Holiday Plan: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಿ, ಕೊಡಗಿನ ಕೂಲ್ ವೆದರ್‌ನಲ್ಲಿ ಪ್ರವಾಸ ಮಾಡಿ!

ಕೊಡಗು ಅಂದರೆ ಪ್ರಕೃತಿ ಸೌಂದರ್ಯಕ್ಕೆ ಮತ್ತೊಂದು ಹೆಸರು. “ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ? ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ? ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ? ಅಲ್ಲಿ ಆ ಕಡೆ ನೋಡಲಾ! ಅಲ್ಲಿ ಕೊಡಗರ ನಾಡಲಾ! ಅಲ್ಲಿ ಕೊಡವರ ಬೀಡಲಾ!” ಅಂತ ಪಂಜೆ ಮಂಗೇಶರಾಯರು ಸುಮ್ಮನೆ ಹಾಡಿದ್ದಲ್ಲ. ಇಂತಹ ಪ್ರಕೃತಿಯ ಮಡಿಲಲ್ಲಿ ಬೇಸಿಗೆ ಟ್ರಿಪ್ ಕೈಗೊಂಡ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಹಾಗಿದ್ರೆ ಮತ್ಯಾಕೆ ತಡ, ಬನ್ನಿ ಕೊಡಗು ಪ್ರವಾಸಕ್ಕೆ ಹೋಗಿ ಬರೋಣ…

First published:

  • 18

    Holiday Plan: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಿ, ಕೊಡಗಿನ ಕೂಲ್ ವೆದರ್‌ನಲ್ಲಿ ಪ್ರವಾಸ ಮಾಡಿ!

    ದಕ್ಷಿಣ ಭಾರತದ ಪ್ರಮುಖ ನದಿಯಾದ ಕಾವೇರಿ ಹುಟ್ಟುವ ಉಗಮ ಸ್ಥಾನವೇ ತಲಕಾವೇರಿ. ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ. ಜಿಲ್ಲಾಕೇಂದ್ರವಾದ ಮಡಿಕೇರಿಯಿಂದ ಸುಮಾರು 45 ಕಿ.ಮೀಗಳ ದೂರದಲ್ಲಿದೆ. ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣ (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. (ಚಿತ್ರಕೃಫೆ: internet)

    MORE
    GALLERIES

  • 28

    Holiday Plan: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಿ, ಕೊಡಗಿನ ಕೂಲ್ ವೆದರ್‌ನಲ್ಲಿ ಪ್ರವಾಸ ಮಾಡಿ!

    ಭಾಗಮಂಡಲವು ಕೊಡಗು ಜಿಲ್ಲೆಯ ದೇವಾಲಯ ಗ್ರಾಮವಾಗಿದ್ದು, ತಲಕಾವೇರಿಯಿಂದ 7 ಕಿ.ಮೀ. ದೂರದಲ್ಲಿದೆ. ಭಾಗಮಂಡಲದಲ್ಲಿ ಕಾವೇರಿ ನದಿಯ ಜೊತೆ ಅದರ ಎರಡು ಉಪನದಿಗಳಾದ ಸುಜೋತಿ ನದಿ ಮತ್ತು ಕಣ್ಣಿಕೆ ನದಿ ಸೇರಿಕೊಳ್ಳುತ್ತವೆ. ಭಗಂಡೇಶ್ವರ ದೇವಸ್ಥಾನವು ಭಾಗಮಂಡಲದಲ್ಲಿ ಕೆಂಪು ಟೈಲ್ಡ್ ಮತ್ತು ಹಲವು ಮಹಡಿಗಳ ಛಾವಣಿಯೊಂದಿಗೆ ಕೇರಳ ಶೈಲಿಯಲ್ಲಿ ನಿರ್ಮಿಸಲಾದ ಶಿವನಿಗೆ ಅರ್ಪಿತವಾದ ಪ್ರಾಚೀನ ದೇವಾಲಯವಾಗಿದೆ. (ಚಿತ್ರಕೃಫೆ: internet)

    MORE
    GALLERIES

  • 38

    Holiday Plan: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಿ, ಕೊಡಗಿನ ಕೂಲ್ ವೆದರ್‌ನಲ್ಲಿ ಪ್ರವಾಸ ಮಾಡಿ!

