Bengaluru Rain: ರಾಜಧಾನಿಯಲ್ಲಿ ಮಳೆಯೋ ಮಳೆ; ಮತ್ತೆ ಮುಳುಗಡೆ ಭೀತಿಯಲ್ಲಿ ಬೆಂಗಳೂರು!
ಬೆಂಗಳೂರಿನಲ್ಲಿ ಮತ್ತೆ ಭಾರೀ ಮಳೆಯಾಗಿದ್ದು, ಮೆಜೆಸ್ಟಿಕ್, ಕೆ ಆರ್ ಸರ್ಕಲ್, ಕೆ ಆರ್ ಮಾರುಕಟ್ಟೆ, ಚಿಕ್ಕಪೇಟೆ, ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಸೇರಿದಂತೆ ಹಲವೆಡೆ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರೀ ಮಳೆಗೆ ವಿಠಲ ಮಲ್ಯ ರಸ್ತೆ ಜಲಾವೃತಗೊಂಡಿದೆ. ವೈದೇಹಿ ಆಸ್ಪತ್ರೆ ಮುಂಭಾಗದಲ್ಲಿ ಕೂಡ ನೀರು ನಿಂತಿದೆ. ಕಾರ್ಪೋರೇಷನ್ ಸರ್ಕಲ್ ಸುತ್ತಮುತ್ತ ಮಳೆಯಾಗಿದೆ.
2/ 7
ಅರ್ಧಗಂಟೆಯೂ ಹೆಚ್ಚು ಕಾಲ ಸುರಿದ ಭಾರೀ ಮಳೆಗೆ ಸಿಲುಕು ಜನರು ಪರದಾಡುವಂತಾಯ್ತು. ಮಳೆಯಿಂದಾಗಿ ಮನೆಗಳಿಗೆ ಹೋಗಲು ಸವಾರರು ಹರಸಾಹಸಪಟ್ಟಿದ್ದಾರೆ.
3/ 7
ಕೆ ಆರ್ ಪುರಂ ಅಪಾರ್ಟ್ ಮೆಂಟ್ ಒಳಗೆ ಮಳೆ ನೀರು ನುಗ್ಗಿದೆ. ಬೇಸ್ ಮೆಂಟ್ ಜಾಗ ಜಲಾವೃತಗೊಂಡಿದೆ. ಬೇಸ್ ಮೆಂಟ್ ನಲ್ಲಿರುವ ಬೈಕ್, ಕಾರು ನೀರಿನಲ್ಲಿ ಮುಳುಗುವ ಭೀತಿ ಎದುರಾಗಿದೆ.
4/ 7
ಎಂದಿನಂತೆ ಕೆಲ ಸೆಂಟಿಮೀಟರ್ ಮಳೆಗೆ ತತ್ತರಿಸಿ ಹೋಗುವ ಬಿಳೇಕಹಳ್ಳಿ, ಬೊಮ್ಮನಹಳ್ಳಿ ಭಾಗದ ರಸ್ತೆಗಳು ಇದೀಗ ಸುರಿದ ದಿಢೀರ್ ಮಳೆಗೆ ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ.
5/ 7
ಹಲವೆಡೆ ರಸ್ತೆಗಳು ಮಳೆಗೆ ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ. ಕೆಲ ಬಡಾವಣೆಗಳು ಮಳೆ ನೀರು ಆವರಿಸಿದ್ದರಿಂದ ಜಲಾವೃತವಾಗಿವೆ.
6/ 7
ರಸ್ತೆಯಲ್ಲಿ ಓಡಾಡುವ ಕಾರು, ಆಟೋ ದ್ವಿಚಕ್ರ ವಾಹನಗಳಂತೂ ಅರ್ಧಂಬರ್ಧ ಮುಳುಗಿ ಸಂಚಾರಕ್ಕೆ ಮಳೆ ಅಡ್ಡಿಪಡಿಸಿದೆ. ತಗ್ಗು ಪ್ರದೇಶಗಳಿಗೆ ನೀರು ಹರಿದು ಮತ್ತೆ ಜನರು ಭೀತಿಗೊಳಗಾಗಿದ್ದಾರೆ.
7/ 7
ರಾಜಕಾಲುವೆಗಳ ಒತ್ತುವರಿ ಕೆರೆ ಹಳ್ಳ ಕೊಳ್ಳಗಳಲ್ಲಿ ಅಕ್ರಮ ಮನೆಗಳ ನಿರ್ಮಾಣದಿಂದ ಮಳೆ ನೀರು ಎತ್ತ ಹರಿಯಲು ಅಸಾಧ್ಯವಾದ ವಾತಾವರಣ ಇರುವುದರಿಂದ ಮಳೆ ಬಂದರೆ ಒತ್ತುವರಿ ಜಾಗದಲ್ಲಿರೋ ಮನೆಗಳಿಗೆ ನುಗ್ಗುತ್ತಿದೆ.
First published:
17