ಅದೇ ರಾಜ ಮನೆತನದ ಮನೆದೇವರು ಬನಶಂಕರಿ ದೇವಿ. ಬನಶಂಕರಿ ದೇವಿಯ ಇನ್ನೊಂದು ಹೆಸರು ಶಾಕಾಂಬರಿ ದೇವಿ. ಅರ್ಥಾತ್ ಶಾಕಾಂಬರಿ ಎಂದರೆ ತರಕಾರಿಗಳ ದೇವರು! ಅಲ್ಲದೇ ಬನಶಂಕರಿಯಲ್ಲಿ ಬನ ಎಂದರೆ ಹಸಿರು ಅರಣ್ಯ, ಹೀಗಾಗಿ ಅರಣ್ಯದ ಸಿರಿ ಸಂಪತ್ತಿನ ದೇವರು ಬನಶಂಕರಿ ಮಾತೆ.
4/ 7
ಬನಶಂಕರಿ ದೇವಿ ಮತ್ಯಾರೂ ಅಲ್ಲ, ಪಾರ್ವತಿಯ ಅಪರಾವತಾರ ಎಂದೇ ನಂಬಲಾಗಿದೆ. ಕರ್ನಾಟಕ ಒಂದೇ ಅಲ್ಲ, ಮಹಾರಾಷ್ಟ್ರದಿಂದಲೂ ಬನಶಂಕರಿಯ ದರ್ಶನಕ್ಕೆ ಭಕ್ತರು ಹುಡುಕಿ ಬರುತ್ತಾರೆ.
5/ 7
ಬನಶಂಕರಿ ದೇವಿಯ ಜಾತ್ರೆ ಪ್ರತಿವರ್ಷ ಅದ್ದೂರಿಯಾಗಿ ನಡೆಯುತ್ತದೆ. ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ನಡೆಯುವ ಈ ಜಾತ್ರೆ ಕರ್ನಾಟಕದ ಅತೀ ದೊಡ್ಡ ಜಾತ್ರೆಗಳಲ್ಲೊಂದು ಎಂದೇ ಕರೆಸಿಕೊಳ್ಳುತ್ತದೆ.
6/ 7
ಅಂದಹಾಗೆ ಬಾದಾಮಿ ಬನಶಂಕರಿಗೆ ಉತ್ತರ ಪ್ರದೇಶದ ಸಂಬಂಧವಿದೆ! ಹೌದು, ಬನಶಂಕರಿ ದೇಗುಲದ ಮೂಲ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿದೆ. ಇದನ್ನು ಶಕ್ತಿಪೀಠ ಶಾಕಾಂಬರಿ ದೇವಿ ಎಂದೂ ಕರೆಯಲಾಗುತ್ತದೆ.
7/ 7
ಮಂಗಳವಾರ, ಶುಕ್ತವಾರಗಳಂದು ಬಾದಾಮಿ ಬನಶಂಕರಿ ದೇವಿಯ ದರ್ಶನ ಮಾಡುವುದು ಅತ್ಯಂತ ಶುಭಕರ ಎಂದು ಹೇಳಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ, ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಭಕ್ತರು ದೇವಿಯ ದರ್ಶನ ಮಾಡಬಹುದು.
First published:
17
Banashankari Temple History: ಬನಶಂಕರಿ ದೇವಿಯ ಹೆಸರಿನ ಹಿಂದಿದೆ ಈ ವಿಶೇಷ ಅರ್ಥ!