    ಮಡಿಕೇರಿಯಿಂದ ಕೇವಲ 7-8 ಕಿ.ಮೀ ದೂರದಲ್ಲಿರುವ ಅಬ್ಬಿ ಜಲಪಾತವು ಕೊಡಗಿನಲ್ಲಿ ತುಂಬಾ ಪ್ರವಾಸಿಗರು ಭೇಟಿ ನೀಡುವ ಸ್ಥಳ. ಕಾಫಿ ತೋಟಗಳ ಮಧ್ಯೆ ಸಣ್ಣದಾಗಿ ಹರಿಯುವ ತೊರೆಯ ಅಬ್ಬಿ ಜಲಪಾತವು ನಮ್ಮನ್ನು ತನ್ನ ಭೋರ್ಗೆರೆವ ಶಬ್ದದಿಂದ ಮೂಕವಿಸ್ಮಿತರನ್ನಾಗಿಸುತ್ತದೆ. ಮಡಿಕೇರಿಯ ಮೊದಲ ಕ್ಯಾಪ್ಟನ್ ನೆನಪಿಗೆ ಅವರ ಮಗಳು ಜೆಸ್ಸಿ ಹೆಸರಿನಲ್ಲಿ ಬ್ರಿಟಿಷರು ಈ ಜಲಪಾತವನ್ನು ಗುರುತಿಸುತ್ತಿದ್ದರು. ಈಗಿನ ಹೆಸರು ಅಬ್ಬಿ ಅಥವಾ ಅಬ್ಬೆ ಎಂದರೆ ಕೊಡವ ಭಾಷೆಯಲ್ಲಿ ಜಲಪಾತ ಎಂದಾಗುತ್ತದೆ. . (ಚಿತ್ರಕೃಫೆ: internet)

    MORE
    GALLERIES

  • 48

    Holiday Plan: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಿ, ಕೊಡಗಿನ ಕೂಲ್ ವೆದರ್‌ನಲ್ಲಿ ಪ್ರವಾಸ ಮಾಡಿ!

    ಬ್ರಹ್ಮಗಿರಿ ಅಭಯಾರಣ್ಯವು ದಕ್ಷಿಣಕ್ಕೆ ಕೇರಳದ ವಯನಾಡು ಮತ್ತು ಉತ್ತರದಲ್ಲಿ ಕರ್ನಾಟಕದ ಕೊಡಗಿನ ಮಧ್ಯೆ ಇದೆ. ಇದು ಪಶ್ಚಿಮ ಘಟ್ಟದಲ್ಲಿದೆ ಮತ್ತು ಬ್ರಹ್ಮಗಿರಿಯು ಅತ್ಯಂತ ಎತ್ತರದ ಪ್ರದೇಶವಾಗಿದೆ. ಅಭಯಾರಣ್ಯವು ಸುಮಾರು ೧೮೧ ಕಿ.ಮೀ ದೂರದಲ್ಲಿದೆ. ಕೊಡಗಿನಿಂದ ಸುಮಾರು 60 ಕಿ.ಮೀ ದೂರ. ಇಲ್ಲಿನ ಅರಣ್ಯವು ದಟ್ಟವಾಗಿದ್ದು ನಿತ್ಯಹರಿದ್ವರ್ಣ ಕಾಡಿನಿಂದ ಕೂಡಿದೆ. ಚಾರಣಿಗರಿಗೆ ಇದು ಅತ್ಯಂತ ಇಷ್ಟವಾದ ಪ್ರದೇಶ. ಬ್ರಹ್ಮಗಿರಿ ಬೆಟ್ಟವನ್ನು ಎರಡೂ ಕಡೆಯಿಂದ ಹತ್ತಬಹುದು. ಕೇರಳದ ಕಡೆಯಿಂದ ಚಾರಣ ಆರಂಭವಾಗುವುದು ತಿರುನೆಲ್ಲಿಯಿಂದ ಮತ್ತು ಕರ್ನಾಟಕದ ಕಡೆಯಿಂದಾದರೆ ಇರುಪ್ಪು ಜಲಪಾತದಿಂದ. ಯಾವ ಕಡೆಯಿಂದ ಚಾರಣ ಮಾಡುವುದಾದರೂ ಕೂಡಾ ಚಾರಣಿಗರು ಪಾರೆಸ್ಟ್ ರೇಂಜ್ ಆಫೀಸರ್ರಿಂದ ಪರವಾನಗಿ ತೆಗೆದುಕೊಳ್ಳವುದು ಅಗತ್ಯ. . (ಚಿತ್ರಕೃಫೆ: internet)

