ಶಾಸಕಾಂಗದ ಸಭೆ ಪೂರ್ಣಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಈಗಲ್ಟನ್ ರೆಸಾರ್ಟ್ ಸೇರಿಕೊಂಡಿದ್ದಾರೆ. ಕೆಲ ದಿನಗಳ ಕಾಲ ಅವರು ಇಲ್ಲಿಯೇ ತಂಗಲಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಡೆಗೆ ಬಿಜೆಪಿ ಕೆಂಡಕಾರಿದೆ. ಆಪರೇಷನ್ ಕಮಲ ಬಹುತೇಕ ವಿಫಲಗೊಂಡಂತೆ ಎನ್ನುವ ಮಾತುಗಳು ಕೇಳಿ ಬಂದಿವೆ. ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿರುವ ಈ ರೆಸಾರ್ಟ್ ಹೇಗಿದೆ ಎಂಬುದರ ಝಲಕ್ ಇಲ್ಲಿದೆ.