ವಾವರ್ ಮಸೀದಿಗೆ ಹಿಂದೂಗಳು ಹೋಗದಂತೆ ಹಿಂದೂ ಜನ ಜಾಗೃತಿ ಸಮಿತಿ ಮನವಿ ಮಾಡಿದೆ.
2/ 7
ಈಗಾಗಲೇ ಶಬರಿಮಲೆ ವ್ರತ ಆರಂಭವಾಗಿದೆ. ನಾವು ಶಬರಿಮಲೆಗೆ ಹೋಗುವಾಗ ಘೋರ ತಪ್ಪನ್ನು ಮಾಡುತ್ತಿದ್ದೇವೆ ಎಂದು ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಗೌಡ ಹೇಳಿದ್ದಾರೆ.
3/ 7
ಅಲ್ಲಿನ ವಾವರ್ ಮಸೀದಿಗೆ ಹೋಗುವಂತ ಕೆಟ್ಟ ಸಂಪ್ರದಾಯ ಇತ್ತೀಚೆಗೆ ಶುರುವಾಗಿದೆ. ವಾವರ್ ಒಬ್ಬ ಬಾಬರ್ ಆಗಿದ್ದ, ಒಬ್ಬ ಮುಸ್ಲಿಂ ಆಗಿದ್ದನು. ಒಬ್ಬ ಕಳ್ಳನನ್ನು, ದರೋಡೆಕೊರನನ್ನು ಅಯ್ಯಪ್ಪ ಸ್ವಾಮಿಯ ಸ್ನೇಹಿತ ಎಂದು ಬಿಂಬಿಸಲಾಗಿದೆ.
4/ 7
ಅವನ ಘೋರಿಯನ್ನು ಮಸೀದಿಯನ್ನಾಗಿ ಮಾಡಿ ಹಿಂದೂಗಳು ಕೋಟಿಗಟ್ಟಲೇ ಹಣವನ್ನು ಆ ಮಸೀದಿಗೆ ಸುರಿಯುವಂತದ್ದು ಹಿಂದೂ ಧರ್ಮಕ್ಕೆ, ಶಬರಿಮಲೆಯ ಅಯ್ಯಪ್ಪನಿಗೆ ಮಾಡಿದ ಅಪಮಾನವಾಗಿದೆ ಎಂದು ಮೋಹನ್ ಗೌಡ ಹೇಳಿದ್ದಾರೆ.
5/ 7
ಕೇರಳ (Kerala) ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ವಿಶ್ವ ವಿಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿದೆ.
6/ 7
ಶಬರಿಮಲೆ ಎಂದೊಡನೆ ಎಲ್ಲರಿಗೂ ಅಯ್ಯಪ್ಪ ಸ್ವಾಮಿಯ ಹೆಸರು ತಟ್ಟನೆ ಮನಸ್ಸಿಗೆ ಬರುವುದು ಖಂಡಿತ. ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಈ ಪವಿತ್ರ ಯಾತ್ರಾ ಸ್ಥಳವು ಕೇರಳ ರಾಜ್ಯದ ಪತನಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ.
7/ 7
ಮಕರ ಸಂಕ್ರಾಂತಿಯ ರಾತ್ರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಳಿ ಆಕಾಶದಲ್ಲಿ ಒಂದು ಬೆಳಕು ಅದ್ಭುತವಾಗಿ ಗೋಚರಿಸುತ್ತದೆ. ದಟ್ಟ ಕತ್ತಲೆಯಲ್ಲೂ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ.