ಕೋಲಾರ ಜಿಲ್ಲೆಯಿಂದ ಆರಂಭಗೊಂಡ ಜೆಡಿಎಸ್ ಪಂಚರತ್ನ ಯಾತ್ರೆಗೆ ಮಳೆ ಅಡ್ಡಿಯುಂಟು ಮಾಡಿತ್ತು. ಮಳೆ ಕಡಿಮೆಯಾದ್ಮೇಲೆ ಅದ್ಧೂರಿಯಾಗಿ ಜೆಡಿಎಸ್ ಯಾತ್ರೆ ಶುರುವಾಗಿದೆ.
2/ 15
ಕೋಲಾರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಭಾಗದಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದೆ.
3/ 15
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ರಥಯಾತ್ರೆಗೆ ಪುತ್ರ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಾಥ್ ನೀಡುತ್ತಿದ್ದಾರೆ.
4/ 15
ಈ ಎಲ್ಲರ ನಾಯಕರ ಜೊತೆ ಸ್ಥಳೀಯ ನಾಯಕರು ಹಾಗೂ ವಿಧಾನಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಕುಮಾರಸ್ವಾಮಿ ಅವರಿಗೆ ಸಾಥ್ ಕೊಡುತ್ತಿದ್ದಾರೆ.
5/ 15
ಆಯಾ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡುವ ಮೂಲಕ ಕುಮಾರಸ್ವಾಮಿ ಮತದಾರರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದ್ದಾರೆ.
6/ 15
ಈ ಎಲ್ಲಾ ಬೆಳವಣಿಗೆಗಳ ನಡುವೆ ಕುಮಾರಸ್ವಾಮಿ ಅವರಿಗೆ ಸ್ಥಳೀಯರು ಹಾಕುತ್ತಿರುವ ಬಗೆ ಬಗೆಯ ಹಾರಗಳನ್ನು ಹಾಕಿ ಬರಮಾಡಿಕೊಳ್ಳಲಾಗುತ್ತಿದೆ.
7/ 15
ಮೊದಲಿಗೆ ಹಾರ ಅಂದ್ರೆ ಅದು ಹೂವಿನಿಂದ ಕೂಡಿರುತ್ತದೆ ಎಂಬ ಮಾತಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೇಬು ಹಾರ ಹೆಚ್ಚು ಸದ್ದು ಮಾಡಿತ್ತು.
8/ 15
ಇದೀಗ ಹಾರ ಅಂದರೆ ಹೀಗೂ ಇರುತ್ತೆ ಎಂದು ಜೆಡಿಎಸ್ ಕಾರ್ಯಕರ್ತರು ಹೊಸ ವ್ಯಾಖ್ಯಾನವನ್ನು ನೀಡಿದ್ದಾರೆ. ಕುಮಾರಸ್ವಾಮಿ ಅವರು ಭೇಟಿ ನೀಡಿದ ಆ ಭಾಗದ ವಿಶೇಷ ಹಣ್ಣು, ತರಕಾರಿ, ಸೊಪ್ಪುಗಳಿಂದ ಮಾಡಲ್ಪಟ್ಟ ಹಾರಗಳನ್ನು ಹಾಕಲಾಗುತ್ತಿದೆ.
9/ 15
ಹಾರದ ವಿಷಯಯಲ್ಲಿ ಜೆಡಿಎಸ್ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
10/ 15
ಜೆಡಿಎಸ್ ಪಂಚರತ್ನ ಯಾತ್ರೆ ಸದ್ಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಪ್ರವೇಶ ಮಾಡಿದೆ. ಇಲ್ಲಿ ಮತ್ಯಾವ ಹೊಸ ಹೊಸ ಹಾರಗಳು ಬರುತ್ತೆ ಎಂದು ಜನರು ಕುತೂಹಲದಿಂದ ಕಾಯುತ್ತಿದ್ದಾರೆ.
11/ 15
ಡ್ಯಾಗನ್ ಫ್ರುಟ್, ಕಬ್ಬು, ನವಿಲುಗರಿ, ಕುಂಬಳಕಾಯಿ, ತೊಂಡೆಕಾಯಿ, ಎಳನೀರು, ಹೊಂಬಾಳೆ, ಕೋತಂಬರಿ ಸೊಪ್ಪಿನ ಸೇರಿದಂತೆ ಬಗೆ ಬಗೆಯ ಹಾರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
12/ 15
ಶೀಘ್ರದಲ್ಲಿಯೇ ಚುನಾವಣೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುವುದು ಎಂದು ಜೆಡಿಸ್ ಹೇಳಿದೆ.
13/ 15
ಮಾಜಿ ಪ್ರಧಾನಿ ದೇವೇಗೌಡರು ನಮ್ಮ ಪಕ್ಷ ಪ್ರಾಬಲ್ಯ ಇರೋ ಕ್ಷೇತ್ರಗಳಲ್ಲಿ ಮಾತ್ರ ಯಾತ್ರೆ ನಡೆಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
14/ 15
ಹೆಚ್ಡಿಡಿ ಅವರ ಸಲಹೆ ಮೇರೆಗೆ ಹಳೆ ಮೈಸೂರು ಭಾಗದಲ್ಲಿಯೇ ಯಾತ್ರೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ.
15/ 15
ಇತ್ತ ಕಾಂಗ್ರೆಸ್ ಬಸ್ ಯಾತ್ರೆ ಮೂಲಕ ಜೆಡಿಎಸ್ಗೆ ಟಕ್ಕರ್ ನೀಡಲು ಸಿದ್ಧವಾಗಿದೆ. (ಸಾಂದರ್ಭಿಕ ಚಿತ್ರ)