Hijab Controversy: ವಿಜಯಪುರ ಜಿಲ್ಲೆಗೆ ವ್ಯಾಪಿಸಿದ ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು
Hijab Controversy: ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ ವಿವಾದ ಉಡುಪಿ ಜಿಲ್ಲೆಯಿಂದ ವಿಜಯಪುರಕ್ಕೂ ತಲುಪಿದೆ. ಹಿಜಾವ್ ವಿರೋಧಿಸಿ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬಂದಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಶಾಂತೇಶ್ವರ ಪಿಯು ಹಾಗೂ ಪದವಿ ಕಾಲೇಜಿಗೆ ವಿದ್ಯಾರ್ಥಿಗಳು ಕೇಸರಿ ಶಾಲು ಸಮೇತ ಇಂದು ಆಗಮಿಸಿದ್ದಾರೆ.
2/ 7
ಇಂದು ಬೆಳಗ್ಗೆ ಕೇಸರಿ ಶಾಲು ಸಹಿತ ಆಗಮಿಸಿದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಮುಂದಾಗಿದ್ದರು. ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ಉಪನ್ಯಾಸಕರು ತರಗತಿಯಿಂದ ಹೊರಗೆ ಕಳುಹಿಸಿದ್ದಾರೆ.
3/ 7
ಇನ್ನೂ ಕಾಲೇಜಿನಲ್ಲಿ ಗೊಂದಲ ಸೃಷ್ಟಿಯಾಗದಿರಲಿ ಎಂದು ಆಡಳಿತ ಮಂಡಳಿ ಇವತ್ತು ರಜೆ ಘೋಷಿಸಿದೆ. ಈ ಸಂಬಂಧ ಕಾಲೇಜು ಅಡಳಿತ ಮಂಡಳಿ ಸಭೆ ನಡೆಸುತ್ತಿದ್ದು, ಮುಂದಿನ ನಿರ್ಧಾರದ ಕುರಿತು ಚರ್ಚೆ ನಡೆಸುತ್ತಿದೆ.
4/ 7
ಉಡುಪಿ ಜಿಲ್ಲೆಯ ಕುಂದಾಪುರದ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿಗಳು ಸಹ ಕೇಸರಿ ಶಾಲು ಧರಿಸಿ ತೆರಳುತ್ತಿದ್ದರು. ರಸ್ತೆಯಲ್ಲಿಯೇ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಕಾಲೇಜಿಗೆ ತೆರಳುತ್ತಿದ್ದಾರೆ.
5/ 7
ಕೇಸರಿ ಶಾಲು ಧರಿಸಿ ಬರುತ್ತಿರುವ ವಿದ್ಯಾರ್ಥಿಗಳನ್ನ ಪ್ರಾಂಶುಪಾಲ ಗಣೇಶ್ ಪ್ರವೇಶದ್ವಾರದಲ್ಲಿ ತಡೆದಿದ್ದಾರೆ. ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಶಾಲ್ ಗೆ ಅನುಮತಿ ನೀಡಿಲ್ಲ ಎಂದು ತಡೆದಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು ಕಾಲೇಜಿನೊಳಗೆ ಹೋಗಿದ್ದಾರೆ.
6/ 7
ಹಿಜಾಬ್ ಸಂಬಂಧ ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋಗಿದ್ದು, ಅರ್ಜಿಯ ವಿಚಾರಣೆ ನಾಳೆ ಬರಲಿದೆ.
7/ 7
ಇತ್ತ ಹಿಜಾಬ್ ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.