ಈ ಸಂಬಂಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಮಂಗಳೂರಿನ ಪ್ರಸಿದ್ಧ ವೈದ್ಯೆ ಮತ್ತು ಮುಸ್ಲಿಂ ಯುವಕರ ವಿರುದ್ಧ ದೂರು ದಾಖಲಾಗಿದೆ.
2/ 7
ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ನಡೆಸಿ ಆಯೇಷಾ ಎಂದು ಹೆಸರು ಬದಲಿಸಲಾಗಿತ್ತು. ಮತಾಂತರದ ಬಳಿಕ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಗಳು ಸಹ ಕೇಳಿ ಬಂದಿವೆ.
3/ 7
ಯುವತಿಯನ್ನು ಮತಾಂತರಗೊಳಿಸಿದ ಬಳಿಕ ಆಯೇಷಾ ಎಂದು ಹೆಸರು ಬದಲಿಸಲಾಗಿತ್ತು. ಇದೀಗ ವಿಶ್ವಹಿಂದೂ ಪರಿಷತ್ ಅವರ ಸಹಾಯದ ಮೂಲಕ ಯುವತಿ ದೂರು ದಾಖಲಿಸಿದ್ದಾರೆ
4/ 7
ಕುಲಶೇಖರದ ಮೊಬೈಲ್ ಅಂಗಡಿಯ ಖಲೀಲ್ ಹಾಗೂ ಭದ್ರಾವತಿಯ ಇಮಾಮ್ ಮತ್ತು ಮಂಗಳೂರಿನ ಪ್ರಸಿದ್ಧ ಹೆರಿಗೆ ವೈದ್ಯೆ ಡಾ.ಜಮೀಲಾ ವಿರುದ್ಧ ಮತಾಂತರದ ಆರೋಪ ಕೇಳಿ ಬಂದಿದೆ. (ಸಾಂದರ್ಭಿಕ ಚಿತ್ರ)
5/ 7
ಮೊಬೈಲ್ ಅಂಗಡಿಯ ಖಲೀಲ್ ಪರಿಚಯವಾಗಿ ಆತನ ಸಂಬಂಧಿಕರ ಮನೆಯಲ್ಲಿ ಯುವತಿ ಕೆಲಸ ಮಾಡುತ್ತಿದ್ದರು. ಅಲ್ಲಿ ಒತ್ತಡ ಹಾಕಿ ಖುರಾನ್ ಓದಿಸಿ, ನಮಾಜ್ ಮಾಡಿ ಮತಾಂತರ ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ಆ ಬಳಿಕ ಡಾ.ಜಮೀಲಾರ ಮನೆಯಲ್ಲಿ ಖಲೀಲ್ ಕೆಲಸಕ್ಕೆ ಸೇರಿಸಿದ್ದು, ಅಲ್ಲಿಯೂ ಸಹ ಯುವತಿ ಮೇಲೆ ದೌರ್ಜನ್ಯ ನಡೆದಿರುವ ಆರೋಪ ಕೇಳಿ ಬಂದಿದೆ. ಹಣ ಮತ್ತು ಕೆಲಸದ ಆಮಿಷ ಒಡ್ಡಿ ಮತಾಂತರ ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಯುವತಿ ದೂರಿನ ಹಿನ್ನೆಲೆ ಡಾ.ಜಮೀಲಾ, ಖಲೀಲ್ ಮತ್ತು ಇಮಾಮ್ ವಿರುದ್ಧ ಐಪಿಸಿ 354, 354(ಎ), 506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)