Rain: ಗಾಳಿ-ಮಳೆಗೆ ಧರೆಗುರುಳಿದ ಬೃಹತ್ ಮರ: 100ಕ್ಕೂ ಅಧಿಕ ಗಿಳಿಗಳ ಸಾವು
ಕಳೆದ ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಗುಡುಗು, ಸಿಡಿಲು ಸಹಿತ ಜೋರು ಗಾಳಿ ಬೀಸುತ್ತಿರುವ ಪರಿಣಾಮ ಪ್ರಾಣ ಹಾನಿ ಸಹ ಸಂಭವಿಸುತ್ತಿವೆ.
ಶುಕ್ರವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಆಲಿಕಲ್ಲು ಮಳೆಯಾಗಿದೆ. ಆಲಿಕಲ್ಲು ಮಳೆಗೆ ತಾಲೂಕಿನಲ್ಲಿ ಸುಮಾರು 500ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಸುಮಾರು 10 ಎಕರೆ ಬಾಳೆತೋಟ ಸಂಪೂರ್ಣವಾಗಿ ನೆಲಕಚ್ಚಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
2/ 8
ಶ್ರೀರಂಗಪಟ್ಟಣದ ನರಸಿಂಹ ದೇವಸ್ಥಾನದ ಆವರಣಲ್ಲಿ ಬೃಹತ್ ಮರವೊಂದಿತ್ತು. ಶುಕ್ರವಾರದ ಮಳೆಗೆ ಮರ ಉರುಳಿದಿದ್ದು, ಅದರಲ್ಲಿ ವಾಸವಾಗಿದ್ದ 100ಕ್ಕೂ ಗಿಳಿಗಳು ಸಾವನ್ನಪ್ಪಿವೆ. ಗ್ರಾಮಸ್ಥರು ಸಂಪ್ರದಾಯ ಬದ್ಧವಾಗಿ ಗಿಳಿಗಳ ಅಂತ್ಯಕ್ರಿಯೆ ನೆರೆವೇರಿಸಿದ್ದಾರೆ.
3/ 8
ಇನ್ನೂ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ 400ಕ್ಕೂ ಅಧಿಕ ಮರಗಳು ಧರೆಗುರುಳಿವೆ. ಗ್ರಾಮದ ಹೊರವಲಯದಲ್ಲಿ ಸುಮಾರು 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ಈ ಹಿನ್ನೆಲೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.
4/ 8
ಇದೇ ಗ್ರಾಮದ ನಾಲ್ಕೈದು ಮನೆಗಳ ಮೇಲ್ಛಾವಣೆ ಸಹ ಹಾರಿ ಹೋಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಶ್ವೇತ ಎನ್ ರವೀಂದ್ರ, ಹಾನಿಯ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ವರದಿ ನೀಡಿದ್ದು, ಪರಿಶೀಲನೆ ನಡೆಸಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
5/ 8
ಯಾದಗಿರಿ ಜಿಲ್ಲೆಯಲ್ಲಿ ಕಳೆದ ವಾರದಿಂದ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ. ಯಾದಗಿರಿ ಜಿಲ್ಲೆಯ ಬಿರನಾಳ, ಬಬಲಾದ, ನಾಯ್ಕಲ್, ಮುಷ್ಟುರು ಸೇರಿದಂತೆ ಮೊದಲಾದ ಕಡೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಹಾನಿಯಾಗಿದೆ. (ಸಾಂದರ್ಭಿಕ ಚಿತ್ರ)
6/ 8
ಭಾನುವಾರ ರಾಮನಗರ ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ತುಮಕೂರು ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ , ಶಿವಮೊಗ್ಗ ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ. (ಸಾಂದರ್ಭಿಕ ಚಿತ್ರ)
7/ 8
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮೇ 4 ರಂದು ಅಂಡಮಾನ್ ಸಮುದ್ರದಲ್ಲಿ ಚಂಡಮಾರುತದ ಪರಿಚಲನೆ ವ್ಯವಸ್ಥೆಯು ರೂಪುಗೊಳ್ಳುತ್ತದೆ, ನಂತರ ಮೇ 5 ರಂದು ಕಡಿಮೆ ಒತ್ತಡವು ಉಂಟಾಗುತ್ತದೆ ಮತ್ತು ಇದರ ಪರಿಣಾಮವಾಗಿ ಗರಿಷ್ಠ ತಾಪಮಾನವು ಕುಸಿಯುತ್ತದೆ. (ಸಾಂದರ್ಭಿಕ ಚಿತ್ರ)
8/ 8
ಭಾರತೀಯ ಹವಾಮಾನ ಇಲಾಖೆ ಮೇ 2 ರಿಂದ ರಾಜಸ್ಥಾನ, ದೆಹಲಿ, ಪಂಜಾಬ್ ಮತ್ತು ಹರಿಯಾಣದಾದ್ಯಂತ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ . (ಸಾಂದರ್ಭಿಕ ಚಿತ್ರ)