Bengaluru Rain: ಮತ್ತೆ ಮಳೆಗೆ ಬೆಚ್ಚಿದ ಬೆಂಗಳೂರು; ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ!
ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಭಾರೀ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಸಂಜೆ ಸುರಿದ ಮಳೆಗೆ ಬೆಂಗಳೂರಿನ ಸುಲ್ತಾನ್ ಪೇಟೆ ರಸ್ತೆ ಜಲಾವೃತಗೊಂಡಿದೆ. ಸುಲ್ತಾನ್ ಪೇಟೆ ರಸ್ತೆಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ನಿಂತಿದ್ದು, ಜನರು ಹಾಗೂ ವಾಹನ ಓಡಾಡಲು ಪರದಾಡುವಂತಾಗಿದೆ.
ಸತತ ಮಳೆಯಿಂದಾಗಿ ಸುಮಾರು 1 km ಉದ್ದದ ರಸ್ತೆ ಜಲಾವೃತಗೊಂಡಿದ್ದು, ಚಿಕ್ಕಪೇಟೆಯಿಂದ ಕಾಟನ್ ಪೇಟೆಗೆ ಸಂಪರ್ಕ ಕಲ್ಪಿಸುವ ಸುಲ್ತಾನ್ ಪೇಟೆ ರಸ್ತೆ ಇದಾಗಿದೆ.
2/ 8
ಎಂದಿನಂತೆ ಕೆಲ ಸೆಂಟಿಮೀಟರ್ ಮಳೆಗೆ ತತ್ತರಿಸಿ ಹೋಗುವ ಬಿಳೇಕಹಳ್ಳಿ, ಬೊಮ್ಮನಹಳ್ಳಿ ಭಾಗದ ರಸ್ತೆಗಳು ಇದೀಗ ಸುರಿದ ದಿಢೀರ್ ಮಳೆಗೆ ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ.
3/ 8
ಬೆಂಗಳೂರು-ಬನ್ನೇರುಘಟ್ಟ ಮುಖ್ಯ ರಸ್ತೆಯ ಬಿಳೇಕಳ್ಳಿ ಭಾಗದ ಕೆಲ ಬಡಾವಣೆಗಳು ಮಳೆ ನೀರು ಆವರಿಸಿದ್ದರಿಂದ ಜಲಾವೃತವಾಗಿವೆ.
4/ 8
ರಸ್ತೆಯಲ್ಲಿ ಓಡಾಡುವ ಕಾರು, ಆಟೋ ದ್ವಿಚಕ್ರ ವಾಹನಗಳಂತೂ ಅರ್ಧಂಬರ್ಧ ಮುಳುಗಿ ಸಂಚಾರಕ್ಕೆ ಮಳೆ ಅಡ್ಡಿಪಡಿಸಿದೆ. ಅದರಲ್ಲೂ ಅನುಗ್ರಹ ಬಡಾವಣೆಯ ತಗ್ಗು ಪ್ರದೇಶಗಳಿಗೆ ನೀರು ಹರಿದು ಮತ್ತೆ ಜನರು ಭೀತಿಗೊಳಗಾಗಿದ್ದಾರೆ.
5/ 8
ರಾಜಕಾಲುವೆಗಳ ಒತ್ತುವರಿ ಕೆರೆ ಹಳ್ಳ ಕೊಳ್ಳಗಳಲ್ಲಿ ಅಕ್ರಮ ಮನೆಗಳ ನಿರ್ಮಾಣದಿಂದ ಮಳೆ ನೀರು ಎತ್ತ ಹರಿಯಲು ಅಸಾಧ್ಯವಾದ ವಾತಾವರಣ ಇರುವುದರಿಂದ ಮಳೆ ಬಂದರೆ ಬೊಮ್ಮನಹಳ್ಳಿ ಬಿಳೇಕಹಳ್ಳಿ ಹುಳಿಮಾವು ಅರಕೆರೆಯ ಭಾಗಗಳಲ್ಲಿ ಜೀವ ಕೈಲಿಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
6/ 8
ಹಲವೆಡೆ ರಸ್ತೆಗಳು ಮಳೆಗೆ ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ. ಬೆಂಗಳೂರು-ಬನ್ನೇರುಘಟ್ಟ ಮುಖ್ಯ ರಸ್ತೆಯ ಬಿಳೇಕಳ್ಳಿ ಭಾಗದ ಕೆಲ ಬಡಾವಣೆಗಳು ಮಳೆ ನೀರು ಆವರಿಸಿದ್ದರಿಂದ ಜಲಾವೃತವಾಗಿವೆ.
7/ 8
ರಸ್ತೆಯಲ್ಲಿ ಓಡಾಡುವ ಕಾರು, ಆಟೋ ದ್ವಿಚಕ್ರ ವಾಹನಗಳಂತೂ ಅರ್ಧಂಬರ್ಧ ಮುಳುಗಿ ಸಂಚಾರಕ್ಕೆ ಮಳೆ ಅಡ್ಡಿಪಡಿಸಿದೆ. ಅದರಲ್ಲೂ ಅನುಗ್ರಹ ಬಡಾವಣೆಯ ತಗ್ಗು ಪ್ರದೇಶಗಳಿಗೆ ನೀರು ಹರಿದು ಮತ್ತೆ ಜನರು ಭೀತಿಗೊಳಗಾಗಿದ್ದಾರೆ.
8/ 8