    MORE
    GALLERIES

  • 58

    Holiday Plan: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಿ, ಕೊಡಗಿನ ಕೂಲ್ ವೆದರ್‌ನಲ್ಲಿ ಪ್ರವಾಸ ಮಾಡಿ!

    ಧರ್ಮಶಾಲಾದ ನಂತರ ಭಾರತದಲ್ಲಿ ಎರಡನೇ ಟಿಬೆಟಿಯನ್ ತಾಣ ಬೈಲಕುಪ್ಪೆ. ಕುಶಾಲನಗರದಿಂದ ಇದು ಕೇವಲ 6 ಕಿ.ಮೀ ದೂರದಲ್ಲಿದೆ. ಇಲ್ಲಿ ಎರಡು ಟಿಬೆಟಿಯನ್ ಶಿಬಿರವಿದ್ದು ಲುಗ್ಸುಮ್ ಸಾಮ್ಡುಪ್ಲಿಂಗ್ ಮತ್ತು ಡಿಕ್ಯಿ ಲಾರ್ಸೋಯಿ ಎಂದು ಕರೆಯಲಾಗಿದೆ. ಇಲ್ಲಿ ಸಾವಿರಾರು ಟಿಬೆಟಿಯನ್ನರು ವಾಸಿಸುತ್ತಾರೆ. ಟಿಬೆಟ್ಟನ್ನು ಚೀನೀಯರು ಆಕ್ರಮಿಸಿಕೊಂಡ ನಂತರದಲ್ಲಿ ಟಿಬೆಟಿಯನ್ ಯೋಧರು ಈ ಪ್ರದೇಶಗಳಿಗೆ ಓಡಿಬಂದಿದ್ದಾರೆ. ಇಲ್ಲಿ ಕೃಷಿ ಭೂಮಿಗಳು, ಟಿಬೆಟಿಯನ್ ನಿವಾಸಗಳು, ಪ್ರವಾಸಿಗಳ ಪ್ರಧಾನವಾದ ಟಿಬೆಟ್ ಆಹಾರ ಪದಾರ್ಥಗಳು ಮತ್ತು ಕರಕುಶಲ ಅಂಗಡಿಗಳು ಇಲ್ಲಿದೆ. (ಚಿತ್ರಕೃಫೆ: internet)

    MORE
    GALLERIES

  • 68

    Holiday Plan: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಿ, ಕೊಡಗಿನ ಕೂಲ್ ವೆದರ್‌ನಲ್ಲಿ ಪ್ರವಾಸ ಮಾಡಿ!

    ರಾಜಾ ಸೀಟ್ ಇದು ಮಡಿಕೇರಿ ಪಟ್ಟಣದಲ್ಲಿ ಜನಪ್ರಿಯ ಉದ್ಯಾನ ಮತ್ತು ವೀಕ್ಷಣಾ ಸ್ಥಳ. ಸೂರ್ಯಾಸ್ತದ ವೀಕ್ಷಣೆಗಳಿಗೆ ಅತ್ಯುತ್ತಮವಾಗಿದೆ. ಸೂರ್ಯಾಸ್ತದ ನಂತರ ಸಂಗೀತ ಕಾರಂಜಿ ಆನಂದಿಸಬಹುದಾಗಿದೆ. . ಮಡಿಕೇರಿ ಬಸ್ ನಿಲ್ದಾಣದಿಂದ 1 ಕಿ.ಮಿ ದೂರದಲ್ಲಿ ರಾಜಸೀಟ್ನ ತಾಣ ಅಡಗಿದೆ. ಈ ತಾಣ ಸುಂದರವಾದ ಹೂವಿನ ಉದ್ಯಾನವನವನ್ನು ಒಳಗೊಂಡಿದ್ದು, ಹಸಿರು ಪರ್ವತಗಳು, ಕಣಿವೆಗಳನ್ನು ಹಾಗೂ ಸೂರ್ಯಸ್ತವನ್ನು ವಿಕ್ಷೀಸಲು ಮನೋಹರವಾಗಿರುತ್ತದೆ. (ಚಿತ್ರಕೃಫೆ: internet)

