ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧಿಸಿದ್ದಂತೆ ಪ್ರಮುಖ ಆರೋಪಿಯಾಗಿದ್ದ ಧರ್ಮ ಗುರು ವಸೀಂ ಪಠಾಣನನ್ನು ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಮುಂಬೈನಲ್ಲಿ ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ
2/ 8
ಮುಂಬೈನಿಂದ ಮಧ್ಯಾಹ್ನ ಹುಬ್ಬಳ್ಳಿ ಠಾಣೆಗೆ ಕರೆತಂದಿದ್ದ ಪೊಲೀಸರು, ಸಂಜೆ ರೋಜಾ ಬಿಡುವ ಸಮಯ ಆಗಿದ್ದರಿಂದ ವಾಸಿಂ ಗೆ ರೋಜಾ ಬಿಡಲು ಅವಕಾಶ ಮಾಡಿಕೊಟ್ಟರು. (ಸಾಂದರ್ಭಿಕ ಚಿತ್ರ)
3/ 8
ಮುಂಬೈನಿಂದ ಮಧ್ಯಾಹ್ನ ಠಾಣೆಗೆ ಕರೆತಂದಿದ್ದ ಪೊಲೀಸರು ಸಂಜೆ ರೋಜಾ ಬಿಡುವ ಸಮಯ ಆಗಿದ್ದರಿಂದ , ವಾಸಿಂ ಗೆ ರೋಜಾ ಬಿಡಲು ಅವಕಾಶ ಮಾಡಿಕೊಟ್ಟರು. (ಸಾಂದರ್ಭಿಕ ಚಿತ್ರ)
4/ 8
ಸದ್ಯ ವಿಚಾರಣೆ ಬಳಿಕ ಆರೋಪಿಯನ್ನು ಪೊಲೀಸರು ಕಿಮ್ಸ್ ಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಿದ್ದು, ನಂತರ ನ್ಯಾಯಾಧೀಶರ ಎದುರು ಹಾಜರು ಪಡಿಸಲಿದ್ದಾರೆ. (ಸಾಂದರ್ಭಿಕ ಚಿತ್ರ)
5/ 8
ಪ್ರಕರಣ ಸಂಬಂಧ ಮಾತನಾಡಿರುವ ಪೊಲೀಸ್ ಆಯುಕ್ತ ಲಾಭೂ ರಾಮ್, ವಾಸೀಂ ನನ್ನು ಬೆಳಗಾವಿಯಲ್ಲಿ ಬಂಧನ ಮಾಡಲಾಗಿದೆ. ಪ್ರಕರಣ ತನಿಖೆಯಲ್ಲಿದೆ ಎಲ್ಲ ಮಾಹಿತಿ ಬಹಿರಂಗ ಮಾಡಲ್ಲ ಸಾಧ್ಯವಿಲ್ಲ. (ಸಾಂದರ್ಭಿಕ ಚಿತ್ರ)
6/ 8
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಭಿಷೇಕ ಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪ್ರಕರಂ ಸಂಬಂಧ ಎಷ್ಟು ಜನ ರೌಡಿಶೀಟರ್ಗಳನ್ನು ಬಂಧಿಸಲಾಗಿದೆ ಎಂಬುದನ್ನು ನಂತರ ತಿಳಿಸಲಾಗುವುದು. (ಸಾಂದರ್ಭಿಕ ಚಿತ್ರ)
7/ 8
ಪ್ರಕರಣ ಸಂಬಂಧಿಸಿ ಇದುವರೆಗೆ 12 ಕೇಸ್ ದಾಖಲು ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 134 ಜನರ ಬಂಧನ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
8/ 8
ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಅವಳಿ ನಗರದಲ್ಲಿ ಸೂಕ್ತ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ. ಶಾಂತಿ ಕಾಪಾಡೊ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದರು (ಸಾಂದರ್ಭಿಕ ಚಿತ್ರ)