Instagram Love: ಹೈದರಾಬಾದ್ ಮೂಲದ ಮುಸ್ಲಿಂ ಯುವಕನನ್ನ ಮದ್ವೆಯಾದ ಕೊಪ್ಪಳದ ಹಿಂದೂ ಯುವತಿ
ರಾಜ್ಯದ ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ಗಿರಿ ಸದ್ದು ಮಾಡುತ್ತಿದೆ. ಅನ್ಯಕೋಮಿನ ಜೋಡಿ ಜೊತೆಯಾಗಿ ಕಾಣಿಸಿಕೊಂಡ್ರೆ ಅಲ್ಲಿ ಆ ಸಮುದಾಯವರು ಕಾಣಿಸಿಕೊಂಡು ವಿಚಾರಣೆ ನಡೆಸುತ್ತಾರೆ.
1/ 8
ಕೊಪ್ಪಳ ಜಿಲ್ಲೆಯಲ್ಲೊಂದು ಇನ್ಸ್ಟಾಗ್ರಾಂ ಲವ್ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರ ಪ್ರೀತಿಗೆ ಇನ್ಸ್ಟಾಗ್ರಾಂ ಸೇತುವೆಯಾಗಿ ಕೆಲಸ ಮಾಡಿದೆ. (ಸಾಂದರ್ಭಿಕ ಚಿತ್ರ)
2/ 8
ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಇನ್ಸ್ಟಾಗ್ರಾಂ ಲವ್ ಪ್ರಕರಣವೊಂದು ದಾಖಲಾಗಿದೆ. ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ.
3/ 8
ಹೈದರಾಬಾದ್ ಮೂಲದ ಯುವಕ ಶೇಖ್ ವಹಿದ್ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲದ ಯುವತಿ ಮದುವೆ ಮುಸ್ಲಿಂ ಸಂಪ್ರದಾಯದಂತೆ ನಡೆದಿದೆ.
4/ 8
ಡಿಸೆಂಬರ್ 16ರಂದು ಯುವತಿ ಮನೆಯಿಂದ ನಾಪತ್ತೆಯಾಗಿದ್ದಳು. ನಾಪತ್ತೆಯಾದ ಕುರಿತು ಯುವತಿಯ ತಂದೆ ಕುಷ್ಟಗಿ ಠಾಣೆಯಲ್ಲಿ ನಾಪತ್ತೆಯಾಗಿರುವ ದೂರು ದಾಖಲಿಸಿದ್ದರು. (ಸಾಂದರ್ಭಿಕ ಚಿತ್ರ)
5/ 8
ಮದುವೆಯಾದ ಇಬ್ಬರನ್ನು ಕುಷ್ಟಗಿ ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು. ಇತ್ತ ಯುವತಿ ಪೋಷಕರು ಸಹ ಠಾಣೆಗೆ ಆಗಮಿಸಿದ್ದರು. (ಸಾಂದರ್ಭಿಕ ಚಿತ್ರ)
6/ 8
ಇಬ್ಬರು ವಯಸ್ಕರಾಗಿದ್ದು, ಯುವತಿ ತಾನೇ ಒಪ್ಪಿಕೊಂಡು ಇಸ್ಲಾಂ ಧರ್ಮದ ಪ್ರಕಾರ ಮದುವೆಯಾಗಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
7/ 8
ವಿಚಾರಣೆ ಬಳಿಕ ಪೊಲೀಸರು ಜೋಡಿಯನ್ನು ವಾಪಸ್ ಕಳುಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)
8/ 8
ಇನ್ನು ಇಬ್ಬರಿಗೂ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿತ್ತು. ಪರಿಚಯ ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಬದಲಾಗಿತ್ತು. (ಸಾಂದರ್ಭಿಕ ಚಿತ್ರ)
First published: