ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಮನೆ ಮೇಲೆ ಗುಡ್ಡ ಜರಿದು ಇಬ್ಬರು ಮಕ್ಕಳು ಮೃತಪಟ್ಟಿದ್ದು, ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ದಕ್ಷಿಣ ಕನ್ನಡ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪಕ್ಕದಲ್ಲಿ ಹರಿಯುವ ದರ್ಪಣ ತೀರ್ಥ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿ ಎನ್ನುವಂತೆ ರೌದ್ರಾವತಾರದಲ್ಲಿ ಹರಿದ ಪರಿಣಾಮ ನದಿ ನೀರು ಆದಿ ಸುಬ್ರಹ್ಮಣ್ಯ ಕ್ಷೇತ್ರವನ್ನು ಭಾಗಶಃ ಮುಳುಗಿಸಿದೆ.
ಹರಿಹರಪಳ್ಳತ್ತಡ್ಕ ಪೇಟೆಯಲ್ಲಿ ಹೋಟೆಲ್ ನಡೆಸಿಕೊಂಡಿದ್ದ ಪ್ರಕಾಶ್ ಎನ್ನುವವರಿಗೆ ಸೇರಿದ ಕಟ್ಟಡ ಸಂಪೂರ್ಣವಾಗಿ ನದಿ ಪಾಲಾಗಿದೆ. 12 ಗಂಟೆವರೆಗೆ ಇದ್ದ ಹೋಟೆಲ್ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ನಾಮಾವಶೇಷವಿಲ್ಲದಂತಾಗಿದೆ. ಹರಿಹರಪಳ್ಳತ್ತಡ್ಕ ಹೊಳೆಯ ಪಕ್ಕದಲ್ಲಿರುವ ಹಲವು ಮನೆ ಹಾಗು ಅಂಗಡಿಗೆ ನುಗ್ಗಿದ ಪ್ರವಾಹದ ನೀರು ಆ ಭಾಗದ ಎಲ್ಲಾ ಅಂಗಡಿಗಳಿಗೆ ಭಾರೀ ನಷ್ಟ ಉಂಟು ಮಾಡಿದೆ.