Raichur Rain: ಮಹಾಮಳೆಗೆ ನಲುಗಿದ ರಾಯಚೂರು: ಭತ್ತ, ಹತ್ತಿ ಬೆಳೆ ನಾಶ, ಕಂಗಾಲಾದ ರೈತ
ಭಾರಿ ಮಳೆಗೆ ಇಡೀ ರಾಯಚೂರು ಜಿಲ್ಲೆ ತತ್ತರಿಸಿ ಹೋಗಿದೆ. ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾದ ಹತ್ತಿ, ಭತ್ತ ಸಂಪೂರ್ಣವಾಗಿ ನಾಶವಾಗಿದೆ. ಹತ್ತಿ ಬೆಳೆಯಲ್ಲಿ ಮೊಣಕಾಲಿನವರೆಗೂ ನೀರು ನಿಂತು ಹತ್ತಿ ಕಾಯಿ ಕಟ್ಟುವ ಹಂತದಲ್ಲಿ ಹಾಳಾಗಿದೆ. ಭತ್ತದ ಬೆಳೆಯು ನೆಲಕ್ಕೊರಗಿದೆ
ಬಿಸಿಲುನಾಡು ರಾಯಚೂರು ಈಗ ಸಂಪೂರ್ಣವಾಗಿ ಮಲೆನಾಡಿನಂತಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಅತ್ಯಧಿಕ ಮಳೆಯಾಗಿದೆ.
2/ 10
ವಾಡಿಕೆಯಂತೆ 584 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಆಗಿದ್ದು 768 ಮಿಲಿ ಮೀಟರ್ ಮಳೆ. ಇನ್ನೂ ಕಳೆದ ಒಂದು ವಾರದಲ್ಲಿ ವಾಡಿಕೆಯಂತೆ 30 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆಗಿದ್ದು, 64 ಮಿಲಿ ಮೀಟರ್ ಮಳೆಯಾಗಿದೆ.
3/ 10
ನಿನ್ನೆ ಒಂದೇ ದಿನ ವಾಡಿಕೆಯಂತೆ 4 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಆಗಿದ್ದು 17 ಮಿಲಿ ಮೀಟರ್ ಮಳೆಯಾಗಿದೆ
4/ 10
ಭಾರೀ ಮಳೆಗೆ ಇಡೀ ಜಿಲ್ಲೆ ತತ್ತರಿಸಿದೆ. ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾದ ಹತ್ತಿ, ಭತ್ತ ಸಂಪೂರ್ಣವಾಗಿ ನಾಶವಾಗಿದೆ
5/ 10
ಹತ್ತಿ ಬೆಳೆಯಲ್ಲಿ ಮೊಣಕಾಲಿನವರೆಗೂ ನೀರು ನಿಂತು ಹತ್ತಿ ಕಾಯಿ ಕಟ್ಟುವ ಹಂತದಲ್ಲಿ ಹಾಳಾಗಿದೆ. ಭತ್ತದ ಬೆಳೆಯು ನೆಲಕ್ಕೊರಗಿದೆ
6/ 10
ಜಿಲ್ಲೆಯ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಹಲವು ಕಡೆ ರಸ್ತೆ ಸಂಪರ್ಕ ಕಡಿತವಾಗಿದೆ.
7/ 10
ಈ ಮಧ್ಯೆ ಮಸ್ಕಿಯಲ್ಲಿ ಬಹಿರ್ದೆಸೆಗೆ ಹೋದ ವ್ಯಕ್ತಿಗಳಿಬ್ಬರಲ್ಲಿ ಜಲೀಲ ಎಂಬುವವರು ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ
8/ 10
ಆದರೆ, ಚನ್ನಬಸಪ್ಪ ಎಂಬುವವರು ಕೊಚ್ಚಿಕೊಂಡು ಹೋಗಿದ್ದಾರೆ. ಈ ಎಲ್ಲಾ ದೃಶ್ಯಗಳು ಜಿಲ್ಲೆಯ ಮಳೆಯ ರುದ್ರನರ್ತನಕ್ಕೆ ಸಾಕ್ಷಿಯಾಗಿವೆ