    MORE
    GALLERIES

  • 78

    Holiday Plan: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಿ, ಕೊಡಗಿನ ಕೂಲ್ ವೆದರ್‌ನಲ್ಲಿ ಪ್ರವಾಸ ಮಾಡಿ!

    ನಾಲ್ಕುನಾಡು ಅರಮನೆಯು 18ನೇ ಶತಮಾನದ ಅರಮನೆಯಾಗಿದ್ದು, ಇದನ್ನು ದೊಡ್ಡ ವೀರ ರಾಜೇಂದ್ರ ನಿರ್ಮಿಸಿದ್ದಾರೆ. ಕೊಡಗಿನ ಆಡಳಿತಗಾರರ ವಿರುದ್ಧ ಸಮರ ಸಾರಿದ್ದ ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷ್ ಪಡೆಗಳ ಕಣ್ತಪ್ಪಿಸಿ ರಾಜಮನೆತನದ ಮುಖ್ಯವ್ಯಕ್ತಿಗಳನ್ನು ಸುರಕ್ಷಿತವಾಗಿಡಲು ನಾಲ್ಕುನಾಡು ಅರಮನೆಯನ್ನು ಬಳಸಲಾಯಿತು. ಟಿಪ್ಪು ಸುಲ್ತಾನ್ ನಿರ್ಮಿಸಿದ ಮಡಿಕೇರಿ ಪಟ್ಟಣದ ಹೃದಯಭಾಗದಲ್ಲಿರುವ 16 ನೇ ಶತಮಾನದ ಕೋಟೆಯ ಅವಶೇಷಗಳು ಈಗ ಸರ್ಕಾರಿ ಕಚೇರಿಗಳನ್ನು ಹೊಂದಿವೆ. . (ಚಿತ್ರಕೃಫೆ: internet)

    MORE
    GALLERIES

  • 88

    Holiday Plan: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಿ, ಕೊಡಗಿನ ಕೂಲ್ ವೆದರ್‌ನಲ್ಲಿ ಪ್ರವಾಸ ಮಾಡಿ!

    ದುಬಾರೆ ಆನೆ ಶಿಬಿರವು ಸಂದರ್ಶಕರಿಗೆ ಆನೆಗಳಿಗೆ ಸ್ನಾನ ಮಾಡಿಸಲು ಮತ್ತು ಅವುಗಳಿಗೆ ಆಹಾರ ತಿನ್ನಿಸಲು ಅನುವು ಮಾಡಿಕೊಡುತ್ತವೆ. ಆನೆಗಳ ದೈನಂದಿನ ದಿನಚರಿಯನ್ನು ಹತ್ತಿರದಿಂದ ನೋಡುವ ಉತ್ತಮ ಅವಕಾಶವಾಗಿದೆ. ಈ ಪ್ರದೇಶದ ಸುಮಾರು 150 ಆನೆಗಳಿಗೆ ನೆಲೆಯಾಗಿದೆ, ದುಬಾರೆಯ ಮಾಹುತರು ತಮ್ಮ ಆನೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಮತ್ತು ಆಹಾರ, ಸ್ನಾನ ಇತ್ಯಾದಿಗಳ ಮೂಲಕ ಆನೆಗಳೊಂದಿಗೆ ಸಂದರ್ಶಕರ ಸಂವಾದವನ್ನು ಸಹ ಮಾಡಿಸುತ್ತಾರೆ. (ಚಿತ್ರಕೃಫೆ: internet)

    MORE
    GALLERIES